ಪ್ರಿಯಾಂಕ ಗಾಂಧಿ ರಾಜ್ಯಸಭೆಗೆ..!? 

ಕಾಂಗ್ರೆಸ್ ತನ್ನ ಪಥವನ್ನು ಬದಲಾಯಿಸಿಕೊಳ್ಳಲಿದೆಯೇ ? ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಆತ್ಮಾವಲೋಕನ ಮಾಡಿಕೊಂಡಿರುವ ಪಕ್ಷದ ವರಿಷ್ಠ ನಾಯಕರು ವಿಳಂಬ ಮಾಡದೆ ನೇರವಾಗಿ ರಂಗಕ್ಕೆ ಇಳಿದಿದ್ದಾರಂತೆ, 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾಂಗ್ರೆಸ್ ತನ್ನ ಪಥವನ್ನು ಬದಲಾಯಿಸಿಕೊಳ್ಳಲಿದೆಯೇ ? ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಆತ್ಮಾವಲೋಕನ ಮಾಡಿಕೊಂಡಿರುವ ಪಕ್ಷದ ವರಿಷ್ಠ ನಾಯಕರು ವಿಳಂಬ ಮಾಡದೆ ನೇರವಾಗಿ ರಂಗಕ್ಕೆ ಇಳಿದಿದ್ದಾರಂತೆ, ಈ ಬಾರಿ ರಾಜ್ಯಸಭೆಗೆ ಹಿರಿಯರ ಬದಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಕಳುಹಿಸಲು ಸೋನಿಯಾ ಗಾಂಧಿ ನಿರ್ಣಯಕ್ಕೆ ಬಂದಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ.

ಪ್ರಿಯಾಂಕಾ ಗಾಂಧಿ ಅವರೊಂದಿಗೆ ಇನ್ನೂ ಕೆಲವು ಕಿರಿಯ ನಾಯಕರನ್ನು ಕೂಡಾ ಹಿರಿಯರ ಮನೆಗೆ ಕಳುಹಿಸಿ . ಪಕ್ಷಕ್ಕೆ ಹೊಸ ಹುರುಪು ನೀಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳುತ್ತಿವೆ. ರಾಜ್ಯಸಭೆಯ ಹಿರಿಯರಾದ ಅಂಬಿಕಾ ಸೋನಿ, ಗುಲಾಮ್ ನಬಿ ಆಜಾದ್ ಮತ್ತು ದಿಗ್ವಿಜಯ ಸಿಂಗ್ ಅವರ ಸದಸ್ಯತ್ವದ ಅವಧಿ ಸಮೀಪಿಸುತ್ತಿದೆ. ಈ ಸ್ಥಾನಗಳಿಗೆ ಛತ್ತೀಸ್‌ಗಡ, ರಾಜಸ್ಥಾನ್ ಮತ್ತು ಜಾರ್ಖಂಡ್ ನಾಯಕರನ್ನು ನೇಮಿಸಲು ವರಿಷ್ಠರು ಮುಂದಾಗಿದ್ದರಂತೆ, ಹಿರಿಯರ ಮನೆಗೆ ಹಿರಿಯರನ್ನು ಕಳುಹಿಸುವ ಹಳೆಯ ಸಂಪ್ರದಾಯಕ್ಕೆ ಅಂತ್ಯವಾಡಿ ಯುವ ನಾಯಕರನ್ನು ರಾಜ್ಯಸಭೆಗೆ ಕಳುಹಿಸಲು ಗಂಭೀರ ಚಂತನೆ ನಡಸಿದೆ ಎಂದು ಕಾಂಗ್ರೆಸ್ ಪಕ್ಷದ ಒಂದು ವರ್ಗ ಬಲವಾಗಿ ನಂಬಿದೆ.

ಈ ಕಾರ್ಯತಂತ್ರದ ಭಾಗವಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯ ಸಭೆಗೆ ಕಳುಹಿಸಿ, ಪಕ್ಷವನ್ನು ಬಲಪಡಿಸಬೇಕೆಂದು ಸೋನಿಯಾ ಗಾಂಧಿ ಆಲೋಚನೆಯಾಗಿದೆ. ಇನ್ನೂ ಲೋಕಸಭೆಯಲ್ಲಿ ರಾಹುಲ್ ಗಾಂಧಿ, ರಾಜ್ಯಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಿ ಪಕ್ಷವನ್ನು ಬಲಪಡಿಸುವ ಸೂತ್ರವನ್ನು ಕಾಂಗ್ರೆಸ್ ವರಿಷ್ಠರು ಸಿದ್ದಪಡಿಸಿಕೊಂಡಿದ್ದಾರೆ. ಆದರೆ ಈ ವಿಚಾರದಲ್ಲಿ ಸೋನಿಯಾ ಗಾಂಧಿ ಸದ್ಯಕ್ಕೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೂ ಆ ದಿಕ್ಕಿನಲ್ಲಿ ಅಧ್ಯಕ್ಷರು ಹೆಜ್ಜೆ ಇರಿಸಲಿದ್ದಾರೆ ಕೋರ್ ಕಮಿಟಿ ಸದಸ್ಯರು ಬಲವಾಗಿ ನಂಬಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com