26/11 ದಾಳಿ 'ಹಿಂದೂ ಭಯೋತ್ಪಾದನೆ', ಉಗ್ರ ಕಸಬ್ ಬೆಂಗಳೂರಿನ ಹಿಂದೂ ವಿದ್ಯಾರ್ಥಿ ಎಂದು ಸಾರಲು ಹೊರಟಿದ್ದ ಪಾಕ್!

 26/11 ಮುಂಬೈ ಭಯೋತ್ಪಾದಕ ದಾಳಿಯನ್ನು "ಹಿಂದೂ ಭಯೋತ್ಪಾದನೆ" ಎಂದೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್ ಬೆಂಗಳೂರಿನ ಸಮೀರ್ ಚೌಧರಿ ಆಗಿ ಸಾಯುವಂತೆ ತೋರಿಸಲು ಯತ್ನಗಳು ನಡೆದಿದ್ದವೆಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಹೇಳಿದ್ದಾರೆ. ಅವರು ೨೦೦೮ರ ಮುಂಬೈ ದಾಳಿ ತನಿಖೆಯ ಅಂಶಗಳನ್ನು ಬಹಿರಂಗಪಡಿಸಿದ್ದು 26/11 ಮುಂಬೈ ಭಯೋತ್ಪಾದಕ ದಾಳಿಯ
ಮಾಜಿ ಪೋಲೀಸ್ ಆಯುಕ್ತ ರಾಕೇಶ್ ಮರಿಯಾ ಅವರ ಆತ್ಮಕಥೆ
ಮಾಜಿ ಪೋಲೀಸ್ ಆಯುಕ್ತ ರಾಕೇಶ್ ಮರಿಯಾ ಅವರ ಆತ್ಮಕಥೆ

ಆತ್ಮಥೆಯಲ್ಲಿ ತನಿಖಾ ವಿವರ ಬಹಿರಂಗಗೊಳಿಸಿದ ಮುಂಬೈ ಮಾಜಿ ಪೋಲೀಸ್ ಆಯುಕ್ತ

ಮುಂಬೈ:  26/11 ಮುಂಬೈ ಭಯೋತ್ಪಾದಕ ದಾಳಿಯನ್ನು "ಹಿಂದೂ ಭಯೋತ್ಪಾದನೆ" ಎಂದೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್ ಬೆಂಗಳೂರಿನ ಸಮೀರ್ ಚೌಧರಿ ಆಗಿ ಸಾಯುವಂತೆ ತೋರಿಸಲು ಯತ್ನಗಳು ನಡೆದಿದ್ದವೆಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಹೇಳಿದ್ದಾರೆ. ಅವರು ೨೦೦೮ರ ಮುಂಬೈ ದಾಳಿ ತನಿಖೆಯ ಅಂಶಗಳನ್ನು ಬಹಿರಂಗಪಡಿಸಿದ್ದು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ತಾನು ನಡೆಸಿದ ತನಿಖೆಯ ಬಗ್ಗೆ ತ್ಮ್ಮ ಆತ್ಮಕಥೆ  'ಲೆಟ್ ಮಿ ಸೇ ಇಟ್ ನೌ' ನಲ್ಲಿ ಬರೆದುಕೊಂಡಿದ್ದಾರೆ.

ಎಲ್‌ಇಟಿ ಪಾಕ್ ಪ್ರಚೋದಿತ ಭಯೋತ್ಪಾದನೆ ದಾಳಿಯನ್ನು "ಹಿಂದೂ ಭಯೋತ್ಪಾದನೆ" ಎಂದು ಬಿಂಬಿಸುವ ಯತ್ನ ನಡೆಸಿತ್ತು ಎಂದು ಮಾತ್ರವಲ್ಲದೆ . ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಕೈವಾಡವೂ ಇತ್ತೆಂದು ಪತ್ತೆಯಾಗಿರುವುದಾಗಿ ಹೇಳಿದರು.

ಪುಸ್ತಕದ ಆಯ್ದ ಭಾಗಗಳ ಪ್ರಕಾರ, (ಪಾಕಿಸ್ತಾನದ) ಐಎಸ್‌ಐ ಮತ್ತು ಎಲ್‌ಇಟಿ  ಸಂಘಟನೆಗಳು ಕಸಬ್ ನನ್ನು ಜೈಲಿನಲ್ಲಿಯೇ ಮುಗಿಸಲು  ಪ್ರಯತ್ನಿಸುತ್ತಿದ್ದವು, ಏಕೆಂದರೆ ಅವನು ದಾಳಿಯೊಡನೆ ಸಂಪರ್ಕವಿರುವ ಏಕೈಕ ಮಹತ್ವದ ಸಾಕ್ಷಿಯಾಗಿದ್ದ.  ದಾವೂದ್ ಇಬ್ರಾಹಿಂ  ನ ಡಿ ಕಂಪನಿಗೆ ಕಸಬ್ ನನ್ನು "ಮುಗಿಸುವ" ಕೆಲಸವನ್ನು ವಹಿಸಲಾಗಿತ್ತು.

26/11 ದಾಳಿಯನ್ನು "ಹಿಂದೂ ಭಯೋತ್ಪಾದನೆ" ಎಂದು ನಿರೂಪಿಸುವ ಎಲ್‌ಇಟಿಯ ಯೋಜನೆಯನ್ನು ವಿವರಿಸುವಾಗ, ಮರಿಯಾ , "ಎಲ್ಲವೂ ಯೋಜನೆಯ ಪ್ರಕಾರ ನಡೆದಿದ್ದರೆ, ಕಸಬ್ ಚೌಧರಿಯಂತೆ ಸಾವನ್ನಪ್ಪುತ್ತಿದ್ದ ಹಾಗೂ  ಮಾಧ್ಯಮಗಳು ದಾಳಿಗೆ 'ಹಿಂದೂ ಭಯೋತ್ಪಾದಕರನ್ನು' ದೂಷಿಸುತ್ತಿದ್ದವು." ಎಂದಿದ್ದಾರೆ. ಭಯೋತ್ಪಾದಕ ಸಂಘಟನೆಯ ಮೇಲೆ ಭಯೋತ್ಪಾದಕರ ಮೇಲೆ ಭಾರತೀಯ ವಿಳಾಸಗಳೊಂದಿಗೆ ನಕಲಿ ಗುರುತಿನ ಚೀಟಿಗಳನ್ನು ಇರಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ಬಿಡುಗಡೆಯಾದ ಕಸಬ್ ನ ಛಾಯಾಚಿತ್ರ "ಕೇಂದ್ರ ತನಿಖಾ ಸಂಸ್ಥೆಗಳ ಕೈಚಳಕವಾಗಿದೆ" ಎಂದು ಮಾದ್ಯಮಗಳು ಹೇಳಿಕೆ ನೀಡುತ್ತಿದ್ದವು. ಮತ್ತು ಮುಂಬೈ ಪೋಲೀಸರು ಮಾಧ್ಯಮಗಳಿಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸದಿರಲು ತೀವ್ರ ಪ್ರಯತ್ನ ಮಾಡಿದರು."

ಇನ್ನು ಛಾಯಾಚಿತ್ರದಲ್ಲಿ  ಕಸಬ್ ತನ್ನ ಬಲ ಮಣಿಕಟ್ಟಿನ ಮೇಲೆ ಕೆಂಪು ದಾರವನ್ನು ಧರಿಸಿರುವುದು ಕಂಡುಬಂದಿದೆ, ಇದು ಪವಿತ್ರ ಹಿಂದೂ ದಾರ ಎಂದು ನಂಬಲಾಗಿದೆ.26/11 ದಾಳಿಯನ್ನು 'ಹಿಂದೂ ಭಯೋತ್ಪಾದನೆ' ಎಂದು ಬಿಂಬಿಸಲು  ದುಷ್ಕರ್ಮಿಗಳು ಯೋಜಿಸುತ್ತಿದ್ದಾರೆ ಎಂಬ ಸಿದ್ಧಾಂತವನ್ನು ಅನೇಕರು ನಂಬಲು ಇದು ಕಾರಣವಾಗಿತ್ತು.

"ಹಿಂದೂ ಭಯೋತ್ಪಾದಕರು ಮುಂಬೈ ಮೇಲೆ ಹೇಗೆ ದಾಳಿ ಮಾಡಿದ್ದಾರೆಂದು ಹೇಳುವ ವರದಿಗಳು ಪತ್ರಿಕೆಗಳಲ್ಲಿ ಬರೆಯಲ್ಪಡುತ್ತಿತ್ತು.ದೊಡ್ಡ ದೊಡ್ಡ ಟಿವಿ ಪತ್ರಕರ್ತರು ಬೆಂಗಳೂರಿಗೆ ತೆರಳಿ ಚೌಧರಿಯಾಗಿ ಬದಲಾದ ಕಸಬ್ ನ ಕುಟುಂಬ ಮತ್ತು ನೆರೆಹೊರೆಯವರನ್ನು ಸಂದರ್ಶಿಸಿ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದರು.ಆದರೆ ಅವರ ಎಣಿಕೆ ಹಾಗೆ ಆಗಲಿಲ್ಲ. ಪಾಕಿಸ್ತಾನದ ಫರೀದ್‌ಕೋಟ್‌ನ ಅಜ್ಮಲ್ ಕಸಬ್ ಓರ್ವ ನಮ್ಮ ಬಳೀ ಸಿಕ್ಕಿದ್ದ"

ಈ ಯೋಜನೆಯನ್ನು ವಿಫಲಗೊಳಿಸಲು ಹುತಾತ್ಮ ಮುಂಬೈ ಕಾನ್‌ಸ್ಟೆಬಲ್ ತುಕಾರಂ ಓಂಬ್ಳೆ ಸಾಧನೆ ಅಪೂರ್ವವಾದದ್ದು. ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಓಬ್ಳೆ ಅವರ ಪಾತ್ರ ಮಹತ್ವದ್ದಿತ್ತ್ತು

ಪುಸ್ತಕದ ಪ್ರಕಾರ, "ಕಸಬ್ ದರೋಡೆಕೋರನಾಗಿ ಎಲ್‌ಇಟಿ  ಸೇರಿಕೊಂಡ. ಜಿಹಾದ್‌ಗೆ ಹಾಗೂ ಆತನಿಗೆ ಯಾವುದೇ ಸಂಬಂಧವಿಲ್ಲ. ಆದಾಗ್ಯೂ, ಆತನ ತಲೆಗೆ ದುರುದ್ದೇಶದ ಉಪದೇಶ ತುಂಬಲಾಯಿತು.ಇದು ಕಸಬ್ ಗೆ ಭಾರತದಲ್ಲಿ ನಮಾಜ್ ಮಾಡಲು ಅನುಮತಿಸುವುದಿಲ್ಲ ಎಂದು ನಂಬಿಸಿತ್ತು. ಆದರೆ ಆತ ಬಂಧಿಸಲ್ಪಟ್ಟ ಬಳಿಕ ಮೆಟ್ರೊ ಸಿನೆಮಾ ಬಳಿಯ ಮಸೀದಿಗೆ ಭೇಟಿ ನೀಡಲು ಅನುಕೂಲ ಕಲ್ಪಿಸಿದಾಗ ಅವನಿಗೆ ಪರಮಾಶ್ಚರ್ಯವಾಗಿತ್ತು."

ಕಸಬ್‌ಗೆ ಮುಂಬೈ ದಾಳಿಗೆ ಮುನ್ನ ವಾರ ಕಾಲ ರಜೆ ಹಾಗೂ 1.25 ಲಕ್ಷ ರೂ. ನೀಡಲಾಗಿತ್ತು.ಕಸಬ್ ತನ್ನ ಸಹೋದರಿಯ ಮದುವೆಗೆ ತಮ್ಮ ಕುಟುಂಬಕ್ಕೆ ಹಣವನ್ನು ನೀಡಿದ್ದ. 

ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಲ್ಲಿ, ನವೆಂಬರ್ 26, 2008 ರಂದು ಮುಂಬೈನಲ್ಲಿ ಪಾಕಿಸ್ತಾನದ 10 ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ನಡೆಸಿದ ದಾಳಿ ಮಹತ್ವದ್ದಾಗಿದೆ. ಈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡರು.ದಾಳಿಯ ವೇಳೆ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಏಕೈಕ ಭಯೋತ್ಪಾದಕ ಕಬ್ ನನ್ನು  2012 ರ ನವೆಂಬರ್ 21 ರಂದು ಗಲ್ಲಿಗೇರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com