ಎನ್‌ಪಿಆರ್ ದಾಖಲೆ ತಯಾರಿಯನ್ನು ಘೋಷಿಸಿದ ಮೊದಲ ಈಶಾನ್ಯ ರಾಜ್ಯ ತ್ರಿಪುರಾ

ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯ ತ್ರಿಪುರಾ ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಜಾರಿಗೊಳಿಸಲು ಸಿದ್ದವಾಗಿದೆ. ಇದಾಗಲೇ ತ್ರಿಪುರಾದಲ್ಲಿ ಎನ್‌ಪಿಆರ್ ತಯಾರಿಸಲು ಅಗತ್ಯವಾದ ದತ್ತಾಂಶವನ್ನು ಸಂಗ್ರಹಕ್ಕೆ ಅಗತ್ಯ ಸಿದ್ದತೆ ನಡೆದಿದೆ.
ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ (ಫೈಲ್ ಚಿತ್ರ
ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ (ಫೈಲ್ ಚಿತ್ರ

ಗುವಾಹತಿ: ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯ ತ್ರಿಪುರಾ ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಜಾರಿಗೊಳಿಸಲು ಸಿದ್ದವಾಗಿದೆ. ಇದಾಗಲೇ ತ್ರಿಪುರಾದಲ್ಲಿ ಎನ್‌ಪಿಆರ್ ತಯಾರಿಸಲು ಅಗತ್ಯವಾದ ದತ್ತಾಂಶವನ್ನು ಸಂಗ್ರಹಕ್ಕೆ ಅಗತ್ಯ ಸಿದ್ದತೆ ನಡೆದಿದೆ.

 ಮೇ 16 ರಂದು ಮೊದಲ ಹಂತರ ಕೆಲಸಗಳು ಪ್ರಾರಂಭಗೊಳ್ಳಲಿದ್ದು  ಜೂನ್ 30 ರಂದು ಮುಕ್ತಾಯಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಶಾನ್ಯ ಭಾರತದಲ್ಲಿ ಎನ್‌ಪಿಆರ್ದಾಖಲೆಯ ತಯಾರಿಯನ್ನು  ಘೋಷಿಸಿದ ಮೊದಲ ರಾಜ್ಯ ತ್ರಿಪುರಾ ಎನಿಸಿದೆ.

ಮೊಬೈಲ್ ಆ್ಯಪ್ ಬಳಕೆಯ ಮೂಲಕ ಡೇಟಾವನ್ನು ಸಂಗ್ರಹಿಸಲು ರಾಜ್ಯಾದ್ಯಂತ 11,000 ಅಧಿಕಾರಿಗಳನ್ನು ನಿಯೋಜಿಸಲಾಗುವುದು ಅವರು ಜನಸಂಖ್ಯೆ ಹಾಗೂ  ಬಯೋಮೆಟ್ರಿಕ್ ವಿವರಗಳೊಂದಿಗೆ ಪ್ರತಿ ನಿವಾಸಿಗಳ ಡೇಟಾಬೇಸ್ ಅನ್ನು ನಿರ್ಮಿಸುತ್ತಾರೆ ಎಂದು ಮೂಲಗಳು ತಿಳಿಸಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com