ಗೋಲಿ ಮಾರೋ.., ಭಾರತ-ಪಾಕ್ ಪಂದ್ಯ ಹೇಳಿಕೆಗಳನ್ನು ನೀಡಬಾರದಿತ್ತು: ದೆಹಲಿ ಚುನಾವಣೆ ಸೋಲಿನ ಬಗ್ಗೆ ಅಮಿತ್ ಶಾ

ದೆಹಲಿ ಚುನಾವಣೆ ಸೋಲಿನ ಬಗ್ಗೆ ಬಿಜೆಪಿ ನಾಯಕ, ಗೃಹ ಸಚಿವ ಅಮಿತ್ ಶಾ ಮೌನ ಮುರಿದಿದ್ದಾರೆ. 

Published: 13th February 2020 08:10 PM  |   Last Updated: 13th February 2020 08:12 PM   |  A+A-


Slogans like 'goli maro', 'Indo-Pak match' should not have been made: Shah breaks silence after Delhi poll loss

ಗೋಲಿ ಮಾರೋ..., ಭಾರತ-ಪಾಕ್ ಪಂದ್ಯಗಳಂತಹ ಹೇಳಿಕೆ ನೀಡಬಾರದಿತ್ತು: ದೆಹಲಿ ಚುನಾವಣೆ ಸೋಲಿನ ಬಗ್ಗೆ ಶಾ

Posted By : Srinivas Rao BV
Source : The New Indian Express

ನವದೆಹಲಿ: ದೆಹಲಿ ಚುನಾವಣೆ ಸೋಲಿನ ಬಗ್ಗೆ ಬಿಜೆಪಿ ನಾಯಕ, ಗೃಹ ಸಚಿವ ಅಮಿತ್ ಶಾ ಮೌನ ಮುರಿದಿದ್ದಾರೆ. 

ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕರು ಗೋಲಿ ಮಾರೋ...., ಭಾರತ-ಪಾಕ್ ಪಂದ್ಯಗಳಂತಹ ದ್ವೇಷಪೂರಿತ ಘೋಷಣೆ, ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ. ಈ ರೀತಿಯ ಘೋಷಣೆಗಳು, ಹೇಳಿಕೆಗಳಿಂದ ದೆಹಲಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯುಂಟಾಗಿರಬಹುದು ಎಂದು ಟೈಮ್ಸ್ ನೌ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ. 

ಆದರೆ ಬಿಜೆಪಿ ಕೇವಲ ಸೋಲು ಗೆಲುವುಗಳಿಗಾಗಿ ಚುನಾವಣೆ ಎದುರಿಸುವುದಿಲ್ಲ. ಚುನಾವಣೆಯ ಮೂಲಕ ತನ್ನ ಸಿದ್ಧಾಂತವನ್ನು ವಿಸ್ತರಿಸುವುದರಲ್ಲಿ ಬಿಜೆಪಿ ನಂಬಿಕೆಯನ್ನು ಹೊಂದಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.ದೆಹಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪಕ್ಷದ ಕೆಲವು ನಾಯಕರಿಂದ ಬಂದ ಗೋಲಿ ಮಾರೋ... ಇಂಡೋ-ಪಾಕ್ ಪಂದ್ಯಗಳಂತಹ ಹೇಳಿಕೆಗಳಿಂದ ಪಕ್ಷ ಅಂತರ ಕಾಯ್ದುಕೊಂಡಿತ್ತು. 

ದೆಹಲಿ ಚುನಾವಣಾ ಫಲಿತಾಂಶ ಸಿಎಎ ಹಾಗೂ ಎನ್ ಆರ್ ಸಿ ಕುರಿತ ಜನಾದೇಶವಲ್ಲ. ತಮ್ಮ ಜೊತೆ ಸಿಎಎ ಕುರಿತು ಚರ್ಚೆ ನಡೆಸಬೇಕೆಂದಿರುವವರು ತಮ್ಮ ಕಚೇರಿಯನ್ನು ಸಂಪರ್ಕಿಸಿ ಸಮಯವನ್ನು ಕೇಳಬಹುದೆಂದು ಅಮಿತ್ ಶಾ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp