ಶಾಹೀನ್ ಬಾಗ್ ಪ್ರತಿಭಟನೆ: ಮಧ್ಯಸ್ಥಿಕೆ ವಹಿಸುವಂತೆ ಸಂಜಯ್ ಹೆಗ್ಡೆ, ಸಾಧನಾ ರಾಮಚಂದ್ರನ್ ಕೇಳಿದ ಸುಪ್ರೀಂ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರೊಂದಿಗೆ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸುವಂತೆ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಅವರನ್ನು ಸುಪ್ರೀಂಕೋರ್ಟ್ ಕೇಳಿದೆ
ಸುಪ್ರೀಂ ವಕೀಲರಾದ ಅಮಿತ್ ಸಾಹ್ನಿ ಮತ್ತಿತರರು
ಸುಪ್ರೀಂ ವಕೀಲರಾದ ಅಮಿತ್ ಸಾಹ್ನಿ ಮತ್ತಿತರರು

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರೊಂದಿಗೆ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸುವಂತೆ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಅವರನ್ನು ಸುಪ್ರೀಂಕೋರ್ಟ್ ಕೇಳಿದೆ

ಶಾಹೀನ್ ಬಾಗ್ ನಿಂದ ರಾಷ್ಟ್ರ ರಾಜಧಾನಿಯ ಬೇರೆ ಕಡೆಗೆ ಪ್ರತಿಭಟನೆಯನ್ನು ಸ್ಥಳಾಂತರಿಸಲು ಒಪ್ಪಿಕೊಳ್ಳಬಹುದಾ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಾಧೀಶರಾದ ಎಸ್ ಕೆ ಕೌಲ್ ಮತ್ತು ಕೆಎಂ ಜೋಷೆಫ್  ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕೇಳಿಕೊಂಡಿದೆ.

ಸಮಾಜದ ಒಂದು ವರ್ಗ ಒಂದು ಅಂಶವನ್ನು ಧ್ವನಿ ಎತ್ತಿರುವುದು  ಒಪ್ಪಿಕೊಳ್ಳಬಹುದು ಆದರೆ, ಸೀಮಿತ ಪ್ರಶ್ನೆಯೆಂದರೆ ಅದನ್ನು ಮಾಡಬಹುದಾದ ಸ್ಥಳ" ಎಂದು ನ್ಯಾಯಮೂರ್ತಿ ಕೌಲ್ ಟೀಕಿಸಿದರು. ಜನರಿಗೆ ಪ್ರತಿಭಟಿಸುವ ಹಕ್ಕಿಲ್ಲ ಎಂದು ನಾವು ಹೇಳುವುದಿಲ್ಲ. ಆದರೆ, ರಸ್ತೆಯನ್ನು ಬಂದ್ ಮಾಡಬಾರದು ಎಂದು ನ್ಯಾಯಾಧೀಶ ಜೋಷೆಪ್ ಅಭಿಪ್ರಾಯಪಟ್ಟರು.
 
ಡಿಸೆಂಬರ್ 15 ರಿಂದ ಶಾಹೀನ್ ಬಾಗ್ ನಲ್ಲಿ  ನಡೆಯುತ್ತಿರುವ ಪ್ರತಿಭಟನೆಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ದೆಹಲಿ ಪೊಲೀಸರಿಗೆ ನಿರ್ದೇಶಿಸುವಂತೆ ವಕೀಲ ಅಮಿತ್ ಶಾಹ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ನಡೆಸಿತು.

ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಮಾತನಾಡಲು ಮಧ್ಯಸ್ಥಿಕೆ ವಹಿಸುವಂತೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಅವರ ಪರ ವಕೀಲರು ಸೇರಿದಂತೆ ಮತ್ತಿತರರನ್ನು ಸುಪ್ರೀಂಕೋರ್ಟ್ ಕೇಳಿಕೊಂಡಿತು. ಪ್ರತಿಭಟನೆ ಮಾಡುವ ಹಕ್ಕು ಹೊಂದಿದ್ದೀರಿ ಆದರೆ, ಅಲ್ಲಿ ಅನೇಕ ಸ್ಪರ್ಧಾತ್ಮಕ ಹಿತಾಸಕ್ತಿಯ ವಿಚಾರಣೆಗಳಿವೆ ಎಂದು ಹೇಳಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com