2013ರಲ್ಲಿ ಮನಮೋಹನ್ ಸಿಂಗ್ ರಾಜೀನಾಮೆ ನೀಡಬೇಕೆ ಎಂದು ಕೇಳಿದ್ದರು: ಮಾಂಟೆಕ್ ಸಿಂಗ್ ಅಹ್ಲುವಾಲಿಯಾ 

2013ರಲ್ಲಿ ಅಂದಿನ ಯುಪಿಎ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವರ್ತನೆಯಿಂದ ಬೇಸತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ ಎಂದು ಡಾ ಮನಮೋಹನ್ ಸಿಂಗ್ ಕೇಳಿದ್ದರು ಎಂದು ಯೋಜನಾ ಆಯೋಗದ ಮಾಜಿ ಆಯುಕ್ತ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.
ಡಾ ಮನಮೋಹನ್ ಸಿಂಗ್
ಡಾ ಮನಮೋಹನ್ ಸಿಂಗ್

ನವದೆಹಲಿ: 2013ರಲ್ಲಿ ಅಂದಿನ ಯುಪಿಎ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವರ್ತನೆಯಿಂದ ಬೇಸತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ ಎಂದು ಡಾ ಮನಮೋಹನ್ ಸಿಂಗ್ ಕೇಳಿದ್ದರು ಎಂದು ಯೋಜನಾ ಆಯೋಗದ ಮಾಜಿ ಆಯುಕ್ತ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.


ಆಗ ತಾವು ಈ ವಿಷಯಕ್ಕೆ ರಾಜೀನಾಮೆ ನೀಡುವುದು ಸರಿಯಲ್ಲ, ಈ ಸಂದರ್ಭದಲ್ಲಿ ಸುಮ್ಮನೆ ಇರುವುದು ಉತ್ತಮ ಎಂದು ಹೇಳಿದ್ದೆ ಎಂದು ಅಹ್ಲುವಾಲಿಯಾ ಹೇಳಿದ್ದಾರೆ. ಅವರು ಬರೆದಿರುವ ''ಬ್ಯಾಕ್ ಸ್ಟೇಜ್:ದ ಸ್ಟೋರಿ ಬಿಹೈಂಡ್ ಇಂಡಿಯಾಸ್ ಹೈ ಗ್ರೋತ್ ಇಯರ್ಸ್''ಎಂಬ ಪುಸ್ತಕದಲ್ಲಿ ಈ ವಿಷಯ ನಮೂದಾಗಿದೆ.

ಅಪರಾಧಿಗಳು ಎಂದು ಸಾಬೀತಾದ ಜನಪ್ರತಿನಿಧಿಗಳ ವಿಚಾರಕ್ಕೆ ಸಂಬಂಧಿಸಿದಂತೆ 2013ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅಸಿಂಧುಗೊಳಿಸಲು ಯುಪಿಎ ಸರ್ಕಾರ ಸುಗ್ರೀವಾಜ್ಞೆ ತಂದಿತ್ತು. ಇದನ್ನು ಅಸಂಬದ್ಧ ಎಂದು ಬಹಿರಂಗವಾಗಿ ಟೀಕಿಸಿದ್ದ ರಾಹುಲ್ ಗಾಂಧಿ ಸುಗ್ರೀವಾಜ್ಞೆ ಪ್ರತಿಯನ್ನು ಹರಿದು ಹಾಕಿದ್ದರು. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರವುಂಟಾಗಿತ್ತು. ಅದು ದೇಶಾದ್ಯಂತ ಆಗ ಸುದ್ದಿಯಾಗಿತ್ತು. 


ಇದಾದ ಬಳಿಕ ಮನಮೋಹನ್ ಸಿಂಗ್ ಅವರು ಅಮೆರಿಕಾ ಪ್ರವಾಸ ಹೋಗಿದ್ದರು. ಅವರ ಜೊತೆ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಕೂಡ ಇದ್ದರು. ಐಎಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದ ಅಹ್ಲುವಾಲಿಯಾ ಅವರ ಸೋದರ ಸಂಜೀವ್ ಪ್ರಧಾನಿಯವರ ಬಗ್ಗೆ ಲೇಖನ ಬರೆದು ಅಹ್ಲುವಾಲಿಯಾ ಅವರಿಗೆ ಮೇಲ್ ಮಾಡಿದ್ದರಂತೆ. ಅದನ್ನು ಪ್ರಧಾನಿ ಸಿಂಗ್ ಅವರ ಮುಂದೆ ಓದಿದಾಗ ಮೊದಲು ಏನೂ ಪ್ರತಿಕ್ರಿಯಿಸದೆ ನಂತರ ಸಿಂಗ್ ಅವರು, ನಾನು ಪಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ ಎಂದು ಕೇಳಿದ್ದರಂತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com