ಭಾರತಕ್ಕೆ ಒಂದು ಶತಕೋಟಿ ಸೈಬರ್ ದಾಳಿ!

ಭಾರತವು 2019 ರಲ್ಲಿ ಒಂದು ಶತಕೋಟಿ ಸೈಬರ್ ದಾಳಿಗಳನ್ನು ಸ್ವೀಕರಿಸಿದೆ ಎನ್ನುವ ಅಂಶ ಹೆಸರಾಂತ ಐಟಿ ಸೆಕ್ಯೂರಿಟಿ ಪರಿಹಾರ ಒದಗಿಸುವ ಕ್ವಿಕ್ ಹೀಲ್ ಸಂಸ್ಥೆಯ ವಾರ್ಷಿಕ ವರದಿಯಿಂದ ಬಹಿರಂಗವಾಗಿದೆ. 
ಭಾರತಕ್ಕೆ ಒಂದು ಶತಕೋಟಿ ಸೈಬರ್ ದಾಳಿ!
ಭಾರತಕ್ಕೆ ಒಂದು ಶತಕೋಟಿ ಸೈಬರ್ ದಾಳಿ!

ಬೆಂಗಳೂರು: ಭಾರತವು 2019 ರಲ್ಲಿ ಒಂದು ಶತಕೋಟಿ ಸೈಬರ್ ದಾಳಿಗಳನ್ನು ಸ್ವೀಕರಿಸಿದೆ ಎನ್ನುವ ಅಂಶ ಹೆಸರಾಂತ ಐಟಿ ಸೆಕ್ಯೂರಿಟಿ ಪರಿಹಾರ ಒದಗಿಸುವ ಕ್ವಿಕ್ ಹೀಲ್ ಸಂಸ್ಥೆಯ ವಾರ್ಷಿಕ ವರದಿಯಿಂದ ಬಹಿರಂಗವಾಗಿದೆ. 

ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಾದ ಮುಂಬೈ, ಕೊಲ್ಕತ್ತಾ, ಪುಣೆ ಸೈಬರ್ ದಾಳಿಯ ಪ್ರಮುಖ ಕೇಂದ್ರಗಳಾಗುತ್ತಿವೆ. ಭಾರತೀಯ ಗ್ರಾಹಕರಿಗೆ ದಾಳಿ ಮಾಡಿದ ಈ ಒಂದು ಶತಕೋಟಿ ಸೈಬರ್ ಥ್ರೆಟ್ಸ್ ಅನ್ನು ಕ್ವಿಕ್ ಹೀಲ್ ಸಂಸ್ಥೆಯು ಬ್ಲಾಕ್ ಮಾಡುವುದರಲ್ಲಿ ಯಶಸ್ವಿಯಾಗಿದೆ.

ಸೈಬರ್-ದಾಳಿಯನ್ನು ಸುಲಭವಾಗಿ ಪತ್ತೆಹಚ್ಚುವುದನ್ನು ತಡೆಯಲು ಸೈಬರ್ ಅಪರಾಧಿಗಳು ಸುಧಾರಿತ ತಂತ್ರಜ್ಞಾನಗಳ ಸಹಾಯದಿಂದ ಸಂಕೀರ್ಣ ವಿಧಾನಗಳನ್ನು ಬಳಸಿದ್ದಾರೆ ಎಂದು ಕ್ವಿಕ್ ಹೀಲ್‌ನ ಭದ್ರತಾ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಸ್ಮಾರ್ಟ್‌ಫೋನ್‌ ಅತ್ಯಂತ ದುರ್ಬಲ ಡಿಜಿಟಲ್ ಸಾಧನಗಳಲ್ಲಿ ಒಂದಾಗಿದೆ. 

ಸ್ಪೈವೇರ್ ಮತ್ತು ಮಾಲ್ವೇರ್ ಅನ್ನು ನಿಯೋಜಿಸಲು ವಾಟ್ಸಾಪ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡು ಹ್ಯಾಕರ್ಸ್ 2019 ರಲ್ಲಿ ಸೂಕ್ಷ್ಮ ಡೇಟಾವನ್ನು ಕದಿಯಲು ಪ್ರಯತ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com