ಗಾರ್ಗಿ ಲೈಂಗಿಕ ಕಿರುಕುಳ ಪ್ರಕರಣ: ಹೈಕೋರ್ಟ್‌ನಿಂದ ಕೇಂದ್ರ, ಸಿಬಿಐ, ದೆಹಲಿ ಪೊಲೀಸರಿಗೆ ನೋಟಿಸ್‌

ಗಾರ್ಗಿ ಕಾಲೇಜಿನ ಸಾಂಸ್ಕೃತಿಕ ಉತ್ಸವವೊಂದರಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಬಗ್ಗೆ ಕೇಂದ್ರೀಯ ತನಿಖಾ ದಳದ ತನಿಖೆಯನ್ನು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರ, ಸಿಬಿಐ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ.

Published: 17th February 2020 04:19 PM  |   Last Updated: 17th February 2020 04:19 PM   |  A+A-


judgment1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ನವದೆಹಲಿ: ಗಾರ್ಗಿ ಕಾಲೇಜಿನ ಸಾಂಸ್ಕೃತಿಕ ಉತ್ಸವವೊಂದರಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಬಗ್ಗೆ ಕೇಂದ್ರೀಯ ತನಿಖಾ ದಳದ ತನಿಖೆಯನ್ನು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರ, ಸಿಬಿಐ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ.  ಘಟನೆಯ ಹಿಂದೆ ರಾಜಕೀಯ ಇದೆ ಎಂಬ ಆರೋಪ ಕೂಡ ಕೇಳಿಬಂದಿತ್ತು.

ಫೆಬ್ರವರಿ 8ರ ವಿಧಾನಸಭಾ ಚುನಾವಣೆಗೂ ಎರಡು ದಿನಗಳ ನಂತರ ದೆಹಲಿಯ ಸಾರ್ವಜನಿಕರು ತಮ್ಮ ಪರವಾಗಿ ಮತ ಚಲಾಯಿಸುವಂತೆ ಪ್ರಚೋದಿಸಲು ರಾಜಕೀಯ ಪಕ್ಷವು ನಡೆಸಿದ ಸ್ಪಷ್ಟ ಅಪರಾಧ ಪಿತೂರಿ ಎಂದು ಪಿಐಎಲ್‌ನಲ್ಲಿ ಆರೋಪಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಜಿ. ಎಸ್. ಸಿಸ್ತಾನಿ ಮತ್ತು ಸಿ. ಹರಿಶಂಕರ್ ಅವರ ವಿಭಾಗೀಯ ಪೀಠವು ಪಿಐಎಲ್ ವಿಚಾರಣೆ ನಡೆಸಿದ ನಂತರ ಕೇಂದ್ರ ಸರ್ಕಾರ, ಸಿಬಿಐ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ. ಮಾತ್ರವಲ್ಲ ಉತ್ತರ ನೀಡಲು ಮತ್ತು ವಾದಗಳನ್ನು ಸಲ್ಲಿಸಲು ಏಪ್ರಿಲ್ 30ರ ಸಮಯವನ್ನು ನಿಗದಿ ಮಾಡಿದೆ.

ಫೆಬ್ರವರಿ 14 ರಂದು, ಸಿಬಿಐ ವಿಚಾರಣೆಗೆ ಕೋರಿ ಪಿಐಎಲ್ ಅನ್ನು ನ್ಯಾಯಪೀಠ ಇಂದಿನ ದಿನಕ್ಕೆ ಪಟ್ಟಿ ಮಾಡಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp