12 ವರ್ಷಗಳ ನಂತರ ಅಮೆರಿಕದಿಂದ ವಾಪಸ್ ಬಂದು ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಯುವತಿ, ಶಿಕ್ಷಕನ ಬಂಧನ

ಮುಂಬೈ ಯುವತಿಯೊಬ್ಬರು ಸುಮಾರು 12 ವರ್ಷಗಳ ನಂತರ ಅಮೆರಿಕದಿಂದ ವಾಪಸ್ ಬಂದು, ಬಾಲ್ಯದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದ ಸಂಗೀತ ಶಿಕ್ಷಕನ ವಿರುದ್ಧ ಕೇಸ್ ದಾಖಲಿಸಿದ್ದು, ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

Published: 17th February 2020 04:41 PM  |   Last Updated: 17th February 2020 04:41 PM   |  A+A-


99-yr-old retired principal Rapes 10-yr-old girl in Chennai

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ಮುಂಬೈ: ಮುಂಬೈ ಯುವತಿಯೊಬ್ಬರು ಸುಮಾರು 12 ವರ್ಷಗಳ ನಂತರ ಅಮೆರಿಕದಿಂದ ವಾಪಸ್ ಬಂದು, ಬಾಲ್ಯದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದ ಸಂಗೀತ ಶಿಕ್ಷಕನ ವಿರುದ್ಧ ಕೇಸ್ ದಾಖಲಿಸಿದ್ದು, ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ತಾನು, ಒಂಬತ್ತು ವರ್ಷದವಳಿದ್ದಾಗ ಗಿಟಾರ್ ಶಿಕ್ಷಕ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದು, ದೂರಿನ ಆಧಾರ ಮೇಲೆ 55 ವರ್ಷದ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಮುಂಬೈನ ಅಂಧೇರಿಯಲ್ಲಿ ವಾಸವಾಗಿದ್ದಾಗ 2007ರಿಂದ 2010ರ ವರೆಗೆ ಮೂರು ವರ್ಷಗಳ ಕಾಲ ಗಿಟಾರ್ ಶಿಕ್ಷಕ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಯುವತಿ ದೂರಿದ್ದಾರೆ.

ಯುವತಿಗೆ ಈಗ 21 ವರ್ಷವಾಗಿದ್ದು, 12 ವರ್ಷದವಳಿದ್ದಾಗ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಈಗ ಕಾಲೇಜ್ ವೊಂದರಲ್ಲಿ ಓದುತ್ತಿದ್ದು, ಭಾನುವಾರ ಅಮೆರಿಕದಿಂದ ಮುಂಬೈ ಆಗಿಮಿಸಿದ ಯುವತಿ, ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ.

ಯುವತಿ ಹೇಳಿಕೆ ಪಡೆದ ಒಶಿವಾರ ಪೊಲೀಸ್ ಠಾಣೆಯ ಪೊಲೀಸರು, ಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಸಂಗೀತ ಪಾಠ ಕಲಿಯಲು ಹೋಗಿದ್ದಾಗ ಶಿಕ್ಷಕ ತನಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಕೆಟ್ಟ ಪದಗಳನ್ನು ಬಳಸುತ್ತಿದ್ದರು ಎಂದು ಯುವತಿ ದೂರಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp