ಆರ್ಥಿಕತೆ ಮಂದಗತಿಯಲ್ಲಿದ್ದು, ಮೊಂಡು ಹಠ ಬಿಟ್ಟು ಸತ್ಯ ಒಪ್ಪಿಕೊಳ್ಳಿ: ಕೇಂದ್ರಕ್ಕೆ ಮನಮೋಹನ್ ಸಿಂಗ್
ಕೇಂದ್ರ ಮೋದಿ ಸರ್ಕಾರ ಮೇಲೆ ವಾಗ್ದಾಳಿ ಮಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದೇಶದ ಆರ್ಥಿಕತೆ ನಿಧಾನವಾಗಿದೆ, ಕುಂಠಿತವಾಗಿದೆ ಎಂಬ ಅಸಲಿ ಸತ್ಯವನ್ನು ಒಪ್ಪಿಕೊಳ್ಳದೆ ಮೋದಿ ಸರ್ಕಾರ ಮೊಂಡು ಹಠ ಮಾಡುತ್ತಿದೆ ಎಂದು ದೂರಿದ್ದಾರೆ.
Published: 20th February 2020 07:54 AM | Last Updated: 20th February 2020 09:15 AM | A+A A-

ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ನವದೆಹಲಿ: ಕೇಂದ್ರ ಮೋದಿ ಸರ್ಕಾರ ಮೇಲೆ ವಾಗ್ದಾಳಿ ಮಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದೇಶದ ಆರ್ಥಿಕತೆ ನಿಧಾನವಾಗಿದೆ, ಕುಂಠಿತವಾಗಿದೆ ಎಂಬ ಅಸಲಿ ಸತ್ಯವನ್ನು ಒಪ್ಪಿಕೊಳ್ಳದೆ ಮೋದಿ ಸರ್ಕಾರ ಮೊಂಡು ಹಠ ಮಾಡುತ್ತಿದೆ ಎಂದು ದೂರಿದ್ದಾರೆ.
ಸದ್ಯ ನಿಜವಾದ ಅಪಾಯವೆಂದರೆ ಸಮಸ್ಯೆಗಳನ್ನು ಗುರುತಿಸದೇ ಸರಿಪಡಿಸುವ ಕ್ರಮಗಳೆ ಮತ್ತುಷ್ಟು ಅಪಾಯಕ್ಕೆ ದಾರಿಯಾಗಲಿದೆ ಎಂಬ ಕಳವಳ ವ್ಯಕ್ತಪಡಿಸಿದರು .ಮೊದಲು ಸರ್ಕಾರ ಈ ಸತ್ಯವವನ್ನು ಒಪ್ಪಿಕೊಂಡರೆ ಏನಾದರೂ ಪರಿಹಾರ ಸಾಧ್ಯ ಎಂದರು.
ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ "ತೆರೆಮರೆಯ" ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿಂಗ್, ಮಾಜಿ ಯೋಜನಾ ಆಯೋಗದ ಉಪಾಧ್ಯಕ್ಷರು ಯುಪಿಎ ಸರ್ಕಾರದ ಒಳ್ಳೆಯ ಮತ್ತು ದುರ್ಬಲ ಅಂಶಗಳ ಬಗ್ಗೆ ಬರೆದಿದ್ದಾರೆ ಎಂದರು.