ದೆಹಲಿ ಗದ್ದುಗೆ ಏರಿದ ಅರವಿಂದ್ ಕೇಜ್ರಿವಾಲ್: ಸತತ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ 

ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ಸತತ ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ಅರವಿಂದ್ ಕೇಜ್ರಿವಾಲ್ ರಿಂದ ಪ್ರಮಾಣವಚನ
ಅರವಿಂದ್ ಕೇಜ್ರಿವಾಲ್ ರಿಂದ ಪ್ರಮಾಣವಚನ

ನವದೆಹಲಿ:ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ಸತತ ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 


ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಇಂದು ಸಾವಿರಾರು ಆಪ್ ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದರು. ಆಪ್ ಬೆಂಬಲಿಗರು ಪಕ್ಷದ ಧ್ವಜ, ಪೋಸ್ಟರ್, ತ್ರಿವರ್ಣಧ್ವಜ, ಫಲಕಗಳನ್ನು ಹಿಡಿದು ತಮ್ಮ ನೆಚ್ಚಿನ ನಾಯಕನ ಪರ ಘೋಷಣೆ ಕೂಗುವುದು ಕಂಡುಬಂತು.


ದೆಹಲಿ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದ ಸುಮಾರು 50 ಜನರು ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡರು. ಅವರಲ್ಲಿ ಶಿಕ್ಷಕರು, ಬಸ್ ಮಾರ್ಷಲ್ ಗಳು, ನೈರ್ಮಲ್ಯ ನೌಕರರು, ಅಗ್ನಿಶಾಮಕ ಸಿಬ್ಬಂದಿಯ ಕುಟುಂಬಸ್ಥರು ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದು ಕಂಡುಬಂತು.


ರಾಮಲೀಲಾ ಮೈದಾನದಲ್ಲಿ ಸಾಂಪ್ರದಾಯಿಕ ನೃತ್ಯಗಳು ಆಯೋಜನೆಗೊಂಡಿದ್ದವು. ಅಭಿವೃದ್ಧಿಪರ ಹೆಸರಿನಲ್ಲಿ ಪ್ರಚಾರ ಮಾಡಿ 62 ಸೀಟುಗಳನ್ನು ಗೆದ್ದುಕೊಂಡ ಆಪ್ ಅಧಿಕಾರದ ಗದ್ದುಗೆ ಏರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com