ಸಮೀಕ್ಷೆಗಳಲ್ಲಿ ಆಪ್ ಗೆ ಬಹುಮತ: ಸ್ಟ್ರಾಂಗ್ ರೂಮ್ ಗೆ ಕಾರ್ಯಕರ್ತರಿಂದ ಭದ್ರತೆ

ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮತ್ತೆ ಜಯ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಇವಿಎಂಗಳಿರುವ ಸ್ಟ್ರಾಂಗ್ ರೂಮ್ ಗಳಿಗೆ ಆಪ್ ಕಾರ್ಯಕರ್ತರ ಭದ್ರತೆ ನಿಯೋಜಿಸಲಾಗಿದೆ.
ಇವಿಎಂ ಸ್ಟ್ರಾಂಗ್ ರೂಂ
ಇವಿಎಂ ಸ್ಟ್ರಾಂಗ್ ರೂಂ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮತ್ತೆ ಜಯ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಇವಿಎಂಗಳಿರುವ ಸ್ಟ್ರಾಂಗ್ ರೂಮ್ ಗಳಿಗೆ ಆಪ್ ಕಾರ್ಯಕರ್ತರ ಭದ್ರತೆ ನಿಯೋಜಿಸಲಾಗಿದೆ.

ನಿನ್ನೆ ನಡೆದ ದೆಹಲಿ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು, ದೆಹಲಿಯ ಒಟ್ಟು 70 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಇದೀಗ ಎಲ್ಲ ಕ್ಷೇತ್ರಗಳಲ್ಲಿನ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್ ನಲ್ಲಿ ಭದ್ರಪಡಿಸಲಾಗಿದೆ. ದೆಹಲಿಯ ಒಟ್ಟು 30 ಸ್ಟ್ಕಾಂಗ್ ರೂಮ್ ಗಳಲ್ಲಿ ಮತಯಂತ್ರಗಳನ್ನು ಭದ್ರಪಡಿಸಲಾಗಿದ್ದು, ಈ ಸ್ಚ್ರಾಂಗ್ ರೂಮ್ ಗಳಿಗೆ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಚುನಾವಣಾ ಆಯೋಗ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಇದೇ 11ರಂದು ಫಲಿತಾಂಶ ಪ್ರಕಟವಾಗಲಿದೆ.

ಏತನ್ಮಧ್ಯೆ ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮತ್ತೆ ಜಯ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಕೇಜ್ರಿವಾಲ್‌ ಅವರು ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಇದೇ ಕಾರಣಕ್ಕೆ ಸ್ಚ್ರಾಂಗ್ ರೂಮ್ ಗಳಿಗೆ ಆಪ್ ಪಕ್ಷ ಕಾರ್ಯಕರ್ತರನ್ನು ನಿಯೋಜಿಸಿದ್ದು, ಯಾವುದೇ ಕಾರಣಕ್ಕೂ ಮತಯಂತ್ರಗಳನ್ನು ತಿರುಚದಂತೆ ಮುಂಜಾಗ್ರತೆ ವಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com