ಅನೈತಿಕ ಸಂಬಂಧ: ಪತ್ನಿಯನ್ನು ನಡುರಸ್ತೆಗೆಳೆದು ಕ್ರೂರವಾಗಿ ಹಲ್ಲೆ, ಪ್ರಶ್ನಿಸಿದ ಜನರಿಗೆ ಪೊಲೀಸಪ್ಪನಿಂದ ಧಮ್ಕಿ, ವಿಡಿಯೋ ವೈರಲ್!

ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯ ಕುತ್ತಿಗೆ ಹಿಡಿದು ನಡುರಸ್ತೆಗೆಳೆದುಕೊಂಡು ಬಂದ ಗಂಡ ಕ್ರೂರ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ಹಲ್ಲೆ ದೃಶ್ಯಗಳು
ಹಲ್ಲೆ ದೃಶ್ಯಗಳು

ಭೋಪಾಲ್: ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯ ಕುತ್ತಿಗೆ ಹಿಡಿದು ನಡುರಸ್ತೆಗೆಳೆದುಕೊಂಡು ಬಂದ ಗಂಡ ಕ್ರೂರ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಗಂಧ್ವಾನಿ ಪೊಲೀಸ್ ಠಾಣೆಯ ಉಸ್ತುವಾರಿ ನರೇಂದ್ರ ಸೂರ್ಯವಂಶಿ ಪತ್ನಿಯನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಮತ್ತು ಸಾರ್ವಜನಿಕರು ನೋಡುತ್ತಿದ್ದಂತೆ ಹಲ್ಲೆ ನಡೆಸಿದ್ದಲ್ಲದೆ ತನ್ನ ಶೂ ಅನ್ನು ತೆಗೆದು ಬೆದರಿಸಿದ್ದಾನೆ. ಈ ಘಟನೆ ಫೆಬ್ರವರಿ 11ರಂದು ನಡೆದಿದೆ. 

ಸದ್ಯ ನರೇಂದ್ರ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸುತ್ತಿದೆ ಎಂದು ಮನ್ವಾರಾದ ಎಡಿಒಪಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com