ನಿಮ್ಮ ಪೌರತ್ವ ಸಾಬೀತುಪಡಿಸಿ: 100ಕ್ಕೂ ಹೆಚ್ಚು ಹೈದರಾಬಾದ್ ನಿವಾಸಿಗಳಿಗೆ ಯುಐಡಿಎಐ ನೋಟಿಸ್ ಜಾರಿ

ಆಧಾರ್ ಕಾರ್ಡ್ ಗಳನ್ನು ಅಕ್ರಮವಾಗಿ ಪಡೆದಿದ್ದಾರೆಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೌರತ್ವ ಸಾಬೀತುಪಡಿಸುವಂತೆ ಹೈದರಾಬಾದ್ ನಲ್ಲಿ ನೆಲೆಯೂರಿಸುವ 100ಕ್ಕೂ ಹೆಚ್ಚು ಕುಟುಂಬಗಳಿಗೆ ವಿಶಿಷ್ಟ ಭಾರತೀಯ ಗುರುತು ಪ್ರಾಧಿಕಾರ (ಯುಐಡಿಎಐ) ನೋಟಿಸ್ ಜಾರಿ ಮಾಡಿದೆ ಎಂದು ವರದಿಗಳು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಆಧಾರ್ ಕಾರ್ಡ್ ಗಳನ್ನು ಅಕ್ರಮವಾಗಿ ಪಡೆದಿದ್ದಾರೆಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೌರತ್ವ ಸಾಬೀತುಪಡಿಸುವಂತೆ ಹೈದರಾಬಾದ್ ನಲ್ಲಿ ನೆಲೆಯೂರಿಸುವ 100ಕ್ಕೂ ಹೆಚ್ಚು ಕುಟುಂಬಗಳಿಗೆ ವಿಶಿಷ್ಟ ಭಾರತೀಯ ಗುರುತು ಪ್ರಾಧಿಕಾರ (ಯುಐಡಿಎಐ) ನೋಟಿಸ್ ಜಾರಿ ಮಾಡಿದೆ ಎಂದು ವರದಿಗಳು ತಿಳಿಸಿವೆ. 

ಪೌರತ್ವಕ್ಕೆ ಆಧಾರ್ ದಾಖಲೆಯಲ್ಲ. ಆಧಾರ್'ಗೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು 182 ದಿನಗಳ ಕಾಲ ಭಾರತದಲ್ಲಿ ವ್ಯಕ್ತಿಯ ನಿವಾಸವನ್ನು ಖಚಿತಪಡಿಸಿಕೊಳ್ಳಲು ಯುಐಡಿಐಎಗೆ ಆಧಾರ್ ಕಾಯ್ದೆಯಡಿ ಆದೇಶ ನೀಡಲಾಗಿದೆ. ಇದರಂತೆ 12 ಅಂಕಿಯ ಬಯೋಮೆಟ್ರಿಕ್ ಐಟಿಯನ್ನು ನೀಡಲಾಗುತ್ತದೆ. ಸುಪ್ರೀಂಕೋರ್ಟ್ ಕೂಡ ಅಕ್ರಮ ವಲಸಿಗರಿಗೆ ಆಧಾರ್ ನೀಡದಂತೆ ಯುಐಡಿಎಐಗೆ ನಿರ್ದೇಶನ ನೀಡಿದೆ ಎಂದು ಹೇಳಿದೆ,

ಪೌರತ್ವ ಸಾಬೀತುಪಡಿಸಲು ನೋಟಿಸ್ ಪಡೆದ ಎಲ್ಲಾ ನಿವಾಸಿಗಳು ಬಾಲಾಪುರದ ಅಧಿಕಾರಿಗಳ ಮುಂದೆ ಹಾಜರಾಗಬೇಕು. ನಂತರ ಭಾರತೀಯ ಕಾನೂನುಬದ್ಧ ಪ್ರದೇಶವನ್ನು ಪ್ರವೇಶಿಸಿದ್ದರ ಕುರಿತು ಮತ್ತು ನಿಮ್ಮ ವಾಸ್ತವ್ಯ ಮಾನ್ಯವಾಗಿದೆ ಎಂದು ಸಾಬೀತುಪಡಿಸಲು ದಾಖಲೆಗಳನ್ನು ನೀಡಬೇಕು. ಒಂದು ವೇಳೆ ನೋಟಿಸ್ ಪಡೆದ ನಿವಾಸಿಗಳು ಅಧಿಕಾರಿಗಳ ಮುಂದೆ ಹಾಜರಾಗದೇ ಹೋದಲ್ಲಿ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 

ನೋಟಿಸ್ ನಲ್ಲಿ ಹೈದರಾಬಾದ್ ವಿಭಾಗದ ಯುಐಡಿಎಐ ಉಪ ನಿರ್ದೇಶಕರಾದ ಅಮಿತಾ ಬಿಂಡ್ರೂ ಅವರು ಸಹಿ ಹಾಕಿರುವುದು ಕಂಡು ಬಂದಿದೆ. 

ಸ್ಥಳೀಯ ಹೈದರಾಬಾದ್ ಕಚೇರಿಗೆ ರಾಜ್ಯ ಪೊಲೀಸರು ವರದಿಯೊಂದನ್ನು ನೀಡಿದ್ದು, 127 ಜನರು ತಪ್ಪು ಮಾಹಿತಿ ನೀಡಿ ಆಧಾರ್ ಕಾರ್ಡ್ ಗಳನ್ನು ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಆಧಾರ್ ಕಾರ್ಡ್ ಪಡೆಯಲು ಅವರು ಅರ್ಹರಲ್ಲ. ಅಕ್ರಮ ವಲಸಿಗರಾಗಿದ್ದಾರೆಂದು ತಿಳಿಸಿದ್ದರು. ಹೀಗಾಗಿ ಪೌರತ್ವ ಸಾಬೀತುಪಡಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಯುಐಡಿಎಐ ತಿಳಿಸಿದೆ. 

ಒಂದು ವೇಳೆ ಸುಳ್ಳು ದಾಖಲೆಗಳನ್ನು ಸಲ್ಲಿಸುವ ಮೂಲಕ ಅಥವಾ ಸುಳ್ಳು ಕಾರಣಗಳನ್ನು ನೀಡಿ ಯಾರಾದರೂ ಆಧಾರ್ ಪಡೆದಿದ್ದಾರೆಂಬುದು ಸಾಬೀತಾಗಿದ್ದೇ ಆದರೆ, ಆಧಾರ್ ನಿಯಮ ಉಲ್ಲಂಘನೆಯ ಪ್ರಕಾರ ಅವುಗಳನ್ನು ರದ್ದುಪಡಿಸಲಾಗುತ್ತದೆ ಅಥವಾ ಅಮಾನತುಗೊಳಿಸಲಾಗುತ್ತದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com