'ರಾಷ್ಟ್ರೀಯತೆ'ಯನ್ನು ಇತ್ತೀಚಿನ ದಿನಗಳಲ್ಲಿ ಹಿಟ್ಲರನ ನಾಜಿ ಸಿದ್ಧಾಂತಕ್ಕೆ ಸಮನಾಗಿ ಕಾಣಲಾಗುತ್ತಿದೆ: ಮೋಹನ್ ಭಾಗವತ್ 

ರಾಷ್ಟ್ರೀಯತೆ ಎಂಬ ಪದವನ್ನು ಇತ್ತೀಚಿನ ದಿನಗಳಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದ್ದು, ಇದಕ್ಕೆ ಬದಲಾಗಿ ಬೇರೆ ಶಬ್ದವನ್ನು ಬಳಸುವುದು ಸೂಕ್ತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

Published: 20th February 2020 02:37 PM  |   Last Updated: 20th February 2020 02:37 PM   |  A+A-


Posted By : Sumana Upadhyaya
Source : PTI

ರಾಂಚಿ: ರಾಷ್ಟ್ರೀಯತೆ ಎಂಬ ಪದವನ್ನು ಇತ್ತೀಚಿನ ದಿನಗಳಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದ್ದು, ಇದಕ್ಕೆ ಬದಲಾಗಿ ಬೇರೆ ಶಬ್ದವನ್ನು ಬಳಸುವುದು ಸೂಕ್ತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.


ಅವರು ಇಂದು ಜಾರ್ಖಂಡ್ ನ ರಾಂಚಿಯಲ್ಲಿ ಆರ್ ಎಸ್ಎಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚೆಗೆ ನಾನು ಇಂಗ್ಲೆಂಡ್ ಗೆ ಹೋಗಿದ್ದಾಗ, ಇಂಗ್ಲಿಷಿನಲ್ಲಿ ಕೆಲವೊಂದು ಶಬ್ದಗಳು ಸಾಂಪ್ರದಾಯಿಕವಾಗಿ ಏನು ಅರ್ಥ ಕೊಡುತ್ತದೆ ಅದಕ್ಕೆ ತಕ್ಕಂತೆ ಉಳಿದಿಲ್ಲ ಎಂದು ಅಲ್ಲಿನ ಆರ್ ಎಸ್ ಎಸ್ ಕಾರ್ಯಕರ್ತರೊಬ್ಬರು ನನಗೆ ಹೇಳಿದರು. ಅಂಥವುಗಳಲ್ಲಿ ರಾಷ್ಟ್ರೀಯತೆ ಅಥವಾ ನ್ಯಾಶನಲಿಸಂ ಒಂದು ಶಬ್ದ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯತೆ ಎಂಬ ಪದವನ್ನು ನಾಜಿ ಅಥವಾ ಫ್ಯಾಸಿಸ್ಟ್ ಸಿದ್ಧಾಂತದೊಂದಿಗೆ ಹೋಲಿಸಲಾಗುತ್ತಿದೆ. ವಿಶ್ವಾದ್ಯಂತ ರಾಷ್ಟ್ರೀಯತೆ ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದು ಪ್ರತಿಪಾದಿಸಿದರು.


ರಾಷ್ಟ್ರ ಎಂಬ ಪದ ಬಳಸಿ, ರಾಷ್ಟ್ರೀಯ ಎಂಬ ಪದ ಬಳಸಿ ಅದು ಸರಿಯಾಗಿದೆ, ಆದರೆ ರಾಷ್ಟ್ರೀಯತೆ ಎಂದು ಹೇಳಬೇಡಿ ಎಂದು ಅಲ್ಲಿದ್ದವರು ಹೇಳಿದರು. ಇದು ಹಿಟ್ಲರ್, ನಾಜಿಸಮ್, ಫ್ಯಾಸಿಸಂನಂತಹ ಇತರ ಪದಗಳ ಜೊತೆ ಹೋಲಿಕೆ ಮಾಡಲಾಗುತ್ತಿದ್ದು, ಈ ಪದವು ನಿಧಾನವಾಗಿ ಬೇರೆ ಅರ್ಥ ಕೊಡುತ್ತಿದೆ ಎಂದರು.


ಭಾರತವನ್ನು ವಿಶ್ವದಲ್ಲಿ ಒಂದು ಸೂಪರ್ ಪವರ್ ರಾಷ್ಟ್ರವಾಗಿ ಮಾಡುವ ಸಮಯ ಬಂದಿದೆ. ಆದರೆ ಬಹುತೇಕ ಬೇರೆ ರಾಷ್ಟ್ರಗಳು ತನ್ನ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುವಂತೆ ಭಾರತ ತನ್ನ ಪ್ರಭಾವವನ್ನು ಅನ್ಯಮಾರ್ಗಕ್ಕೆ ಬಳಸಿಕೊಳ್ಳುವುದಿಲ್ಲ, ಅದು ಉತ್ತಮ ಮಾರ್ಗಕ್ಕೆ ಬಳಸುತ್ತದೆ. ನಮ್ಮ ದೇಶವನ್ನು ಇಡೀ ವಿಶ್ವದಲ್ಲಿ ಉತ್ತಮ ರಾಷ್ಟ್ರವನ್ನಾಗಿ ಮಾಡಬೇಕು. ವಿಶ್ವದರ್ಜೆಯ ರಾಷ್ಟ್ರವಾಗಬೇಕು ಎಂದು ಹೇಳಿದರು.

Stay up to date on all the latest ರಾಷ್ಟ್ರೀಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp