ಕೇಜ್ರಿ ಅಸಮಾಧಾನ ಬೆನ್ನಲ್ಲೇ ದೆಹಲಿ ವಿಧಾನಸಭೆ ಮತದಾನದ ಅಂಕಿ-ಅಂಶ ಪ್ರಕಟಿಸಿದ ಚುನಾವಣಾ ಆಯೋಗ!

ದೆಹಲಿ ವಿಧಾನಸಭಾ ಚುನಾವಣೆಗೆ ಒಟ್ಟು ಶೇಕಡಾ 62.59ರಷ್ಟು ಮತದಾನವಾಗಿದೆ ಎಂದು ದೆಹಲಿ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರಣಬೀರ್ ಸಿಂಗ್ ಭಾನುವಾರ ತಿಳಿಸಿದ್ದಾರೆ.
ಚುನಾವಣಾ ಆಯೋಗ
ಚುನಾವಣಾ ಆಯೋಗ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಒಟ್ಟು ಶೇಕಡಾ 62.59ರಷ್ಟು ಮತದಾನವಾಗಿದೆ ಎಂದು ದೆಹಲಿ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರಣಬೀರ್ ಸಿಂಗ್ ಭಾನುವಾರ ತಿಳಿಸಿದ್ದಾರೆ.

ಚುನಾವಣಾ ಆಯೋಗವು  ಅಂತಿಮ ಮತದಾನದ ಪ್ರಮಾಣ ಘೋಷಣೆಯನ್ನು ವಿಳಂಬ ಮಾಡುತ್ತಿದೆ ಎಂಬ ಎಎಪಿ ಆರೋಪವನ್ನು ತಳ್ಳಿಹಾಕಿದ ಸಿಂಗ್, ಈ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮೊಂದಿಗೆ  ನಿಖರವಾದ ಅಂಕಿಅಂಶವನ್ನು ಹಂಚಿಕೊಳ್ಳಲು ನಾವು ಬಯಸಿದ್ದೇವೆ. ನಮ್ಮ ಅಧಿಕಾರಿ ತಡರಾತ್ರಿಯವರೆಗೆ ಕೆಲಸ ಮಾಡಿದರು, ನಂತರ ಅವರು ಡೇಟಾವನ್ನು ಪರಿಶೀಲಿಸುವಲ್ಲಿ ನಿರತರಾಗಿದ್ದರು. ಡೇಟಾ ನಮೂದಿನಲ್ಲಿ, ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ  ಮುಖ್ಯ ಎಂದು ವಿಳಂಬಕ್ಕೆ ಸ್ಪಷ್ಟನೆ ನೀಡಿದರು.

ದೆಹಲಿಯಲ್ಲಿ ವಿಧಾನಸಭೆಗೆ ನಡೆದಿದ್ದ ಮತದಾನದ ಶೇಕಡಾವಾರು ಮತದಾನದ ಅಂಕಿ-ಅಂಶ ಪ್ರಕಟಿಸಲು ವಿಳಂಬ ಮಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com