ಜಾರ್ಖಂಡ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ!

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 72ನೇ ಪುಣ್ಯ ತಿಥಿಯಾಗಿ 10 ದಿನ ಕಳೆದಿಲ್ಲ. ಈ ಮಧ್ಯೆ ಅವರ ಪ್ರತಿಮೆಯೊಂದು ಧ್ವಂಸಗೊಂಡಿರುವ ಘಟನೆ ಜಾರ್ಖಂಡ್‌ನಲ್ಲಿ ವರದಿಯಾಗಿದೆ.
ಮಹಾತ್ಮ ಗಾಂಧಿ ಪ್ರತಿಮೆ
ಮಹಾತ್ಮ ಗಾಂಧಿ ಪ್ರತಿಮೆ

ಹಜಾರಿಬಾಗ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 72ನೇ ಪುಣ್ಯ ತಿಥಿಯಾಗಿ 10 ದಿನ ಕಳೆದಿಲ್ಲ. ಈ ಮಧ್ಯೆ ಅವರ ಪ್ರತಿಮೆಯೊಂದು ಧ್ವಂಸಗೊಂಡಿರುವ ಘಟನೆ ಜಾರ್ಖಂಡ್‌ನಲ್ಲಿ ವರದಿಯಾಗಿದೆ. 

ಜಾರ್ಖಂಡ್‌ನ ಹಜಾರಿಬಾಗ್ ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಮೆ ಸ್ವತಃ ತಾನೇ ಬಿದ್ದಿದೆಯೋ ಅಥವಾ ಯಾರಾದರೂ ಧ್ವಂಸಗೊಳಿಸಿದ್ದಾರೋ ಎಂದು ತನಿಖೆಯನ್ನು ನಡೆಸುತ್ತಿದ್ದಾರೆ.

ಇನ್ನು ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನೆ ಬಗ್ಗೆ ಸ್ಥಳೀಯ ಶಾಸಕ ಮನೀಶ್ ಜೈಸ್ವಾಲ್ ಕೂಡ ತೀವ್ರವಾಗಿ ಖಂಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com