ಸೇನೆಯಲ್ಲಿ ಮಹಿಳೆಯರ ನಿಯೋಜನೆ ಕುರಿತು ಸುಪ್ರೀಂ ತೀರ್ಪು ನಮಗೆ ಸ್ಪಷ್ಟತೆಯನ್ನು ನೀಡಿದೆ: ಸೇನಾ ಮುಖ್ಯಸ್ಥ ನಾರವಾನೆ

 ಭಾರತೀಯ ಸೇನಾಪಡೆಯು ಲಿಂಗ ಸಮಾನತೆಯನ್ನು ಸಾಧಿಸುತ್ತಿದೆ. ಮಹಿಳಾ ಅಧಿಕಾರಿಗಳಿಗೆ ಶಾಶ್ವತ ನಿಯೋಜನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು ಇದು ಸೇನಾ ನಿರ್ಧಾರಕ್ಕೆ ಸಾಕಷ್ಟು ಸ್ಪಷ್ಟತೆಯನ್ನು ನೀಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಹೇಳಿದ್ದಾರೆ.
ಎಂಎಂ ನಾರವಾನೆ
ಎಂಎಂ ನಾರವಾನೆ

ನವದೆಹಲಿ: ಭಾರತೀಯ ಸೇನಾಪಡೆಯು ಲಿಂಗ ಸಮಾನತೆಯನ್ನು ಸಾಧಿಸುತ್ತಿದೆ. ಮಹಿಳಾ ಅಧಿಕಾರಿಗಳಿಗೆ ಶಾಶ್ವತ ನಿಯೋಜನೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು ಇದು ಸೇನಾ ನಿರ್ಧಾರಕ್ಕೆ ಸಾಕಷ್ಟು ಸ್ಪಷ್ಟತೆಯನ್ನು ನೀಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಹೇಳಿದ್ದಾರೆ.

ಸೇನೆಯ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ನಿಯೋಜನೆ ಮತ್ತು ಕಮಾಂಡ್ ಪೋಸ್ಟಿಂಗ್ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿತ್ತು. "ಭಾರತೀಯ ಸೇನೆಯು ಧರ್ಮ, ಜಾತಿ, ಮತ, ಅಥವಾ ಲಿಂಗವನ್ನು ಆಧರಿಸಿ ಯಾವುದೇ ಸೈನಿಕನನ್ನು ತಾರತಮ್ಯ ಮಾಡುವುದಿಲ್ಲ. ಭಾರತೀಯ ಸೈನ್ಯದ ದೃಷ್ಟಿಕೋನವು ಈ ರೀತಿಯಾಗಿದೆ ಮತ್ತು ಅದಕ್ಕಾಗಿಯೇ ನಾವು 1993 ರಲ್ಲಿಯೇ ಮಹಿಳಾ ಅಧಿಕಾರಿಗಳನ್ನು ಸೇರಿಸಲು ಪ್ರಾರಂಭಿಸಿದ್ದೇವೆ" ಎಂದು ಜನರಲ್ ನಾರವಾನೆ ಹೇಳಿದರು

ಭಾರತೀಯ ಸೇನೆಯು ಮಹಿಳೆಯರನ್ನು ರ್ಯಾಂಕ್ ಹಾಗೂ ಫೈಲ್ ಗಳಲ್ಲಿ ಸೇರಿಸಲು ಮುಂದಾಗಿದೆ, ಮತ್ತು 100 ಮಹಿಳಾ ಸೈನಿಕರ ಮೊದಲ ಬ್ಯಾಚ್ ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಆಂಡ್ ಸ್ಕೂಲ್ ನಲ್ಲಿ ತರಬೇತಿ ಪಡೆಯುತ್ತಿದೆ ಎಂದು ಅವರು ಹೇಳಿದರು."ಸುಪ್ರೀಂ ಕೋರ್ಟಿನ ತೀರ್ಪು ಸ್ವಾಗತಾರ್ಹವಾದದ್ದು, ಏಕೆಂದರೆ ಇದು ಸೇನೆಯ  ಉತ್ತಮ ದಕ್ಷತೆಗಾಗಿ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಬಗೆಗೆ ಸ್ಪಷ್ಟತೆ ಮತ್ತು ಉದ್ದೇಶವನ್ನು ತಿಳಿಸಿದೆ. ಮಹಿಳಾ ಅಧಿಕಾರಿಗಳು ಸೇರಿದಂತೆ ಭಾರತೀಯ ಸೇನೆಯಲ್ಲಿ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸಲು  ಸಮಾನ ಅವಕಾಶವನ್ನು ನೀಡಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ." ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತು ಮಾತನಾಡಿದ ಜನರಲ್ ನಾರವಾನೆ, ಭಯೋತ್ಪಾದಕ ಘಟನೆಗಳು ಕಡಿಮೆಯಾಗಿದ್ದು ಸೇನೆಯು ಭಯೋತ್ಪಾದಕ ಗುಂಪುಗಳ ಮೇಲೆ ಒತ್ತಡ ಹೇರುತ್ತಿದೆ.ಗಡಿಯಾಚೆಗಿನ ಭಯೋತ್ಪಾದನೆ ಕಡಿಮೆಯಾಗುತ್ತಿದ್ದು ನಡೆಯುತ್ತಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್ ಪ್ಲಾನರಿ ಬಗೆಗೆ ಸಹ ಅವರು ಹೇಳೀದ್ದಾರೆ.ಪಾಕಿಸ್ತಾನವು ತನ್ನ ಕಾರ್ಯತಂತ್ರವನ್ನು ಪುನರ್ವಿಮರ್ಶಿಸಬೇಕಾಗಬಹುದು ಎಂದ ಸೇನಾ ಮುಖ್ಯಸ್ಥರು ಚೀನಾ ಕೂಡ ತನ್ನ ಸಾರ್ವಕಾಲಿಕ ಗೆಳೆಯನನ್ನು ಎಲ್ಲಾ ಸಮಯದಲ್ಲಿ ಬೆಂಬಲಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತಿದೆ ಎಂದಿದ್ದಾರೆ. ಜಾಗತಿಕ ಭಯೋತ್ಪಾದನೆಗಾಗಿನ ಹಣಕಾಸು ಸಂಗ್ರಹದ ಕುರಿತು ಸದಾ ಎಚ್ಚರಿಕೆಯಿಂದಿರುವ ಎಫ್‌ಎಟಿಎಫ್‌ನ ಮಂಗಳವಾರ ಉಗ್ರ ಚಟುವಟಿಕೆಗಳಿಗೆ ಹಣ ತೊಡಗಿಸುವುದನ್ನು ನಿಲ್ಲಿಸಲು ವಿಫಲವಾಗಿರುವ ಪಾಕಿಸ್ತಾನವನ್ನು 'ಗ್ರೇ ಲಿಸ್ಟ್'ನಲ್ಲಿ ಮುಂದುವರಿಸಲು ಶಿಫಾರಸು ಮಾಡಿದೆ.

 ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕೇಳಿದಾಗ, ಸೇನಾ ಮುಖ್ಯಸ್ಥರು ಯಾವುದೇ ಪರಿಸ್ಥಿತಿ ಎದುರಿಸಲು ದ್ರತಾ ಪಡೆಗಳನ್ನು ಸಜ್ಜುಗೊಳಿಸಿದ್ದೇವೆ ಎಂದರು.ಜಮ್ಮು ಕಾಶ್ಮೀರಕ್ಕಾಗಿ ಪ್ರತ್ಯೇಕವಾಗಿ ಥಿಯೇಟರ್ ಕಮಾಂಡ್ ರಚಿಸುವ ಕುರಿತು, ಇನ್ನೂ ಯಾವ ತೀರ್ಮಾನವಾಗಿಲ್ಲ ಇದಕ್ಕಾಗಿ ವಿವರವಾದ ಚರ್ಚೆಗಳು ನಡೆಯಲಿದೆ ಎಂದಿಅರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com