ಮೋದಿ ಕಾಶ್ಮೀರಿ ನೀತಿಯನ್ನು ಟೀಕಿಸಿದ ಬ್ರಿಟನ್ ಸಂಸದೆಗೆ ಭಾರತ ಪ್ರವೇಶಕ್ಕೆ ನಿರಾಕರಣೆ

ತನ್ನ ಸಹಚರರೊಂದಿಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿದ ಬ್ರಿಟಿಷ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರಿಗೆ ಭಾರತೀಯ ಅಧಿಕಾರಿಗಳು ದೇಶದೊಳಗೆ ಬಿಟ್ಟಿಲ್ಲ.
ಡೆಬ್ಬಿ ಅಬ್ರಹಾಮ್ಸ್
ಡೆಬ್ಬಿ ಅಬ್ರಹಾಮ್ಸ್

ನವದೆಹಲಿ:  ತನ್ನ ಸಹಚರರೊಂದಿಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿದ 
ಬ್ರಿಟಿಷ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರಿಗೆ ಭಾರತೀಯ ಅಧಿಕಾರಿಗಳು ದೇಶದೊಳಗೆ ಬಿಟ್ಟಿಲ್ಲ.

ಮಾನ್ಯತೆ ಇರುವ ಭಾರತದ ವೀಸಾವನ್ನು ತಿರಸ್ಕರಿಸಿದ ಬಳಿಕ ವಿವಾದಿತ ಪ್ರದೇಶ ಕಾಶ್ಮೀರ ವಲಯದ ಗಮನ ಹರಿಸಲು ಬಂದಿದ್ದ ಲೇಬರ್ ಪಕ್ಷದ ಬ್ರಿಟನ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರ ನೇತೃತ್ವದ ತಂಡಕ್ಕೆ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಲಿಲ್ಲ ಎಂದು ಡೆಬ್ಬಿ ಅಬ್ರಹಾಮ್ಸ್  ಅವರ ಸಹಚರರಾದ ಹರ್ಪೀತ್ ಉಪ್ಪಾಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ದುಬೈನಿಂದ ಬೆಳಗ್ಗೆ 9 ಗಂಟೆಗೆ ಎಮಿರೈಟ್ಸ್ ವಿಮಾನದಲ್ಲಿ ಅಬ್ರಹಾಮ್ಸ್ ಹಾಗೂ ಉಪ್ಪಾಲ್ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು, ವೀಸಾದ ಅವಧಿ ಅಕ್ಬೋಬರ್ ವರೆಗೂ ಇದ್ದರೂ ಅದನ್ನು ರದ್ದು ಪಡಿಸಲಾಗಿದೆ. ಪ್ರವೇಶ ನಿರಾಕರಣೆಗೆ ಕಾರಣಗಳನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂದು ಉಪ್ಪಾಲ್ ಹೇಳಿದ್ದಾರೆ.ಆದರೆ, ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರರು ಕೂಡಾ ಏನನ್ನು ಹೇಳುತ್ತಿಲ್ಲ.

ಅಬ್ರಹಾಮ್ಸ್ ಕಳೆದ 2011ರಿಂದಲೂ ಬ್ರಿಟನ್ ಸಂಸತ್ತಿನ ಸದಸ್ಯರಾಗಿದ್ದಾರೆ. ಎರಡು ದಿನಗಳ ಕಾಲ ಭಾರತ ಭೇಟಿ ಕೈಗೊಂಡಿರುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ವೀಸಾವನ್ನು ಏಕೆ ಹಿಂಪಡೆಯಲಾಗಿದೆ ಎಂಬುದಕ್ಕೆ ಕಾರಣಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇನೆ. ಭಾರತ ಸರ್ಕಾರ ತನ್ನ ಮನಸ್ಸನ್ನು ಬದಲಾಯಿಸಿಕೊಳ್ಳದೆ ನಿರ್ಗಮನಕ್ಕಾಗಿ ಕಾಯುತ್ತ ಕೂರುವಂತಾಗಿದೆ. ಆದಾಗ್ಯೂ, ನಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೊಡುವ ವಿಶ್ವಾಸ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ಕಲಂ 370 ನೇ ತಿದ್ದುಪಡಿ ರದ್ದುಗೊಂಡ ಬಳಿಕವೇ ಕಾಶ್ಮೀರದ ಜನತೆ ಇಟ್ಟಿದ್ದ ನಂಬಿಕೆಗೆ ದ್ರೋಹ ಬಗೆಯಲಾಗಿದೆ ಎಂದು ಇಂಗ್ಲೆಂಡಿನಲ್ಲಿರುವ ಭಾರತೀಯ ಹೈಕಮೀಷನರ್ ಅವರಿಗೆ ಅಬ್ರಹಾಮ್ಸ್ ಪತ್ರ ಬರೆದಿದ್ದರು.

ಕಳೆದ ವಾರ  20 ಕ್ಕೂ ಹೆಚ್ಚು ವಿದೇಶಿ ರಾಜತಾಂತ್ರಿಕರು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದು ಇದೇ ರೀತಿಯ ಮತ್ತೊಂದು ಪ್ರವಾಸವಾಗಿದ್ದು, ಯಾವುದೇ ವಿದೇಶಿ ಪತ್ರಕರ್ತರಿಗೆ ಅವಕಾಶ ನೀಡುತ್ತಿಲ್ಲ. ಈ ಪ್ರದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com