ಬಡ್ತಿ ಮೀಸಲಾತಿ; ಸುಪ್ರೀಂ ತೀರ್ಪು ವಿರುದ್ದ ಕಾಂಗ್ರೆಸ್ ಮರು ಪರಿಶೀಲನಾ ಆರ್ಜಿ ಸಲ್ಲಿಸಲಿದೆ; ಅನ್ಶುಲ್ ಅವಿಜಿತ್

ಮೀಸಲಾತಿ ವಿಷಯ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪು ಬಿಜೆಪಿ ಸರ್ಕಾರ ಹೂಡಿರುವ ಸಂಚಾಗಿದ್ದು, ತೀರ್ಪಿನ ವಿರುದ್ದ ಕಾಂಗ್ರೆಸ್ ಮರು ಪರಿಶೀಲನಾ ಆರ್ಜಿ ಸಲ್ಲಿಸಲಿದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಅನ್ಶುಲ್ ಅವಿಜಿತ್ ಹೇಳಿದ್ದಾರೆ.
ಬಡ್ತಿ ಮೀಸಲಾತಿ; ಸುಪ್ರೀಂ ತೀರ್ಪು ವಿರುದ್ದ ಕಾಂಗ್ರೆಸ್ ಮರು ಪರಿಶೀಲನಾ ಆರ್ಜಿ ಸಲ್ಲಿಸಲಿದೆ; ಅನ್ಶುಲ್ ಅವಿಜಿತ್
ಬಡ್ತಿ ಮೀಸಲಾತಿ; ಸುಪ್ರೀಂ ತೀರ್ಪು ವಿರುದ್ದ ಕಾಂಗ್ರೆಸ್ ಮರು ಪರಿಶೀಲನಾ ಆರ್ಜಿ ಸಲ್ಲಿಸಲಿದೆ; ಅನ್ಶುಲ್ ಅವಿಜಿತ್

ನಾಗಪುರ್: ಮೀಸಲಾತಿ ವಿಷಯ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪು ಬಿಜೆಪಿ ಸರ್ಕಾರ ಹೂಡಿರುವ ಸಂಚಾಗಿದ್ದು, ತೀರ್ಪಿನ ವಿರುದ್ದ ಕಾಂಗ್ರೆಸ್ ಮರು ಪರಿಶೀಲನಾ ಆರ್ಜಿ ಸಲ್ಲಿಸಲಿದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಅನ್ಶುಲ್ ಅವಿಜಿತ್ ಹೇಳಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ- ವರ್ಗಗಳಿಗೆ ಕಲ್ಪಿಸಿರುವ ಮೀಸಲಾತಿ ರದ್ದುಪಡಿಸಬೇಕೆಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಂತನೆಯಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಈ ಚಿಂತನೆಯನ್ನು ಪಾಲಿಸುತ್ತಿದೆ. ಸಂವಿಧಾನ ಅಡಿಪಾಯದ ಮೇಲೆ ದಾಳಿ ನೆಡೆದಿದ್ದರೂ ಅದನ್ನು ಬಿಜೆಪಿ ವಿರೋಧಿಸುತ್ತಿಲ್ಲ ಎಂದರು.

ಪರಿಶಿಷ್ಟಜಾತಿ, ವರ್ಗ ಹಾಗೂ ಓಬಿಸಿ ಸರ್ಕಾರಿ ಉದ್ಯೋಗಿಗಳಿಗೆ ಮೀಸಲಾತಿ ಕಲ್ಪಿಸಲು ರಾಜ್ಯಗಳು ಬದ್ದವಾಗಿಲ್ಲ ಎಂದು ಬಿಜೆಪಿ ಅಧಿಕಾರದಲ್ಲಿರುವ ಉತ್ತರಾ ಖಂಡ ರಾಜ್ಯ ಸರ್ಕಾರ ಸಲ್ಲಿಸಿದ ಆರ್ಜಿ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com