ಮದುವೆ ಸಂಭ್ರಮಕ್ಕಾಗಿ ಹಾಕಿದ್ದ ಡಿಜೆ ಸಂಗೀತ ಕೇಳಿದ ಮದುಮಗ ಕುಸಿದು ಬಿದ್ದು ಸಾವು!

ಮದುವೆ ಸಂಭ್ರಮಕ್ಕೆಂದು ಹಾಕಿದ್ದ ಡಿಜೆ ಮ್ಯೂಸಿಕ್ ಯುವಕನ ಜೀವವನ್ನೇ ಬಲಿ ಪಡೆದಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿದೆ. ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದ 'ಬರಾತ್' ನಲ್ಲಿ ಡಿಜೆ ಸಂಗೀತ ಹೈಪಿಚ್ ನಿಂದಾಗಿ ಮದುಮಗಹೃದಯ ಸ್ಥಂಭನಗೊಂಡು ಪ್ರಾಣ ಬಿಟ್ಟಿದ್ದಾನೆ. ಅದೂ ಕೂಡ ಮದುಮಗನೇ ಹೀಗೆ ಸಾವನ್ನಪ್ಪಿರುವುದು ಎರಡೂ ಕುಟುಂಬದವರಿಗೆ ತೀವ್ರ ಆಘಾತ ತಂದಿದೆ.

Published: 15th February 2020 04:38 PM  |   Last Updated: 15th February 2020 04:38 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : IANS

ಹೈದರಾಬಾದ್: ಮದುವೆ ಸಂಭ್ರಮಕ್ಕೆಂದು ಹಾಕಿದ್ದ ಡಿಜೆ ಮ್ಯೂಸಿಕ್ ಯುವಕನ ಜೀವವನ್ನೇ ಬಲಿ ಪಡೆದಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿದೆ. ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದ 'ಬರಾತ್' ನಲ್ಲಿ ಡಿಜೆ ಸಂಗೀತ ಹೈಪಿಚ್ ನಿಂದಾಗಿ ಮದುಮಗಹೃದಯ ಸ್ಥಂಭನಗೊಂಡು ಪ್ರಾಣ ಬಿಟ್ಟಿದ್ದಾನೆ. ಅದೂ ಕೂಡ ಮದುಮಗನೇ ಹೀಗೆ ಸಾವನ್ನಪ್ಪಿರುವುದು ಎರಡೂ ಕುಟುಂಬದವರಿಗೆ ತೀವ್ರ ಆಘಾತ ತಂದಿದೆ.

ಮದುವೆಯಾದ ಕೆಲವೇ ಗಂಟೆಗಳ ನಂತರ ಎಂ.ಗಣೇಶ್ ಹೃದಯ ಸ್ಥಂಭನದಿಂದ ಕುಸಿದು ಬಿದ್ದಿದ್ದಾನೆ. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಹೃದಯ ಸ್ತಂಭನದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಹೈದರಾಬಾದ್‌ನಿಂದ 200 ಕಿ.ಮೀ ದೂರದಲ್ಲಿರುವ ಬೋಧನ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಮದುವೆ ಸಮಾರಂಭ ನಡೆದ ಮರುದಿನ ಗಣೇಶ್ ಅವರ ಕುಟುಂಬ ಸದಸ್ಯರು 'ಬರಾತ್' ಕಾರ್ಯಕ್ರಮಕ್ಕೆ ತೊಡಗಿದ್ದರು.ಆ ವೇಳೆ ಡಿಜೆ ಸದ್ದು  ಹೆಚ್ಚಿನ ಡೆಸಿಬೆಲ್ ನಿಂದ ಕೂಡಿತ್ತು. ಇದರಿಂದ ಮದುಮಗ ಅಚಾನಕ್ ಆಗಿ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದನು ಎಂದು ಕುಟುಂಬ ಮೂಲದವರು ಮಾಹಿತಿ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp