ಕಾಶ್ಮೀರ ವಿಚಾರ: ಟರ್ಕಿ ಅಧ್ಯಕ್ಷರ ಹೇಳಿಕೆ ತಿರಸ್ಕರಿಸಿದ ಭಾರತ, ಆಂತರಿಕ ವ್ಯವಹಾರದಲ್ಲಿ ತಲೆಹಾಕದಂತೆ ತಿರುಗೇಟು

ಕಾಶ್ಮೀರ ವಿಚಾರ ಕುರಿತಂತೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ನೀಡಿರುವ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಭಾರತದ ಆಂತರಿಕ ವ್ಯವಹಾರದಲ್ಲಿ ತಲೆಹಾಕದಂತೆ ತಿರುಗೇಟು ನೀಡಿದೆ. 
ಎರ್ಡೊಗನ್
ಎರ್ಡೊಗನ್

ನವದೆಹಲಿ:  ಕಾಶ್ಮೀರ ವಿಚಾರ ಕುರಿತಂತೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ನೀಡಿರುವ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಭಾರತದ ಆಂತರಿಕ ವ್ಯವಹಾರದಲ್ಲಿ ತಲೆಹಾಕದಂತೆ ತಿರುಗೇಟು ನೀಡಿದೆ. 

ಜಮ್ಮು-ಕಾಶ್ಮೀರ ಕುರಿತು ಟರ್ಕಿ ಅಧ್ಯಕ್ಷರು ನೀಡಿರುವ ಎಲ್ಲಾ ಹೇಳಿಕೆಗಳನ್ನು ಭಾರತ ತಿರಸ್ಕರಿಸಿದೆ. ಈ ಪ್ರದೇಶ ಭಾರತದ ಅವಿಭಾಜ್ಯ ಹಾಗೂ ನಾಶಪಡಿಸಲಾಗದ ಭಾಗವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. 

ಪಾಕಿಸ್ತಾನ ಸಂಸತ್ತಿನಲ್ಲಿ ಶುಕ್ರವಾರ ಮಾತನಾಡಿದ ಟರ್ಕಿ ಅಧ್ಯಕ್ಷ ಎರ್ಡೋಗನ್, ಮೊದಲನೆಯ ಮಹಾಯುದ್ಧದ ಸಮಯದಲ್ಲಿ ವಿದೇಶಿ ಪ್ರಾಬಲ್ಯದ ವಿರುದ್ಧ ಟರ್ಕಿಶ್ ಜನರು ನಡೆಸಿದ ಹೋರಾಟದೊಂದಿಗೆ ಕಾಶ್ಮೀರಿ ಜನರ ಹೋರಾಟ ವನ್ನು ಹೋಲಿಕೆ ಮಾಡಿದ್ದರು. 

"ಪಾಕಿಸ್ತಾನದಿಂದ  ಭಾರತದ ಮೇಲೆ  ಉಂಟಾಗುತ್ತಿರುವ ಭಯೋತ್ಪಾದನೆ ಬೆದರಿಕೆ ಮತ್ತಿತರ ನೈಜ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಭಾರತದ ಆಂತರಿಕ ವ್ಯವಹಾರದಲ್ಲಿ ತಲೆ ಹಾಕದಂತೆ ಟರ್ಕಿ ನಾಯಕರಿಗೆ ಹೇಳಲು ಬಯಸುತ್ತೇವೆ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com