ಏ.30ರಂದು ಬಾಗಿಲು ತೆರೆಯಲಿದೆ ಬದರಿನಾಥ ದೇವಾಲಯ 

ಉತ್ತರ್ ಖಂಡ್ ರಾಜ್ಯದ ಚತುರ್ಧಾಮಗಳಲ್ಲಿ ಒಂದಾಗಿರುವ ಬದರಿನಾಥ್ ದೇವಾಲಯ ಏಪ್ರಿಲ್ 30 ರಿಂದ ಭಕ್ತಾಧಿಗಳಿಗೆ ತೆರೆಯಲಿದೆ.

Published: 20th February 2020 03:41 PM  |   Last Updated: 20th February 2020 03:41 PM   |  A+A-


Badrinath_Temple1

ಬದರಿನಾಥ ದೇವಾಲಯ

Posted By : Nagaraja AB
Source : PTI

ಬದರಿನಾಥ:  ಉತ್ತರ್ ಖಂಡ್ ರಾಜ್ಯದ ಚತುರ್ಧಾಮಗಳಲ್ಲಿ ಒಂದಾಗಿರುವ ಬದರಿನಾಥ್ ದೇವಾಲಯ ಏಪ್ರಿಲ್ 30 ರಿಂದ ಭಕ್ತಾಧಿಗಳಿಗೆ ತೆರೆಯಲಿದೆ. ಶಿವ ಆರಾದನೆಯ ಪುಣ್ಯಕ್ಷೇತ್ರವನ್ನು ತೀವ್ರ ಚಳಿ ಹಾಗೂ ಹಿಮದ ಕಾರಣದಿಂದಾಗಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಈ ಕ್ಷೇತ್ರವನ್ನು ಮುಚ್ಚಲಾಗಿತ್ತು. 

ಹಿಮವನ್ನು ತೆರವುಗೊಳಿಸಿದ ಬಳಿಕ ಹನುಮನ್ ಚಾಟಿ ಹಾಗೂ ಬದರಿನಾಥ ಮಂದಿರವನ್ನು ಸಂಪರ್ಕಿಸುವ ಹೆದ್ದಾರಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ.

ರಸ್ತೆ ತೆರವುಗೊಳಿಸುವ ಕಾರ್ಯಾಚರಣೆ ಮಾಡುತ್ತಿರುವುದರಿಂದ ಸದ್ಯ ಸೇನೆ ಹಾಗೂ ಇಂಡೋ ಟಿಬಿಟೆನ್ ಬಾರ್ಡರ್ ಪೊಲೀಸರ ವಾಹನಗಳು ಇಲ್ಲಿ ಸಂಚರಿಸುತ್ತಿವೆ.

ಸಮುದ್ರ ಮಟ್ಟಕ್ಕಿಂತ 10 ಸಾವಿರದ 279 ಅಡಿ ಎತ್ತರದಲ್ಲಿರುವ ಬದರಿನಾಥ ದೇವಾಲಯ ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆದಿರುತ್ತದೆ. ಚಳಿಗಾಲದ ಸಂದರ್ಭದಲ್ಲಿ ಮುಚ್ಚಲ್ಪಟ್ಟಿರುತ್ತದೆ. 

Stay up to date on all the latest ರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp