ದೆಹಲಿ ಗೆಲುವಿನ ಬಳಿಕ ಕೇವಲ 24 ಗಂಟೆಗಳ ಅವಧಿಯಲ್ಲಿ ಆಪ್ ಗೆ 10 ಲಕ್ಷ ಜನ ಸೇರ್ಪಡೆ!
ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಕೇವಲ 24 ಗಂಟೆಗಳ ಅವಧಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬರೊಬ್ಬರಿ 10 ಲಕ್ಷಕ್ಕಿಂತಲೂ ಅಧಿಕ ಜನ ಸೇರಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ.
Published: 14th February 2020 11:46 AM | Last Updated: 14th February 2020 11:46 AM | A+A A-

ಸಂಗ್ರಹ ಚಿತ್ರ
ನವದೆಹಲಿ: ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಕೇವಲ 24 ಗಂಟೆಗಳ ಅವಧಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬರೊಬ್ಬರಿ 10 ಲಕ್ಷಕ್ಕಿಂತಲೂ ಅಧಿಕ ಜನ ಸೇರಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ.
ಈ ಕುರಿತಂತೆ ಆಪ್ ಪಕ್ಷ ಟ್ವೀಟ್ ಮಾಡಿದ್ದು, 'ದೆಹಲಿಯಲ್ಲಿನ ಪ್ರಚಂಡ ಜಯದ ಬಳಿಕ 24 ಗಂಟೆಗಳ ಒಳಗೆ 10 ಲಕ್ಷ ಜನರು ಸಾಮೂಹಿಕವಾಗಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರಲು ಮಿಸ್ಡ್ ಕಾಲ್ ನೀಡಿ ಎಂದು ಟ್ವೀಟ್ ಮಾಡಲಾಗಿದೆ.
ದೆಹಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಆಮ್ ಆದ್ಮಿ ನಾಯಕರು ಪಕ್ಷ ಸೇರ್ಪಡೆ ಅಭಿಯಾನ ಆರಂಭಿಸಿದ್ದರು. ಇದಕ್ಕಾಗಿ ಆರಂಭಿಸಲಾಗಿದ್ದ ಮಿಸ್ಡ್ ಕಾಲ್ ಅಭಿಯಾನಕ್ಕೆ ಇದೀಗ ಅಭೂತಪೂರ್ವ ಬೆಂಬಲ ದೊರೆತಿದೆ ಎಂದು ಆಪ್ ಹೇಳಿಕೊಂಡಿದೆ. ತನ್ನ ಮಿಸ್ಡ್ ಕಾಲ್ ನೀಡುವ ಅಭಿಯಾನದಲ್ಲಿ ಸುಮಾರು 11 ಲಕ್ಷ ಜನರು ಪಾಲ್ಗೊಂಡಿದ್ದಾರೆ. ವಿವಿಧ ಮಾಧ್ಯಮಗಳ ಮೂಲಕ ಮಿಸ್ಡ್ ಕಾಲ್ ನೀಡಲು ನಂಬರ್ ನೀಡಲಾಗಿತ್ತು. ದೇಶ ಕಟ್ಟಲು ದೇಶಾದ್ಯಂತದ ಜನರು ನೀಡಿದ ಬೆಂಬಲ ಚಾರಿತ್ರಿಕ ವಿಚಾರ ಎಂದು ಪಕ್ಷದ ನಾಯಕರು ಹೇಳಿದ್ದಾರೆ ಎಂದು ಆಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಿಜೆಪಿಯ ಎಲ್ಲ ಪ್ರಯತ್ನಗಳ ಹೊರತಾಗಿಯೂ ಆಪ್ ತನ್ನ ರಾಜಕೀಯ ಕಾರ್ಯದ ಪಥವನ್ನು ಬದಲಿಸಲಿಲ್ಲ. ದಿಲ್ಲಿಯ ಜನರು ಆಪ್ ಮೇಲೆ ಹಾಗೂ ಅದರ ಅಭಿವೃದ್ಧಿಯ ರಾಜಕಾರಣದ ಮೇಲೆ ನಂಬಿಕೆ ಇರಿಸಿದ್ದಾರೆ ಎಂದು ಆಪ್ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಕಳೆದ ದೆಹಲಿ ಚುನಾವಣೆಯಲ್ಲಿ ಆಪ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿತ್ತು. ಒಟ್ಟು 70 ಕ್ಷೇತ್ರಗಳ ಪೈಕಿ 63 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ.
More than 1 million people have joined AAP within 24 hours of our massive victory.
— AAP (@AamAadmiParty) February 13, 2020
To join AAP, give a missed a call on :
9871010101#JoinAAP pic.twitter.com/o79SV8bj01