ಆರ್ ಎಸ್ ಎಸ್ ನಾಯಕರ ಮೇಲೆ ದಾಳಿಗೆ ಉಗ್ರರ ಸ್ಕೆಚ್: ಗುಪ್ತಚರ ಇಲಾಖೆ ಎಚ್ಚರಿಕೆ 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಸೇರಿದಂತೆ ಅದರ ನಾಯಕರ ಮೇಲೆ ದಾಳಿ ನಡೆಸಲು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳು ಸ್ಕೆಚ್ ಹಾಕಿವೆ.
ಜಾಥಾದಲ್ಲಿ ಆರ್ ಎಸ್ ಎಸ್ ನೌಕರರು
ಜಾಥಾದಲ್ಲಿ ಆರ್ ಎಸ್ ಎಸ್ ನೌಕರರು

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಸೇರಿದಂತೆ ಅದರ ನಾಯಕರ ಮೇಲೆ ದಾಳಿ ನಡೆಸಲು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳು ಸ್ಕೆಚ್ ಹಾಕಿವೆ.

ಐಇಡಿ ಬಳಕೆ ಅಥವಾ ವಾಹನಕ್ಕೆ ಐಇಡಿ ಬಾಂಬ್ ಇಟ್ಟು ಸ್ಪೋಟಿಸುವುದಕ್ಕೆ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಮಾಹಿತಿ ಕೇಂದ್ರ ಗುಪ್ತಚಾರ ಇಲಾಖೆಯಿಂದ ಹೊರಬಿದ್ದಿದೆ. ಮಹಾರಾಷ್ಟ್ರ, ಪಂಜಾಬ್, ರಾಜಸ್ತಾನ ಮತ್ತಿತರ ಕಡೆಗಳಲ್ಲಿ ಈ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಾಗತಿಕ ಉಗ್ರ ಸಂಘಟನೆಗಳು ಆರ್ ಎಸ್ ಎಸ್ ಕಚೇರಿ, ನಾಯಕರು ಮತ್ತು ಪೊಲೀಸ್ ಠಾಣೆಗಳ ಮೇಲೆ ಮುಂಬರುವ ದಿನಗಳಲ್ಲಿ ಐಇಡಿ ಬಾಂಬ್ ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಈ ತಿಂಗಳಲ್ಲಿ ಗುಪ್ತಚರ ವಿಭಾಗ  ಎಚ್ಚರಿಕೆ ನೀಡಿದೆ. 

ಸಂಬಂಧಿತ ರಾಜ್ಯಗಳು ಬಿಗಿ ಭದ್ರತೆ ಒದಗಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಉಗ್ರರ ದಾಳಿ ಎಚ್ಚರಿಕೆ ಹಿನ್ನೆಲೆಯಲ್ಲಿ ದೆಹಲಿ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಮತ್ತು ಅಸ್ಸಾಂನಲ್ಲಿ ಭದ್ರತಾ ಅಧಿಕಾರಿಗಳು ಭದ್ರತಾ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com