ಅಸ್ಸಾಂ: ಮನೆಯ ಹಿತ್ತಲಿನಲ್ಲಿ ಪುಲ್ವಾಮಾ ಹುತಾತ್ಮ ಯೋಧನ ಪ್ರತಿಮೆ ಸ್ಥಾಪಿಸಿದ ಪತ್ನಿ

ಅಸ್ಸಾಂನಲ್ಲಿ ಪುಲ್ವಾಮಾ ಹುತಾತ್ಮ ಯೋಧರೊಬ್ಬರ ಪತ್ನಿ ಯಾರ ಸಹಾಯವಿಲ್ಲದೆ ಸ್ವಂತಃ ಖರ್ಚಿನಲ್ಲೇ ತಮ್ಮ ಮನೆಯ ಹಿತ್ತಲಿನಲ್ಲಿ ಪತಿಯ ಪ್ರತಿಮೆ ನಿರ್ಮಿಸುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಮನೇಶ್ವರ್ ಪ್ರತಿಮೆ
ಮನೇಶ್ವರ್ ಪ್ರತಿಮೆ

ಗುವಾಹತಿ: ಅಸ್ಸಾಂನಲ್ಲಿ ಪುಲ್ವಾಮಾ ಹುತಾತ್ಮ ಯೋಧರೊಬ್ಬರ ಪತ್ನಿ ಯಾರ ಸಹಾಯವಿಲ್ಲದೆ ಸ್ವಂತಃ ಖರ್ಚಿನಲ್ಲೇ ತಮ್ಮ ಮನೆಯ ಹಿತ್ತಲಿನಲ್ಲಿ ಪತಿಯ ಪ್ರತಿಮೆ ನಿರ್ಮಿಸುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಗೆ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಹುತಾತ್ಮ ಯೋಧ ಮನೇಶ್ವರ್ ಬಸುಮಾಟರಿ ಅವರಿಗೆ ಗೌರವ ಸಲ್ಲಿಸಲು ಹಲವು ಹಿರಿಯ ಅಧಿಕಾರಿಗಳು, ಪೊಲೀಸರು ಹಾಗೂ ನೂರಾರು ನಾಗರಿಕರು ಅವರ ಮನೆಗೆ ತೆರಳಿದ್ದರು. ಈ ವೇಳೆ ಹುತಾತ್ಮ ಯೋಧನ ಪತ್ನಿ ಸನ್ಮುತಿ ಅವರು ತನ್ನ ಪತಿಯ ಪ್ರತಿಮೆ ಸ್ಥಾಪಿಸಿರುವದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 14, 2019 ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪಾಕಿಸ್ತಾನ ಬೆಂಬಲಿತ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಸ್ಸಾಂನ ಬಕ್ಸಾ ಜಿಲ್ಲೆಯ ಮನೇಶ್ವರ್ 40ಕ್ಕೂ ಹೆಚ್ಚು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದರು.

ಮನೇಶ್ವರ್ ಹುತಾತ್ಮರಾದ ಬಳಿಕ, ಆತನ ಕುಟುಂಬ ಮನೆಯ ಹಿತ್ತಲಿನಲ್ಲಿ ಪ್ರತಿಮೆ ನಿರ್ಮಿಸಲು ನಿರ್ಧರಿಸಿತು. ಅದರಂತೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿದ್ದು, ರಾಜ್ಯಸಭಾ ಸದಸ್ಯ ಬಿಸ್ವಜೀತ್ ದೈಮರಿ ಅವರು ಪ್ರತಿಮೆಯನ್ನು ಇಂದು ಅನಾವರಣಗೊಳಿಸಿದ್ದಾರೆ.

ನನ್ನ ಚಿಕ್ಕಮ್ಮ ಮತ್ತು ಸೋದರ ಸಂಬಂಧಿಗಳು ಮನೇಶ್ವರ್ ಪ್ರತಿಮೆ ನಿರ್ಮಿಸಲು ನಿರ್ಧರಿಸದರು. ಬಳಿಕ ಶಿಲ್ಪಿಗಳಾದ ಮಿಲನ್ ಮುಷಾರಿ ಮತ್ತು ಅನಿಲ್ ಬೋಡೊ ಅವರಿಂದ ಪ್ರತಿಮೆ ಕೆತ್ತನೆ ಮಾಡಲಾಯಿತು. ಈ ಪ್ರತಿಮೆಗಾಗಿ 10 ಲಕ್ಷ ರೂ. ಖರ್ಚಾಗಿದೆ ಎಂದು ಮನೇಶ್ವರ್ ಸಂಬಂಧಿ ಕಮಲ್ ಬೊಡೊ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com