ಬಿಜೆಪಿ ನಾಯಕತ್ವಕ್ಕೆ ನಿತೀಶ್ ಅಧೀನ: ಬಿಹಾರದ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸಿದ ಪ್ರಶಾಂತ್ ಕಿಶೋರ್ 

ಜೆಡಿಯುನಿಂದ ಉಚ್ಛಾಟನೆ ಮಾಡಿದ ನಂತರ ಮೌನ ಮುರಿದಿರುವ ಚುನಾವಣಾ ಕಾರ್ಯತಂತ್ರಜ್ಞ ಹಾಗೂ ರಾಜಕಾರಣಿ ಪ್ರಶಾಂತ್  ಕಿಶೋರ್,  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ನಾಯಕತ್ವಕ್ಕೆ ತಲೆಬಾಗುತ್ತಾರೆ ಎಂದಿದ್ದಾರೆ. ನಿತೀಶ್ ಕುಮಾರ್ ಅವರನ್ನು ಈ ಹಿಂದೆ ಇಷ್ಟಪಡುತ್ತಿದ್ದಂತೆ  ರೈತರು ಈಗ ಇಷ್ಟಪಡುತ್ತಿಲ್ಲ ಎಂದು ಹೇಳಿದ್ದಾರೆ. 

Published: 18th February 2020 01:59 PM  |   Last Updated: 18th February 2020 02:14 PM   |  A+A-


Prashant_Kishor1

ಪ್ರಶಾಂತ್ ಕಿಶೋರ್

Posted By : Nagaraja AB
Source : The New Indian Express

ಪಾಟ್ನಾ: ಜೆಡಿಯುನಿಂದ ಉಚ್ಛಾಟನೆ ಮಾಡಿದ ನಂತರ ಮೌನ ಮುರಿದಿರುವ ಚುನಾವಣಾ ಕಾರ್ಯತಂತ್ರಜ್ಞ ಹಾಗೂ ರಾಜಕಾರಣಿ ಪ್ರಶಾಂತ್  ಕಿಶೋರ್,  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ನಾಯಕತ್ವಕ್ಕೆ ತಲೆಬಾಗುತ್ತಾರೆ ಎಂದಿದ್ದಾರೆ. ರೈತರು ಈ ಹಿಂದೆ  ನಿತೀಶ್ ಕುಮಾರ್ ಅವರನ್ನು ಇಷ್ಟಪಡುತ್ತಿದ್ದಂತೆ  ಈಗ ಇಷ್ಟಪಡುತ್ತಿಲ್ಲ ಎಂದು ಹೇಳಿದ್ದಾರೆ. 

ಕಳೆದ 15 ವರ್ಷಗಳ ಅವಧಿಯಲ್ಲಿ ಬಿಹಾರದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಿಸಿರುವ ಕಿಶೋರ್, ಅಭಿವೃದ್ದಿ ಸೂಚ್ಯಂಕದಲ್ಲಿ ಬಿಹಾರ  22ನೇ ಶ್ರೇಯಾಂಕದಲ್ಲಿರುವುದು ಏಕೆ ಎಂದಿದ್ದಾರೆ

ನಿತೀಶ್ ಕುಮಾರ್ ಅವರಿಗೆ ಕೆಲವೊಂದು ಬಿಡಿಸಲಾಗದಂತಹ ಸಲಹೆಗಳನ್ನು ನೀಡಿದ ಕಿಶೋರ್,  ನಿತೀಶ್ ಕುಮಾರ್  ಗಾಂಧಿ ಬೆಂಬಲಿಗರ ಜೊತೆ ಅಥವಾ ಗೂಡ್ಸೆ ಬೆಂಬಲಿಗರೊಂದಿಗೆ ನಿಲ್ಲುತ್ತಾರೆಯೇ  ಎಂಬುದನ್ನು ನಿರ್ಧರಿಸಲಿ ಎಂದಿದ್ದಾರೆ. 

ನಿತೀಶ್ ಕುಮಾರ್  ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೋಸ್ಟರ್  ಗಳ ಮೂಲಕ ಗಾಂಧಿ ಹೇಳಿದ ಏಳು ಪಾಪದ ಬಗ್ಗೆ ಪ್ರಚಾರಪಡಿಸುತ್ತಿದ್ದಾರೆ. ಆದರೆ, ರಾಜಕೀಯದಲ್ಲಿ ಬಿಜೆಪಿಯ ಅಧೀನರಾಗಿ ಮುಂದುವರೆಯುತ್ತಾರೆ.ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು 10 ಕೋಟಿ ಬಿಹಾರಿಗಳು , ಬಿಜೆಪಿ ಅಲ್ಲ ಎಂಬುದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. 

ಮುಂಬರುವ ನೂರು ದಿನಗಳಲ್ಲಿ 'ಬಾಟೆ ಬಿಹಾರ ಕಿ' ಎಂಬ ಹೊಸ ಕಾರ್ಯದ  ಮೂಲಕ  ಬಿಹಾರದಲ್ಲಿ 1 ಕೋಟಿ ಯುವಕರ ಬಲವಾದ ಗುಂಪೊಂದನ್ನು ರಚಿಸುತ್ತೇನೆ, ತದನಂತರ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಯೋಚಿಸುತ್ತೇನೆ. ರಾಜಕೀಯಕ್ಕೆ ಸೇರಬೇಕೆ ಅಥವಾ ರಾಜಕೀಯ ಸಂಘಟನೆಯೊಂದಿಗೆ ಕೆಲಸ ಮಾಡಬೇಕಾ ಎಂಬುದನ್ನು ನಿರ್ಧರಿಸುತ್ತೇನೆ ಎಂದು ಕಿಶೋರ್ ಹೇಳಿದ್ದಾರೆ. ಫೆಬ್ರವರಿ 20 ರಿಂದ ಪ್ರಶಾಂತ್ ಕಿಶೋರ್ ಪ್ರಚಾರವನ್ನು ಆರಂಭಿಸಲಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp