ಪಾಕ್ ಬೆಂಬಲಿಸುವ ಬ್ರಿಟಿಷ್ ಸಂಸದೆಯ ವೀಸಾ ರದ್ದು ಸರಿ: ಕೇಂದ್ರ ಸರ್ಕಾರದ ನಡೆ ಸಮರ್ಥಿಸಿದ ಕಾಂಗ್ರೆಸ್

ಪಾಕಿಸ್ತಾನ ಮುಖವಾಡ ಧರಿಸಿರುವ ಬ್ರಿಟನ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರಿಗೆ ಕೇಂದ್ರ ಸರ್ಕಾರ ವೀಸಾ ನಿರಾಕರಿಸಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಸಿಂಘ್ವಿ ಬೆಂಬಲಿಸಿದ್ದಾರೆ.
ಅಭಿಷೇಕ್ ಸಿಂಘ್ವಿ
ಅಭಿಷೇಕ್ ಸಿಂಘ್ವಿ

ನವದೆಹಲಿ: ಪಾಕಿಸ್ತಾನ ಮುಖವಾಡ ಧರಿಸಿರುವ ಬ್ರಿಟನ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರಿಗೆ ಕೇಂದ್ರ ಸರ್ಕಾರ ವೀಸಾ ನಿರಾಕರಿಸಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಸಿಂಘ್ವಿ ಬೆಂಬಲಿಸಿದ್ದಾರೆ.

ಡೆಬ್ಬಿ ಅಬ್ರಹಾಮ್ಸ್ ಕೇವಲ ಸಂಸದೆಯಾಗಿಲ್ಲ. ಪಾಕ್ ಮುಖವಾಡ ಧರಿಸಿರುವ ಅವರು ಪಾಕಿಸ್ತಾನದ ಇ-ಆಡಳಿತ ಮತ್ತು ಐಎಸ್ಐನೊಂದಿಗೆ ಉತ್ತಮ ನಂಟು ಹೊಂದಿದ್ದಾರೆ. ಇಂತಹವರಿಗೆ ಭಾರತ ಪ್ರವೇಶ ನಿರಾಕರಣೆ ಅವಶ್ಯವಾಗಿತ್ತು. ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ನಡೆಸುವ ಪ್ರತಿಯೊಂದು ಪ್ರಯತ್ನಕ್ಕೂ ತಡೆಯೊಡ್ಡಬೇಕು ಎಂದು ಸಿಂಘ್ವಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಬ್ರಹಾಮ್ಸ್ ಟೀಕಿಸಿದ್ದರು. ದುಬೈನಿಂದ ಭಾರತಕ್ಕೆ ಬಂದಿದ್ದ ಅಬ್ರಹಾಮ್ಸ್ ಅವರನ್ನು ವಾಪಸ್ ಕಳುಹಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com