ನಮಸ್ತೆ ಟ್ರಂಪ್: ನದಿಯ ಪರಿಸರ ಸುಂದರಗೊಳಿಸಲು 'ಯಮುನಾ'ಗೆ ನೀರು ಹರಿಸಿದ ಯುಪಿ ಸರ್ಕಾರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡಲು ಅಲ್ಲಿನ ಸರ್ಕಾರ ನಾನಾ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದು, ಇದರಂತೆ ನದಿಯ ಸೌಂದರ್ಯವನ್ನು ಹೆಚ್ಚಿಸಲು ಇದೀಗ ಯಮುನಾ ನದಿಗೆ ನೀರು ಹರಿಸುವ ಕಾರ್ಯವನ್ನು ಮಾಡಿದೆ. 
ನಮಸ್ತೆ ಟ್ರಂಪ್: ನದಿಯ ಪರಿಸರ ಸುಂದರಗೊಳಿಸಲು 'ಯಮುನಾ'ಗೆ ನೀರು ಹರಿಸಿದ ಕೇಂದ್ರ ಸರ್ಕಾರ
ನಮಸ್ತೆ ಟ್ರಂಪ್: ನದಿಯ ಪರಿಸರ ಸುಂದರಗೊಳಿಸಲು 'ಯಮುನಾ'ಗೆ ನೀರು ಹರಿಸಿದ ಕೇಂದ್ರ ಸರ್ಕಾರ

ಮಥುರಾ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡಲು ಅಲ್ಲಿನ ಸರ್ಕಾರ ನಾನಾ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದು, ಇದರಂತೆ ನದಿಯ ಸೌಂದರ್ಯವನ್ನು ಹೆಚ್ಚಿಸಲು ಇದೀಗ ಯಮುನಾ ನದಿಗೆ ನೀರು ಹರಿಸುವ ಕಾರ್ಯವನ್ನು ಮಾಡಿದೆ. 

ಟ್ರಂಪ್ ಭೇಟಿ ವೇಳೆ ನದಿಯ ಪರಿಸರವನ್ನು ಸುಂದರವಾಗಿ ಕಾಣುವಂತೆ ಮಾಡಲು ಉತ್ತರಪ್ರದೇಶದ ನೀರಾವರಿ ಇಲಾಖೆಯು ಯಮುನಾ ನದಿಗೆ 500 ಕ್ಯೂಸೆಕ್ಸ್ ನೀರನ್ನು ಹರಿಸಿದೆ ಎಂದು ವರದಿಗಳು ತಿಳಿಸಿವೆ. 

ಆಗ್ರಾಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಭೇಟಿ ನೀಡುತ್ತಾರೆಂಬ ಮಾಹಿತಿ ಹಿನ್ನೆಲೆಯಲ್ಲ ನಂದಿಗೆ 500 ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ. ಫೆಬ್ರವರಿ 20 ರಂದು ಮಥುರಾದ ಯಮುನಾಗೆ ಈ ನೀರು ಹರಿಯಲಿದ್ದು, ಫೆಬ್ರವರಿ 21 ರಂದು ಆಗ್ರಾ ತಲುಪಲಿದೆ ಎಂದು ಅಧಿಕಾರಿ ಧರ್ಮೇಂದರ್ ಸಿಂಗ್ ಫೋಗಟ್ ಹೇಳಿದ್ದಾರ. 

ನದಿಗೆ ನೀರು ಹರಿಸಿರುವುದರಿಂದ ಸ್ಥಳದಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಕೂಡ ದೂರಾಗಲಿದೆ. ನದಿಯ ಪರಿಸರ ಮತ್ತಷ್ಟು ಸುಂದರವಾಗಿ ಕಾಣಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com