ಶಾಲಾ ವ್ಯಾನ್​ಗೆ ಆಕಸ್ಮಿಕ ಬೆಂಕಿ: ನಾಲ್ವರು ಮಕ್ಕಳು ಸಜೀವ ದಹನ

ಖಾಸಗಿ ಶಾಲಾ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ನಾಲ್ವರು ಮಕ್ಕಳು ಸಜೀವ ದಹನವಾಗಿರುವ ಭೀಭತ್ಸ ಘಟನೆ ಪಂಜಾಬಿನಲ್ಲಿ ನಡೆದಿದೆ.
ಶಾಲಾ ವ್ಯಾನ್​ಗೆ ಆಕಸ್ಮಿಕ ಬೆಂಕಿ: ನಾಲ್ವರು ಮಕ್ಕಳು ಸಜೀವ ದಹನ
ಶಾಲಾ ವ್ಯಾನ್​ಗೆ ಆಕಸ್ಮಿಕ ಬೆಂಕಿ: ನಾಲ್ವರು ಮಕ್ಕಳು ಸಜೀವ ದಹನ

ಚಂಡೀಘರ್: ಖಾಸಗಿ ಶಾಲಾ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ನಾಲ್ವರು ಮಕ್ಕಳು ಸಜೀವ ದಹನವಾಗಿರುವ ಭೀಭತ್ಸ ಘಟನೆ ಪಂಜಾಬಿನಲ್ಲಿ ನಡೆದಿದೆ.

ಸಂಗ್ರೂರ್ ಜಿಲ್ಲೆಯ ಲಾಂಗೋವಾಲ್ ಬಳಿ ಶನಿವಾರ ನಡೆದ ಘಟನೆಯಲ್ಲಿ  ಒಂದೇ ಕುಟುಂಬದ ಇಬ್ಬರು ಸೇರಿದಂತೆ ನಾಲ್ವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ.

ಘಟನೆ ನಡೆದ ವೇಳೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಹನ್ನೆರಡು ವಿದ್ಯಾರ್ಥಿಗಳನ್ನು ಶಾಲಾ ವ್ಯಾನ್ ಸಾಗಿಸುತ್ತಿತ್ತು. ನಗರದ ಲಾಂಗೋವಲ್-ಸಿಡ್ಸಮಾಚಾರ್ ರಸ್ತೆಯಲ್ಲಿ ಚಲಿಸುವಾಗ ವ್ಯಾನಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ವೇಳೆ  ಹತ್ತಿರದ ಹೊಲಗಳಲ್ಲಿ ಕೆಲಸ ಮಾಡುವ ಜನರು ಎಂಟು ಮಕ್ಕಳನ್ನು ಸುರಕ್ಷಿತವಾಗಿ ವ್ಯಾನ್‌ನಿಂದ ಹೊರಗೆ ತಂದಿದ್ದಾರೆ.

ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ವ್ಯಾನ್ ಸಂಗ್ರೂರಿನ ಸಿಮ್ರಾನ್ ಪಬ್ಲಿಕ್ ಶಾಲೆಗೆ ಸೇರಿತ್ತು.

ಚಾಲಕನಿಗೆ ಬೆಂಕಿಯ ಬಗ್ಗೆ ತಿಳಿದಿರಲಿಲ್ಲ, ನಾವು ವ್ಯಾನನ್ನು ಹಿಂಬಾಲಿಸಿ ವಾಹನದ ಹಿಂಭಾಗದಲ್ಲಿ ಬೆಂಕಿಯ ಬಗ್ಗೆ ಮಾಹಿತಿ ನೀಡಿದೆವು.ಆಗ ಚಾಲಕ ವಾಹನವನ್ನು ತಕ್ಷಣ ನಿಲ್ಲಿಸಿದ್ದಾನೆ. ಸ್ಥಳದಲ್ಲಿ ಜನರು ಜಮಾಯಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಅವರು ವಾಹನದ ಕಿಟಕಿ  ಗಾಜನ್ನು ಒಡೆದು ಮಕ್ಕಳನ್ನು ಹೊರಗೆಳೆದರು. ಆದರೆ . ನಾಲ್ಕು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಉಳಿದವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ವ್ಯಾನನ್ನು ಕೇವಲ ದಿನದ ಹಿಂದಷ್ಟೇ ಶಾಲೆಯು ಖರೀದಿಸಿತ್ತು.ಆದರೆ ವ್ಯಾನ್ ಅದಾಗಲೇ ಹಳೆಯದಾಗಿದ್ದು ಶಿಥಿಲಾವಸ್ಥೆ ತಲುಪಿತ್ತು.ಗ್ಯಾಸ್ ಸಿಲಿಂಡರ್‌ ಬಳಸಿ ಚಲಾಯಿಸಲಾಗುತ್ತಿತ್ತು.

ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕೋಪಗೊಂಡ ಸ್ಥಳೀಯರು ರಸ್ತೆ ತಡೆ ಮಾಡಿದ್ದಾರೆ. ಏತನ್ಮಧ್ಯೆ, ಸಂಗ್ರೂರಿನ ಸಿವಿಲ್ ಆಸ್ಪತ್ರೆಯು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯರ ತಂಡವನ್ನು ನಿಯೋಜಿಸಿದೆ.

ಶಾಲಾ ಪ್ರಾಂಶುಪಾಲರು,ನಿರ್ವಹಣಾ ಮಂಡಳಿ,  ಚಾಲಕ ಮತ್ತು ಇತರರ ವಿರುದ್ಧ ಐಪಿಸಿಯ ಸೆಕ್ಷನ್ 304 ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ಸಂಗ್ರೂರ್ ಉಪ ಆಯುಕ್ತ ಘನ್ಶ್ಯಾಮ್ ಥೋರಿ ತಿಳಿಸಿದ್ದಾರೆ ಏತನ್ಮಧ್ಯೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದಾರೆ. "ನಾಲ್ಕು ಮಕ್ಕಳನ್ನು ಕಳೆದುಕೊಂಡ ಈ ಸುದ್ದಿಯನ್ನು ತಿಳಿದು ತುಂಬಾ ದುಃಖವಾಗಿದೆಶಾಲೆಯ ವ್ಯಾನ್ ಬೆಂಕಿಗೆ ಆಹುತಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ನಾನು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದೇನೆ ವಿಚಾರಣೆ. ಮುಗಿದು . ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. " ಎಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com