ಅಕ್ರಮ ಸಂಬಂಧ ಶಂಕೆ: ಗುರುಗಾವ್ ನಲ್ಲಿ ಬಿಜೆಪಿ ಮಹಿಳಾ ನಾಯಕಿ ಹತ್ಯೆ

ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಬಿಜೆಪಿ  ನಾಯಕಿಯನ್ನು ಪತಿಯೇ  ಗುಂಡಿಟ್ಟು  ಹತ್ಯೆ ಮಾಡಿರುವ ಘಟನೆ ಗುರುಗಾವ್ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುರುಗಾವ್ : ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಬಿಜೆಪಿ  ನಾಯಕಿಯನ್ನು ಪತಿಯೇ  ಗುಂಡಿಟ್ಟು  ಹತ್ಯೆ ಮಾಡಿರುವ ಘಟನೆ ಗುರುಗಾವ್ ನಲ್ಲಿ ನಡೆದಿದೆ.

ಬಿಜೆಪಿ ಕಿಶನ್ ಮೋರ್ಚಾ ರಾಜ್ಯ ಕಾರ್ಯದರ್ಶಿ ಮುನೇಶ್ ಗೋಧಾರ ಎಂಬಾಕೆಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.  ಮುನೇಶ್ ಗೋಧಾರ  ತಮ್ಮ ತಂಗಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ, ಆಕೆಯ ಪತಿ ಸುನೀಲ್ ಗೋಧಾರ ಪರವಾನಗಿ ಪಡೆದಿದ್ದ ರಿವಾಲ್ವರ್ ನಿಂದ ಹತ್ಯೆ ಮಾಡಲಾಗಿದೆ.

ಈ ಸಂಬಂಧ ಗುರುಗಾವ್ ಸೆಕ್ಟರ್ 10ಎ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ. ಫೋನಿನಲ್ಲಿ  ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಯ ಮೇಲೆ ಎರಡು ಬಾರಿ  ಫೈರಿಂಗ್ ಮಾಡಿದ್ದಾನೆ, 2 ಬಾರಿ ಆಕೆಯ ಎದೆಗೆ ಗುಂಡು ಹಾರಿಸಿದ ಪರಿಣಾಮ ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ನಂತರ ಆರೋಪಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ,  ಆರೋಪಿ ನಿವೃತ್ತ ಸೈನಿಕನಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ, ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com