ಫೆ.19 ರಂದು ರಾಮ ಜನ್ಮಭೂಮಿ ಟ್ರಸ್ಟ್ ನ ಮೊದಲ ಸಭೆ: ಮಂದಿರ ನಿರ್ಮಾಣದ ಕುರಿತು ಮಹತ್ವದ ಚರ್ಚೆ

ಫೆ.5 ರಿಂದ ಅಸ್ತಿತ್ವಕ್ಕೆ ಬಂದಿರುವ ರಾಮ ಜನ್ಮಭೂಮಿ ಟ್ರಸ್ತ್ ನ ಮೊದಲ ಸಭೆ ಫೆ.19 ರಂದು ನವದೆಹಲಿಯಲ್ಲಿ ನಡೆಯಲಿದೆ 

Published: 18th February 2020 06:33 PM  |   Last Updated: 18th February 2020 06:33 PM   |  A+A-


First meeting of Ram Janmabhoomi Trust to take place in Delhi on February 19th

ಫೆ.19 ರಂದು ರಾಮ ಜನ್ಮಭೂಮಿ ಟ್ರಸ್ಟ್ ನ ಮೊದಲ ಸಭೆ: ಮಂದಿರ ನಿರ್ಮಾಣದ ಕುರಿತು ಮಹತ್ವದ ಚರ್ಚೆ

Posted By : Srinivas Rao BV
Source : Online Desk

ಫೆ.5 ರಿಂದ ಅಸ್ತಿತ್ವಕ್ಕೆ ಬಂದಿರುವ ರಾಮ ಜನ್ಮಭೂಮಿ ಟ್ರಸ್ಟ್ ನ ಮೊದಲ ಸಭೆ ಫೆ.19 ರಂದು ನವದೆಹಲಿಯಲ್ಲಿ ನಡೆಯಲಿದೆ. 

ಜ್ಹೀ ಮಾಧ್ಯಮದ ವರದಿಯ ಪ್ರಕಾರ ಟ್ರಸ್ಟ್ ನ ಕೆ. ಪರಾಶರನ್ ಅವರ ನವದೆಹಲಿಯ ನಿವಾಸದಲ್ಲಿ ಸಂಜೆ 5 ಕ್ಕೆ ಈ ಸಭೆ ನಡೆಯಲಿದ್ದು, ಈಗಾಗಲೇ ಟ್ರಸ್ಟ್ ನ ಎಲ್ಲಾ ಸದಸ್ಯರು ನವದೆಹಲಿಗೆ ಆಗಮಿಸಿದ್ದಾರೆ. 

ರಾಮ ಜನ್ಮಭೂಮಿ ನ್ಯಾಸ್ ನ ಮುಖ್ಯಸ್ಥ ಮಹಾಂತ್ ಗೋಪಾಲ್ ದಾಸ್, ಅವರನ್ನೂ ಸಹ ಸಭೆಗೆ ಆಹ್ವಾನಿಸಲಾಗಿದೆ. ಇದಕ್ಕೂ ಮುಂಚಿನ ವರದಿಗಳ ಪ್ರಕಾರ ಟ್ರಸ್ಟ್ ನ ಮೊದಲ ಸಭೆ ಪ್ರಯಾಗ್ ರಾಜ್ ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಫೆ.19 ರ ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಪದಾಧಿಕಾರಿಗಳ ಚುನಾವಣೆ ನಡೆಯಲಿದ್ದು, ದೇಣಿಗೆ ಸಂಗ್ರಹಿಸಲು ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಮಂದಿರ ನಿರ್ಮಾಣಕ್ಕಾಗಿ ಅಗತ್ಯವಿರುವ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp