'ಆತ್ಮಾವಲೋಕನ ಮಾಡಿದ್ದು ಸಾಕು, ಇನ್ನಾದರೂ ಕಾರ್ಯಪ್ರವೃತ್ತರಾಗೋಣ':ದೆಹಲಿ ಸೋಲಿಗೆ ಶರ್ಮಿಷ್ಠ ಮುಖರ್ಜಿ ಹೇಳಿಕೆ 

ರಾಜಧಾನಿ ದೆಹಲಿ ವಿಧಾನಸಭೆ ಕ್ಷೇತ್ರ ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಶೂನ್ಯ ಸಂಪಾದನೆ ಕಾಣುವ ಲಕ್ಷಣ ಕಂಡುಬರುತ್ತಿದೆ. 1998ರಿಂದ 2013ರವರೆಗೆ ದೆಹಲಿ ಆಳಿದ್ದ ಕಾಂಗ್ರೆಸ್ 2015ರಿಂದ ರಾಜಧಾನಿಯಲ್ಲಿ ಒಬ್ಬರೇ ಒಬ್ಬ ಶಾಸಕರನ್ನು ಹೊಂದಿಲ್ಲ.
ಶರ್ಮಿಷ್ಠ ಮುಖರ್ಜಿ
ಶರ್ಮಿಷ್ಠ ಮುಖರ್ಜಿ

ನವದೆಹಲಿ: ರಾಜಧಾನಿ ದೆಹಲಿ ವಿಧಾನಸಭೆ ಕ್ಷೇತ್ರ ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಶೂನ್ಯ ಸಂಪಾದನೆ ಕಾಣುವ ಲಕ್ಷಣ ಕಂಡುಬರುತ್ತಿದೆ. 1998ರಿಂದ 2013ರವರೆಗೆ ದೆಹಲಿ ಆಳಿದ್ದ ಕಾಂಗ್ರೆಸ್ 2015ರಿಂದ ರಾಜಧಾನಿಯಲ್ಲಿ ಒಬ್ಬರೇ ಒಬ್ಬ ಶಾಸಕರನ್ನು ಹೊಂದಿಲ್ಲ.


ಈ ವೈಫಲ್ಯಕ್ಕೆ ಏನು ಕಾರಣ ಎಂಬುದನ್ನು ಕಾಂಗ್ರೆಸ್ ನಾಯಕಿ ಶರ್ಮಿಷ್ಠ ಮುಖರ್ಜಿ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರ ಮಾಡುವುದರಲ್ಲಿ ಅತಿಯಾದ ವಿಳಂಬವೇ ಈ ಶೂನ್ಯ ಫಲಿತಾಂಶಕ್ಕೆ ಕಾರಣ ಎನ್ನುತ್ತಾರೆ ಅವರು.


ದೆಹಲಿಯಲ್ಲಿ ಮತ್ತೆ ನಾಶ ಹೊಂದಿದ್ದೇವೆ. ಆತ್ಮಾವಲೋಕನ ಮಾಡಿಕೊಳ್ಳುವುದು ಸಾಕು, ಇನ್ನೇನಿದ್ದರೂ ಕಾರ್ಯಪ್ರವೃತ್ತವಾಗಬೇಕು. ಮೇಲಿನ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಅತಿಯಾದ ವಿಳಂಬ, ರಾಜ್ಯ ಮಟ್ಟದಲ್ಲಿ ಕಾರ್ಯತಂತ್ರದ ಮತ್ತು ಒಗ್ಗಟ್ಟಿನ ಕೊರತೆ, ನಿರುತ್ಸಾಹಿ ಕಾರ್ಯಕರ್ತರು, ತಳಮಟ್ಟದ ಜೊತೆ ಸಂಪರ್ಕ ಹೊಂದಿಲ್ಲದಿರುವುದು ಇವೆಲ್ಲವೂ ಚುನಾವಣಾ ಫಲಿತಾಂಶ ಸೋಲಿಗೆ ಕಾರಣವಾಗಿದೆ. ಈ ಪಕ್ಷದವಳಾಗಿ ಸೋಲಿನ ಹೊಣೆಯಲ್ಲಿ ನನ್ನ ಪಾಲು ಕೂಡ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com