ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ, ಕಮಾಂಡ್ ಹುದ್ದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಲಿಂಗ ತಾರತಮ್ಯವನ್ನು ಹೊಡೆದೋಡಿಸುವ ರೀತಿಯಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು, ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ಸ್ಥಾಪಿಸುವುದಲ್ಲದೆ ಪುರುಷ ಅಧಿಕಾರಿಗಳಿಗೆ ಸಮನಾಗಿ ಕಮಾಂಡ್ ಹುದ್ದೆಯನ್ನು ನೀಡಬೇಕು ಎಂದು ಹೇಳಿದೆ. 
ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ನಂತರ ಸೇನೆಯ ಮಹಿಳಾ ಅಧಿಕಾರಿಗಳು ಗೆಲುವಿನ ಸಂಕೇತ ತೋರಿಸುತ್ತಿರುವುದು.
ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ನಂತರ ಸೇನೆಯ ಮಹಿಳಾ ಅಧಿಕಾರಿಗಳು ಗೆಲುವಿನ ಸಂಕೇತ ತೋರಿಸುತ್ತಿರುವುದು.

ನವದೆಹಲಿ: ಲಿಂಗ ತಾರತಮ್ಯವನ್ನು ಹೊಡೆದೋಡಿಸುವ ರೀತಿಯಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು, ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ಸ್ಥಾಪಿಸುವುದಲ್ಲದೆ ಪುರುಷ ಅಧಿಕಾರಿಗಳಿಗೆ ಸಮನಾಗಿ ಕಮಾಂಡ್ ಹುದ್ದೆಯನ್ನು ನೀಡಬೇಕು ಎಂದು ಹೇಳಿದೆ. 


ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಅಜಯ್ ರಸ್ತೊಗಿ ಅವರನ್ನೊಳಗೊಂಡ ನ್ಯಾಯಪೀಠ ಇಂದು ಈ ತೀರ್ಪು ನೀಡಿ, ತನ್ನ ಆದೇಶವನ್ನು ಜಾರಿಗೆ ತರಲು ಕೇದ್ರ ಸರ್ಕಾರಕ್ಕೆ ಮೂರು ತಿಂಗಳ ಸಮಯಾವಕಾಶ ನೀಡಿದೆ. ಅಲ್ಲದೆ ಸೇನೆಯಲ್ಲಿ ಪುರುಷ ಅಧಿಕಾರಿಗಳಿಗೆ ಸಮನಾಗಿ ಮಹಿಳಾ ಅಧಿಕಾರಿಗಳಿಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿದೆ. ಸಾಮಾಜಿಕ ಕಟ್ಟುಪಾಡು, ಕೌಟುಂಬಿಕ ಜವಾಬ್ದಾರಿ, ಶಾರೀರಿಕ ಇತಿಮಿತಿಗಳಿಗೆ ಮಹಿಳಾ ಅಧಿಕಾರಿಗಳನ್ನು ಸೀಮಿತಗೊಳಿಸುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಛ ಛಾಟಿಯೇಟು ಬೀಸಿದೆ.


ಇಂದು ನ್ಯಾಯಪೀಠ ಹೇಳಿದ್ದೇನು?:
-ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸಬೇಕು. 
-ಸೇನಾಪಡೆಯಲ್ಲಿ ಮಹಿಳಾ ಅಧಿಕಾರಿಗಳ ಮೇಲಿನ ಲಿಂಗ ತಾರತಮ್ಯ ನಿವಾರಣೆಗೆ ಸರ್ಕಾರ ತನ್ನ ಮನೋಧರ್ಮವನ್ನು ಬದಲಾಯಿಸಿಕೊಳ್ಳಬೇಕು.
-ಸಾಮಾಜಿಕ ಕಟ್ಟುಪಾಡುಗಳು, ಶಾರೀರಿಕ ಇತಿಮಿತಿಗಳನ್ನು ಮುಂದಿಟ್ಟುಕೊಂಡು ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನಿರಾಕರಿಸುವುದು ಸರಿಯಲ್ಲ. ಸೇನೆಯಲ್ಲಿರುವ ಹಲವು ಮಹಿಳಾ ಅಧಿಕಾರಿಗಳು ಅತ್ಯುತ್ತಮ ಸಾಧನೆ ತೋರುತ್ತಿದ್ದು ಭಾರತೀಯ ಸೇನೆಗೆ ಅಪಾರ ಕೀರ್ತಿ, ಗೌರವ ತಂದಿದ್ದಾರೆ.
-2010ರಲ್ಲಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ ನಂತರವೂ ಸೇನೆಯ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರ ಉದಾಸೀನತೆ, ಅಸಡ್ಡೆ ತೋರುವುದು ಸರಿಯಲ್ಲ, ದೆಹಲಿ ಹೈಕೋರ್ಟ್ ತೀರ್ಪು ಸರಿಯಾಗಿದೆ. 
-ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಹುದ್ದೆ ನಿರಾಕರಿಸುವುದು ಲಿಂಗ ಸಮಾನತೆಗೆ ಮತ್ತು ಕಾನೂನಿಗೆ ವಿರುದ್ಧ, ಸರ್ಕಾರದ ವಾದ ಕಾನೂನಿನಲ್ಲಿ ಗೆಲ್ಲುವುದಿಲ್ಲ.
-ಮಹಿಳೆಯರು ದುರ್ಬಲರಲ್ಲ. ಸೇನೆಯಲ್ಲಿ ಯುದ್ಧರಹಿತ ಸೇವಾ ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಪುರುಷ ಅಧಿಕಾರಿಗಳಿಗೆ ಸಮನಾಗಿ ಕಾಣಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com