ಶಾ ಜತೆಗೆ ಸಿಎಎ  ಚರ್ಚೆಗೆ ಸಿದ್ದವೆಂದ ಶಾಹೀನ್ ಬಾಗ್ ಪ್ರತಿಭಟನಾಕಾರರು, ಯಾವುದೇ ಸಭೆ ನಿಗದಿಯಾಗಿಲ್ಲ  - ಗೃಹ ಸಚಿವಾಲಯ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಶಾ ಅವರನ್ನು ಭೇಟಿ ಮಾಡುವುದಾಗಿ ಶಾಹೀನ್ ಬಾಗ್‌ನ ತಿಭಟನಾಕಾರರು ಹೇಳಿದ ಬಳಿಕ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಗೃಹ ಸಚಿವಾಲಯ (ಎಂಎಚ್‌ಎ) ಶನಿವಾರ ತಿಳಿಸಿದೆ. . 
ಶಾಹೀನ್ ಬಾಗ್ ಪ್ರತಿಭಟನಾಕಾರರು
ಶಾಹೀನ್ ಬಾಗ್ ಪ್ರತಿಭಟನಾಕಾರರು

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಶಾ ಅವರನ್ನು ಭೇಟಿ ಮಾಡುವುದಾಗಿ ಶಾಹೀನ್ ಬಾಗ್‌ನ ತಿಭಟನಾಕಾರರು ಹೇಳಿದ ಬಳಿಕ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಗೃಹ ಸಚಿವಾಲಯ (ಎಂಎಚ್‌ಎ) ಶನಿವಾರ ತಿಳಿಸಿದೆ. .

ಶಾಹೀನ್ ಬಾಗ್ ಪ್ರತಿಭಟನಾಕಾರರ ಗುಂಪೊಂದು ಶನಿವಾರ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲಿದ್ದೇವೆ ಎಂದು ಹೇಳಿದ್ದು, ಅದೇ ಸಮಯದಲ್ಲಿ ಅವರು ಸಚಿವರೊಂದಿಗೆ ನೇಮಕಾತಿ ಕೋರಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

"ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಾಳೆ ಅಂತಹ ಯಾವುದೇ ಸಭೆ ನಿಗದಿಯಾಗಿಲ್ಲ" ಎಂದು ಎಂಎಚ್‌ಎ ಹೇಳಿಕೆಯಲ್ಲಿ ತಿಳಿಸಿದೆ.

ಸಿಎಎ ಬಗ್ಗೆ ಅನುಮಾನವಿರುವ ಯಾರಾದರೂ ತಮ್ಮ ಕಚೇರಿಯಿಂದ ಅಪಾಯಿಂಟ್ ಮೆಂಟ್ ಪಡೆಯಬಹುದು  ಮತ್ತು ಅವರು ಮೂರು ದಿನಗಳಲ್ಲಿ ವ್ಯಕ್ತಿ ಅಥವಾ ಗುಂಪನ್ನು ಭೇಟಿಯಾಗಲು ಸಿದ್ಧರಿರುತ್ತಾರೆ ಎಂದು ಗೃಹ ಸಚಿವ ಅಮಿತ್ ಶಾ ಟೈಮ್ಸ್ ನೌ ಶೃಂಗದಲ್ಲಿ ಹೇಳಿದ  ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಸಿಎಎ ವಾಪಸಾತಿ ಕೋರಿ ಕಳೆದ ವರ್ಷ ಡಿಸೆಂಬರ್ ಮಧ್ಯದಿಂದ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು "ಜನರ ಪ್ರತಿಭಟನೆ" (ಪಬ್ಲಿಕ್ ಪ್ರೊಟೆಸ್ಟ್)ಎಂದು ಕರೆಯಲಾಗುತ್ತಿದೆ  ಏಕೆಂದರೆ ಈ ಪ್ರತಿಭಟನೆಗಾರರನ್ನು ಯಾವೊಬ್ಬ ನಾಯಕ/ನಾಯಕಿಯರಿಲ್ಲದೆ ನಡೆಸಿಕೊಂಡು ಬರಲಾಗುತ್ತಿದೆ. ಶನಿವಾರ ಮಾಧ್ಯಮದವರೊಡನೆ ಮಾತನಾಡಿದ ಪ್ರತಿಭಟನಾಗಾರರು ಸಿಎಎ ವಿರೋಧಿ ಪ್ರತಿಭಟನಾಕಾರರ ಗುಂಪು  ಗೃಹ ಸಚಿವರನ್ನು ಭೇಟಿಯಾಗಲು ಹೊರಟಿರುವುದಾಗಿ ಹೇಳಿಕೊಂಡರು, ಮತ್ತು ಪ್ರತಿಯೊಬ್ಬರೂ ನಿಯೋಗವನ್ನು ತೆಗೆದುಕೊಳ್ಳುವ ಬದಲು ಗೃಹ ಸಚಿವರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇವೆ ಎಂದಿದ್ದರು."ಶಾ ತಮ್ಮನ್ನು ಭೇಟಿಯಾಗಲು ಟಿವಿನಲ್ಲಿ  ಎಲ್ಲರನ್ನೂ ಆಹ್ವಾನಿಸಿದ್ದಾರೆ, ಆದ್ದರಿಂದ ನಾವು ನಾಳೆ ಅವರನ್ನು ಭೇಟಿಯಾಗಲಿದ್ದೇವೆ. ಸಿಎಎಯಿಂದಾಗಿ ಯಾರು ಸಮಸ್ಯೆಯನ್ನು ಎದುರಿಸುತ್ತಾರೋ  ಅವರು ಶಾರನ್ನು ಭೇಟಿಯಾಗಬೇಕು ಎಂದು ಶಾ ಅವರೇ ಹೇಳಿದ್ದಾರೆ" ಹೆಸರು ಹೇಳಲು ಬಯಸದ ಪ್ರತಿಭಟನಾಗಾರರೊಬ್ಬರು ವಿವರಿಸಿದ್ದಾರೆ.

ಮಹಿಳಾ ಪ್ರತಿಭಟನಾಕಾರರೊಬ್ಬರು ನಾಳೆ ಎಲ್ಲ ಮಹಿಳೆಯರೂ ಗೃಹ ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದರು. "ನಾಳೆ ಮಧ್ಯಾಹ್ನ 2 ಗಂಟೆಗೆ ಎಲ್ಲರೂಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದೇವೆ. ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕಾರಣದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಎಲ್ಲಾ ನಾಗರಿಕರು ಹೋಗಿ ಅಮಿತ್ ಶಾ ಮತ್ತು ಪಿಎಂ ಮೋದಿಯವರನ್ನು ಭೇಟಿ ಮಾಡಬೇಕು" ಎಂದು ವಿನಂತಿಸಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com