ಪರಿವಾರ, ತಳವಾರ, ಸಿದ್ದಿಗೆ ಎಸ್ಟಿ ಮಾನ್ಯತೆ: ಸಂಸತ್ತಿನಲ್ಲಿ ಅಂಗೀಕಾರ

ಕರ್ನಾಟಕದ ತಳವಾರ, ಪರಿವಾರ, ಸಿದ್ಧಿ ಸಮುದಾಯದವರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡುವ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕರ್ನಾಟಕದ ತಳವಾರ, ಪರಿವಾರ, ಸಿದ್ಧಿ ಸಮುದಾಯದವರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡುವ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ. 

ರಾಜ್ಯಸಭೆಯಲ್ಲಿ ಮಸೂದೆ ಈ ಹಿಂದೆಯೇ ಪಾಸಾಗಿದ್ದು, ಇದೀಗ ಸಂಸತ್ತಿನಲ್ಲಿ ಅನುಮೋದನೆ ದೊರೆತಂತಾಗಿದೆ. ಇದರಂತೆ ಕರ್ನಾಟಕದ ತಳವಾರ ಹಾಗೂ ಪರಿವಾರ ಸಮುದಾಯದವರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬು ನಡೆಸುತ್ತಿದ್ದ 3 ದಶಕಗಳ ಹೋರಾಟಕ್ಕೆ ಪ್ರತಿಫಲ ದೊರೆತಂತಾಗಿದ. 

ಸಾಂವಿಧಾನಿಕ (ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ಮಸೂದೆ-2019ಕ್ಕೆ ಡಿಸೆಂಬರ್ 12ರಂದೇ ರಾಜ್ಯಸಭೆ ಅಂಗೀಕಾರ ನೀಡಿತ್ತು. ಈಗ ಲೋಕಸಭೆಯೂ ಅಂಗೀಕಾರ ನೀಡುವುದರೊಂದಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆಗೆ ಅಂಗೀಕಾರ ದೊರಕಿದಂತಾಗಿದೆ. ಕರ್ನಾಟಕದ ಎಸ್'ಟಿ ಸಮುದಾಯದ ಪಟ್ಟಿಯಲ್ಲಿ ಈ ತಿದ್ದುಪಡಿ ಮಾಡಲಾಗಿದೆ. ರಾಷ್ಟ್ರಪತಿಗಳು ಸಹಿ ಹಾಕಿ, ಅಧಿಸೂಚನೆ ಹೊರಬಿದ್ದರೆ ತಿದ್ದುಪಡಿಯು ಜಾರಿಗೆ ಬರಲಿದೆ. 

ಎಸ್'ಟಿ ಸ್ಥಾನಮಾನ ದೊರಕುವುದರೊಂದಿಗೆ ಪರಿಶಿಷ್ಟ ಪಂಗಡವು ಪಡೆಯುತ್ತಿರುವ ಎಲ್ಲಾ ಮೀಸಲು ಸೌಲಭ್ಯಗಳು ಹಾಗೂ ಇತರ ಸೌಲಭ್ಯಗಳೂ ಸಿದ್ದಿ, ತಳವಾರ ಹಾಗೂ ಪರವಾರ ಸಮುದಾಯಗಳಿಗೆ ದೊರಕಲಿವೆ. ತಳವಾರ, ಪರಿವಾರ ಸಮುದಾಯದವರು ಕರ್ನಾಟಕ ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ. ಹಾಸನ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಹೆಚ್ಚಾಗಿದ್ದಾರೆ. ಉತ್ತರ ಕನ್ನಡ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಿದ್ಧಿಗಳಿದ್ದಾರೆ. 

ಬುಡಕಟ್ಟು ವ್ಯವಹಾರ ಸಚಿವ ಅರ್ಜುನ್ ಮುಂಡಾ ಅವರು ಮಸೂದೆ ಮಂಡಿಸಿದರು, ಬಳಿಕ ಮಾತನಾಡಿದ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ್, ಈ ಸಮುದಾಯಗಳಿಗೆ ಎಸ್'ಟಿ ಸ್ಥಾನಮಾನ ದೊರಕಿಸಿಕೊಂಡಲು ನೆರವಾದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಯಡಿಯೂರಪ್ಪ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com