ಮನಮೋಹನ್ ಸಿಂಗ್ ಅವರನ್ನು ಅಗೌರವಿಸುವ ಕುರಿತು ಕಾಂಗ್ರೆಸ್ ಎಂದಿಗೂ ಯೋಚಿಸಿರಲಿಲ್ಲ: ಅಹುವಾಲಿಯಾ ಹೇಳಿಕೆಗೆ ಕಾಂಗ್ರೆಸ್

ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಅಗೌರವಿಸುವ ಕುರಿತು ಕಾಂಗ್ರೆಸ್ ಎಂದಿಗೂ ಚಿಂತಿಸಿರಲಿಲ್ಲ ಎಂದು ಕಾಂಗ್ರೆಸ್ ಹೇಳಿದ್ದು, 2013ರಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆ ಕುರಿತು ರಾಹುಲ್ ಗಾಂಧಿಯವರ ವರ್ತನೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. 
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್

ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಅಗೌರವಿಸುವ ಕುರಿತು ಕಾಂಗ್ರೆಸ್ ಎಂದಿಗೂ ಚಿಂತಿಸಿರಲಿಲ್ಲ ಎಂದು ಕಾಂಗ್ರೆಸ್ ಹೇಳಿದ್ದು, 2013ರಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆ ಕುರಿತು ರಾಹುಲ್ ಗಾಂಧಿಯವರ ವರ್ತನೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. 

ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು ಮಾತನಾಡಿ, ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರಿಗೆ ಚುನಾವಣೆಯಲ್ಲಿ ಸ್ಪರ್ಥಿಸುವ ಅವಕಾಶ ನೀಡುವಂತೆ ಯುಪಿಎ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ತಿರಸ್ಕರಿಸುವ ಮೂಲಕ ರಾಹುಲ್ ಗಾಂಧಿಯವರು ದಿಟ್ಟ ಹೆಜ್ಜೆಯನ್ನಿಟ್ಟಿದ್ದರು ಎಂದು ಹೇಳಿದ್ದಾರೆ. 

ಇಬ್ಬರು ನಾಯಕರ ವಿರದ್ಧ ಯಾವ ರೀತಿಯ ಚರ್ಚೆಯಾಗಿತ್ತು ಎಂಬುದು ನನಗೆ ಗೊತ್ತಿಲ್ಲ. ಆದರೆ, ರಾಹುಲ್ ಅವರು ಮನಮೋಹನ್ ಸಿಂಗ್ ಅವರನ್ನು ತಮ್ಮ ಗುರು ಎಂದು ನಂಬಿದ್ದಾರೆ. ಪಕ್ಷವಾಗಲೀ ಅಥವಾ ರಾಹುಲ್ ಗಾಂಧಿಯಾಗಲೀ ಎಂದಿಗೂ ಸಿಂಗ್ ಅವರನ್ನು ಅಗೌರವದಿಂದ ಕಾಣುವ ಕುರಿತು ಚಿಂತಿಸಿಲ್ಲ ಎಂದು ತಿಳಿಸಿದ್ದಾರೆ. 

ವಿಚಾರ ಕೇವಲ ಪೇಪರ್ ಹರಿದು ಹಾಕುವುದಷ್ಟೇ ಆಗಿರಲಿಲ್ಲ. ರಾಜಕೀಯವನ್ನು ಶುದ್ಧೀಕರಿಸುವುದಾಗಿತ್ತು. ಕ್ರಿಮಿನಲ್ ಗಳನ್ನು ರಾಜಕೀಯದಿಂದ ದೂರ ಇರಿಸುವುದಾಗಿತ್ತು. ಸುಗ್ರೀವಾಜ್ಞೆ ರದ್ದುಪಡಿಸಿದ ಬಳಿಕ ಸುಪ್ರೀಂಕೋರ್ಟ್ ಕೂಡ ಕ್ರಿಮಿನಲ್ ಅಭ್ಯರ್ಥಿಗಳ ಕುರಿತ ಮಾಹಿತಿ ಬಹಿರಂಗಪಡಿಸುವಂತೆ ಎಲ್ಲಾ ಪಕ್ಷಗಳಿಗೂ ಸೂಚನೆ ನೀಡಿತ್ತು ಎಂದಿದ್ದಾರೆ. 

ನಿನ್ನೆಯಷ್ಟೇ ಹೇಳಿಕೆ ನೀಡಿದ್ಜ ಯೋಜನಾ ಆಯೋಗದ ಮಾಜಿ ಆಯುಕ್ತ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, 2013ರಲ್ಲಿ ಅಂದಿನ ಯುಪಿಎ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವರ್ತನೆಯಿಂದ ಬೇಸತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ ಎಂದು ಡಾ ಮನಮೋಹನ್ ಸಿಂಗ್ ಕೇಳಿದ್ದರು. ಆಗ ತಾವು ಈ ವಿಷಯಕ್ಕೆ ರಾಜೀನಾಮೆ ನೀಡುವುದು ಸರಿಯಲ್ಲ, ಈ ಸಂದರ್ಭದಲ್ಲಿ ಸುಮ್ಮನೆ ಇರುವುದು ಉತ್ತಮ ಎಂದು ಹೇಳಿದ್ದೆ ಎಂದು ಹೇಳಿದ್ದರು. 

ಅಪರಾಧಿಗಳು ಎಂದು ಸಾಬೀತಾದ ಜನಪ್ರತಿನಿಧಿಗಳ ವಿಚಾರಕ್ಕೆ ಸಂಬಂಧಿಸಿದಂತೆ 2013ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅಸಿಂಧುಗೊಳಿಸಲು ಯುಪಿಎ ಸರ್ಕಾರ ಸುಗ್ರೀವಾಜ್ಞೆ ತಂದಿತ್ತು. ಇದನ್ನು ಅಸಂಬದ್ಧ ಎಂದು ಬಹಿರಂಗವಾಗಿ ಟೀಕಿಸಿದ್ದ ರಾಹುಲ್ ಗಾಂಧಿ, ಸುಗ್ರೀವಾಜ್ಞೆ ಪ್ರತಿಯನ್ನು ಹರಿದು ಹಾಕಿದ್ದರು. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರವುಂಟಾಗಿತ್ತು. ಅದು ದೇಶಾದ್ಯಂತ ಆಗ ಸುದ್ದಿಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com