ಕಾಂಗ್ರೆಸ್‌ನಲ್ಲಿ ನಾಯಕತ್ವದ ಬದಲಾವಣೆ ವಿಚಾರ  ಸಂದೀಪ್ ದೀಕ್ಷಿತ್ ಬೆನ್ನಿಗೆ ನಿಂತ ಶಶಿ ತರೂರ್

ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಜವಾಬ್ದಾರಿಯುತ ಸ್ಥಾನಗಳಿದೆ. ಕಾರ್ಯಕರ್ತರನ್ನು ಹುರಿದುಂಬಿಸಲು, ಮತದಾರರನ್ನು ಸೆಳೆಯಲು ಅವೆಲ್ಲಾ ಭರ್ತಿಯಾಗಬೇಕು.ಈ ನಿಟ್ಟಿನಲ್ಲಿ ನಾನು ಸಂದೀಪ್ ದೀಕ್ಷಿತ್ ಅವರ ಮಾತುಗಳಿಗೆ ಸಮ್ಮತಿಸುತ್ತೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ತಿರುವನಂತಪುರಂ ಸಂಸದರಾದ ಶಶಿ ತರೂರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚುತ್ತಿರುವ ಭಿನ್ನಮತದ ದನಿಗ

Published: 20th February 2020 03:15 PM  |   Last Updated: 20th February 2020 03:15 PM   |  A+A-


ಶಶಿ ತರೂರ್

Posted By : raghavendra
Source : The New Indian Express

ತಿರುವನಂತಪುರಂ: ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಜವಾಬ್ದಾರಿಯುತ ಸ್ಥಾನಗಳಿದೆ. ಕಾರ್ಯಕರ್ತರನ್ನು ಹುರಿದುಂಬಿಸಲು, ಮತದಾರರನ್ನು ಸೆಳೆಯಲು ಅವೆಲ್ಲಾ ಭರ್ತಿಯಾಗಬೇಕು.ಈ ನಿಟ್ಟಿನಲ್ಲಿ ನಾನು ಸಂದೀಪ್ ದೀಕ್ಷಿತ್ ಅವರ ಮಾತುಗಳಿಗೆ ಸಮ್ಮತಿಸುತ್ತೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ತಿರುವನಂತಪುರಂ ಸಂಸದರಾದ ಶಶಿ ತರೂರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚುತ್ತಿರುವ ಭಿನ್ನಮತದ ದನಿಗಳ ನಡುವೆ ತರೂರ್ ಸಂದೀಪ್ ದೀಕ್ಷಿತ್ ಬೆನ್ನಿಗೆ ನಿಂತಿರುವುದು ಹಿರಿಯ ಮುಖಂಡರಿಗೆ ತಲೆನೋವಾಗಿದೆ.

ದೆಹಲಿ ಚುನಾವಣೆಯಲ್ಲಿ ಎರಡನೇ ಬಾರಿಗೆ ಪಕ್ಷವು ಶೂನ್ಯ ಸಾಧನೆ ಮಾಡಿದ ಬಳಿಕ ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ "ಕೈ ಪಕ್ಷ ಹೊಸ ನಾಯಕತ್ವವನ್ನು ಹುಡುಕುವಲ್ಲಿ ವಿಫಲವಾಗಿದೆ. " ಏಂದು ಬಹಿರಂಗವಾಗಿ ಟೀಕಿಸಿದ್ದರು. ಅಲ್ಲದೆ ಪಕ್ಷದಲ್ಲಿ ನಾಯಕತ್ವ ವಹಿಸಬಲ್ಲ ಕನಿಷ್ಟ  "ಆರು-ಎಂಟು" ನಾಯಕರು  ಇದ್ದಾರೆ ಎಂದಿಊ ಹೇಳಿದ್ದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ ನಂತರ ದೆಹಲಿ ಚುನಾವಣಾ ಉಸ್ತುವಾರಿ ಪಿಸಿ ಚಾಕೊ ಈ ಪ್ರದೇಶದಲ್ಲಿ ಪಕ್ಷದ ಸೋಲಿಗೆ ಮಾಜಿ ಸಿಎಂ ಶೀಲಾ ದೀಕ್ಷಿತ್ ಕಾರಣವೆಂದು ದೂರಿದ್ದರು.

ಇದೀಗ ಸಂದೀಪ್ ಟೀಕೆಯ ಕುರಿತು ಪ್ರತಿಕ್ರಯಿಸಿರುವ ತರೂರ್ “ಸಂದೀಪ್ ದೀಕ್ಷಿತ್ ಬಹಿರಂಗವಾಗಿ ಹೇಳಿದ್ದು, ದೇಶಾದ್ಯಂತದ ಡಜನ್ನುಗಟ್ಟಲೆ  ಪಕ್ಷದ ನಾಯಕರು ಖಾಸಗಿಯಾಗಿ ಹೇಳುತ್ತಿದ್ದ ವಿಚಾರವೇ ಆಗಿದೆ" ಎಂದಿದ್ದಾರೆ., “ಸಂದೀಪ್ ದೀಕ್ಷಿತ್ ಬಹಿರಂಗವಾಗಿ ಹೇಳಿದ್ದು, ದೇಶಾದ್ಯಂತದ ಡಜನ್ನುಗಟ್ಟಲೆ  ಪಕ್ಷದ ನಾಯಕರು ಖಾಸಗಿಯಾಗಿ ಹೇಳುತ್ತಿದ್ದ ವಿಚಾರವೇ ಹೌದು. ಕ್ಷದಲ್ಲಿ ಅನೇಕ ಜವಾಬ್ದಾರಿಯುತ ಸ್ಥಾನಗಳಿದೆ. ಕಾರ್ಯಕರ್ತರನ್ನು ಹುರಿದುಂಬಿಸಲು, ಮತದಾರರನ್ನು ಪ್ರೇರೇಪಿಸಲು ನಾಯಕತ್ವಕ್ಕಾಗಿ ಮತದಾನ ನಡೆಸಲು ಸಿಡಬ್ಲ್ಯೂಸಿನಾನು ಮತ್ತೆ ಮನವಿ ಸಲ್ಲಿಸುತ್ತೇನೆ" ತರೂರ್ ಟ್ವೀಟ್ ಮಾಡಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp