ಇಂಡಿಯನ್ 2 ಶೂಟಿಂಗ್ ವೇಳೆ ಕ್ರೇನ್ ಅಪಘಾತ: ಮೂವರ ಸಾವು!
ನಟ ಕಮಲ್ ಹಾಸನ್ ಅಭಿನಯದ ಮತ್ತು ನಿರ್ದೇಶಕ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇಂಡಿಯನ್ 2 ಚಿತ್ರದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
Published: 20th February 2020 12:51 AM | Last Updated: 20th February 2020 01:03 AM | A+A A-

ಇಂಡಿಯನ್ 2 ಕ್ರೇನ್ ದುರಂತ
ಚೆನ್ನೈ: ನಟ ಕಮಲ್ ಹಾಸನ್ ಅಭಿನಯದ ಮತ್ತು ನಿರ್ದೇಶಕ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇಂಡಿಯನ್ 2 ಚಿತ್ರದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಚೆನ್ನೈನಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಬುಧವಾರ ರಾತ್ರಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಬಳಸಲಾಗುತ್ತಿದ್ದ ಕ್ರೇನ್ ಉರುಳು ಬಿದ್ದಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಅಂತೆಯೇ 9 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಇಂಡಿಯನ್ 2 ಚಿತ್ರದ ಚಿತ್ರೀಕರಣಕ್ಕಾಗಿ ಸೆಟ್ ತಯಾರಿಸಲು ಕ್ರೇನ್ ಅನ್ನು ಬಳಸಲಾಗುತ್ತಿತ್ತು. ಈ ವೇಳೆ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಸಿಬ್ಬಂದಿಗಳಿಗೆ ಆಹಾರ ಸರಬರಾಜು ಮಾಡುತ್ತಿದ್ದ ಮಧು (29 ವರ್ಷ), ಚಂದ್ರನ್ (60 ವರ್ಷ) ಮತ್ತು ಸಹಾಯಕ ನಿರ್ದೇಶಕ ಕೃಷ್ಣಾ (34 ವರ್ಷ) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಮಂಚಂಗ್ (37 ವರ್ಷ), ವಾಸು (35 ವರ್ಷ), ರಂಜಾನ್ (43 ವರ್ಷ), ಅರುನ್‌ಪ್ರಸತ್ (24 ವರ್ಷ), ಕುಮಾರ್ (52 ವರ್ಷ), ಕಲೈಚಿತ್ರ, ಗುಣಬಾಲನ್, ತಿರುನಾವುಕ್ಕರಸು (45 ವರ್ಷ) ಮತ್ತು ಮುರುಗದಾಸ್ (40 ವರ್ಷ) ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ನಿರ್ದೇಶಕ ಶಂಕರ್ ಮತ್ತು ಚಿತ್ರ ನಿರ್ಮಾಪಕರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Accident at #INDIAN2 sets