ಭೀಮಾ ಕೋರೆಗಾಂವ್ ಪ್ರಕರಣ ಎನ್ ಐಎಗೆ ವರ್ಗಾವಣೆ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಶರದ್ ಕಿಡಿ

ಭೀಮಾ ಕೊರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕಿಡಿಕಾರಿದ್ದಾರೆ.
ಶರದ್ ಪವಾರ್
ಶರದ್ ಪವಾರ್

ಕೊಲ್ಹಾಪುರ: ಭೀಮಾ ಕೊರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕಿಡಿಕಾರಿದ್ದಾರೆ.

ರಾಜ್ಯ ನ್ಯಾಯಾಂಗ ವ್ಯಾಪ್ತಿಯಲ್ಲಿ ಬರುವ ಈ ಪ್ರಕರಣದ ವಿಚಾರಣೆಯನ್ನು ಕೇಂದ್ರಕ್ಕೆ ವಹಿಸಿರುವುದು ಸಂವಿಧಾನದ ಪ್ರಕಾರ ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಭೀಮಾ ಕೊರೆಗಾಂವ್ ವಿಚಾರಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿನ ಕೆಲ ಪೊಲೀಸರ ವರ್ತನೆ ಆಕ್ಷೇಪಾರ್ಹವಾಗಿದೆ. ವಿಚಾರಣೆಯಲ್ಲಿ ಈ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತಿಳಿಯಬೇಕಾಗಿದೆ. ಬೆಳಗ್ಗೆ ಮಹಾರಾಷ್ಟ್ರದ ಸಚಿವರು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಪರಾಹ್ನ 3 ಗಂಟೆಯೊಳಗೆ ಎನ್ ಐಗೆ ಪ್ರಕರಣವನ್ನು ವರ್ಗಾಯಿಸುವಂತೆ ಕೇಂದ್ರ ಆದೇಶ ಮಾಡುತ್ತದೆ. ರಾಜ್ಯ ನ್ಯಾಯಾಂಗ ವ್ಯಾಪ್ತಿಯೊಳಗೆ ಇದರ ವಿಚಾರಣೆ ನಡೆಯಬೇಕಾಗಿರುವುದರಿಂದ ಸಂವಿಧಾನದ ಪ್ರಕಾರ ಇದು ತಪ್ಪು ಎಂದಿದ್ದಾರೆ.

ರಾಜ್ಯದ ಕೈಯಿಂದ ಕಿತ್ತುಕೊಂಡು ಕೇಂದ್ರ ಸರ್ಕಾರ ವಿಚಾರಣೆ ನಡೆಸುವುದು ತಪ್ಪು. ಮಹಾರಾಷ್ಟ್ರ ಸರ್ಕಾರ ಇದಕ್ಕೆ ಬೆಂಬಲ ನೀಡುತ್ತಿರುವುದು ತಪ್ಪು ಎಂದು ಶರದ್ ಪವಾರ್  ಹೇಳಿದ್ದಾರೆ.

ರಾಜ್ಯಸರ್ಕಾರದ ಗಮನಕ್ಕೆ ತರದೆ ಕೇಂದ್ರ ಸರ್ಕಾರ ಭೀಮಾ ಕೊರೆಗಾಂವ್ ಸರ್ಕಾರವನ್ನು  ಎನ್ ಐಎಗೆ ವರ್ಗಾವಣೆ ಮಾಡಬಾರದು. ಪತ್ರ ಪಡೆದ ನಂತರ ಏನು ಮಾಡಬಹುದು ಎಂಬುದರ ಬಗ್ಗೆ ಅಡ್ವೊಕೆಟ್ ಜನರಲ್ ಜೊತೆಗೆ ಚರ್ಚಿಸಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್  ಹೇಳಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದ ತನಿಖೆ ಸಂಬಂಧ ಯಾವುದೇ ಪತ್ರವನ್ನು ಪಡೆದಿಲ್ಲ. ಪತ್ರವನ್ನು ಓದಿದ ನಂತರ ಮುಂದಿನ ಕ್ರಮ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಈ ಬಗ್ಗೆ ಕಾನೂನು ಅಭಿಪ್ರಾಯ ಪಡೆಯಲಾಗುವುದು. ಈ ಪ್ರಕರಣದಲ್ಲಿ ಕೆಲ ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಲವು ಮಂದಿ ಹೇಳಿದ್ದಾರೆ ಎಂದು ದೇಶ್ ಮುಖ್ ತಿಳಿಸಿದ್ದಾರೆ. 

ಭೀಮಾ ಕೋರೆಗಾಂವ್ ಯುದ್ದ ಸ್ಮಾರಕದ 200 ನೇ ವರ್ಷಾಚರಣೆ ಸಂದರ್ಭದಲ್ಲಿ 2018 ಜನವರಿ 1 ರಂದು ಹಿಂಸಾಚಾರ ಸಂಭವಿಸಿತ್ತು. ಹಿಂಸಾಚಾರದಲ್ಲಿ ಒಬ್ಬರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಪೊಲೀಸರು 162 ಜನರ ವಿರುದ್ಧ 58 ಪ್ರಕರಣಗಳನ್ನು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com