206 ಹುದ್ದೆಗಳಿಗೆ 1200 ಅಭ್ಯರ್ಥಿಗಳ ಆಯ್ಕೆ, ನಾಗಲ್ಯಾಂಡ್ ಪೊಲೀಸ್ ನೇಮಕಾತಿ ಕರ್ಮಕಾಂಡ!

ಹಿಂಬಾಗಿಲ ಮೂಲಕ ನೇಮಕಾತಿ ಆರೋಪದ ಬೆನ್ನಲ್ಲೇ, ಹೊಸದಾಗಿ ಆಯ್ಕೆಯಾಗಿದ್ದ 1200 ಪೊಲೀಸರ ತರಬೇತಿಯನ್ನು ನಾಗಲ್ಯಾಂಡಿನ ನೀಫಿಯು ರಿಯೊ ಸರ್ಕಾರ ಮುಂದೂಡಿದೆ.

Published: 14th February 2020 05:58 PM  |   Last Updated: 14th February 2020 06:20 PM   |  A+A-


Nagaland_CM_Neiphiu_Rio1

ನಾಗಲ್ಯಾಂಡ್ ಮುಖ್ಯಮಂತ್ರಿ

Posted By : Nagaraja AB
Source : The New Indian Express

ಗುವಾಹಟಿ: ಹಿಂಬಾಗಿಲ ಮೂಲಕ ನೇಮಕಾತಿ ಆರೋಪದ ಬೆನ್ನಲ್ಲೇ, ಹೊಸದಾಗಿ ಆಯ್ಕೆಯಾಗಿದ್ದ 1200 ಪೊಲೀಸರ ತರಬೇತಿಯನ್ನು ನಾಗಲ್ಯಾಂಡಿನ ನೀಫಿಯು ರಿಯೊ ಸರ್ಕಾರ ಮುಂದೂಡಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಬುಡಕಟ್ಟು ಸಂಘಟನೆಯೊಂದು  ದಿಮಾಪುರ ಜಿಲ್ಲೆಯ ಚುಮುಕೆದಿಮಾದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳನ್ನು ರಕ್ಷಿಸುವಂತೆ ಈ ಹಿಂದೆ ಒತ್ತಡ ಹಾಕಿತ್ತು. 

ಆದಾಗ್ಯೂ, ಸರ್ಕಾರ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹಾಗೂ ಬೆಟಾಲಿಯನ್ ಕಮಾಂಡೆಟ್ ಗಳಿಗೆ ನೀಡಿರುವ ಸಂದೇಶದಲ್ಲಿ ಯಾವುದೇ ವಿವಾದ ಬಗ್ಗೆ ಉಲ್ಲೇಖ ಮಾಡಿಲ್ಲ.

ಬ್ಯಾರಕ್ ಗಳ ವ್ಯವಸ್ಥೆ,ಮತ್ತಿತರ ತರಬೇತಿ ಮೂಲಸೌಕರ್ಯಗಳು ಪೂರ್ಣಗೊಳ್ಳದ ಕಾರಣ ಮುಂದಿನ ಆದೇಶದವರೆಗೂ ಪೊಲೀಸ್ ತರಬೇತಿ ಸೆಂಟರ್ ಮತ್ತು ಎನ್ ಎಪಿಟಿಸಿಗಳಲ್ಲಿ ಮೂಲ ತರಬೇತಿಗಾಗಿ ಇಂದು ಆರ್ ಸಿಯನ್ನು ಕಳುಹಿಸದಂತೆ ಎಲ್ಲಾ ಘಟಕಗಳಿಗೆ  ನಾಗಲ್ಯಾಂಡ್ ಪೊಲೀಸ್ ಮಹಾನಿರ್ದೇಶಕರು ನಿರ್ದೇಶಿಸಿದ್ದಾರೆ. ಅಲ್ಲದೇ, ತರಬೇತಿ ಕೇಂದ್ರದ ಕಿರು ಪಟ್ಟಿಯಲ್ಲಿನ ವರದಿಗಾಗಿ ಆರ್ ಸಿಯನ್ನು ಇಡದಂತೆಯೂ ಸೂಚಿಸಲಾಗಿದೆ. 

ಇದಕ್ಕೂ ಮುಂಚೆ 206 ಹುದ್ದೆಗಳ ನೇಮಕಾತಿಗಾಗಿ ಜಾಹಿರಾತು ನೀಡಿ  1200  ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 206 ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತಿದ್ದು, ಉಳಿದಿರುವ ಇತರರನ್ನೂ ರಕ್ಷಿಸಿ ಎಂದು ಚುಮುಕದಿಮಾದ ನಾಗ ಬುಡಕಟ್ಟು ಒಕ್ಕೂಟ  ಒತ್ತಾಯಿಸಿತ್ತು. ಹೆಚ್ಚುವರಿಯಾಗಿ 996 ಅಭ್ಯರ್ಥಿಗಳನ್ನು ಹೇಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ದಿಮಾಪುರ ನಾಗ ವಿದ್ಯಾರ್ಥಿ ಒಕ್ಕೂಟ ಕೂಡಾ ಪ್ರಶ್ನಿಸಿತ್ತು. 

ಹಿಂಬಾಗಿಲ ಮೂಲಕ ನೇಮಕಾತಿ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಚರ್ಚಿಸಲು ಇದೇ 22 ರಂದು ನಾಗ ವಿದ್ಯಾರ್ಥಿ ಫೆಡರೇಷನ್ ತನ್ನೆಲ್ಲಾ ಒಕ್ಕೂಟದೊಂದಿಗೆ ಸಭೆಯನ್ನು ಆಯೋಜಿಸಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp