ಕ್ಷಮಾದಾನ ಅರ್ಜಿ ತಿರಸ್ಕೃತ: ಚುನಾವಣಾ  ಆಯೋಗದ ಮೊರೆ ಹೋದ ನಿರ್ಭಯ ಹಂತಕ

ದೇಶವನ್ನೇ ನಡುಗಿಸಿ, ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲಿಗೇರಲು ಇನ್ನೂ ಕೇವಲ  10 ದಿನಗಳು ಮಾತ್ರ ಬಾಕಿ ಇವೆ.
ವಿನಯ್ ಶರ್ಮಾ
ವಿನಯ್ ಶರ್ಮಾ

ನವದೆಹಲಿ: ದೇಶವನ್ನೇ ನಡುಗಿಸಿ, ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲಿಗೇರಲು ಇನ್ನೂ ಕೇವಲ  10 ದಿನಗಳು ಮಾತ್ರ ಬಾಕಿ ಇವೆ.
 
ಈ ನಡುವೆ ಗಲ್ಲು ಶಿಕ್ಷೆಯಿಂದ ಪಾರಾಗಲು ದೋಷಿಗಳು ನಾನಾ ರೀತಿಯ ಪ್ರಯತ್ನ,  ತಂತ್ರಗಳ ಮೊರೆ ಹೋಗುತ್ತಿದ್ದಾರೆ . ನಿರ್ಭಯಾ ಅತ್ಯಾಚಾರಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮ ಇದೀಗ ತಮ್ಮ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿರುವ ಕ್ರಮ, ದೆಹಲಿ ಸರ್ಕಾರದ ತೀರ್ಮಾನದ ಸಿಂಧುತ್ವ ಪ್ರಶ್ನಿಸಿ ಚುನಾವಣಾ ಆಯೋಗದ ಕದತಟ್ಟಿದ್ದಾರೆ.

ವಿನಯ್ ಕ್ಷಮಾದಾನ ಅರ್ಜಿಯನ್ನು ದೆಹಲಿ ಗೃಹ  ಸಚಿವ ಮನೀಷ್ ಸಿಸೋಡಿಯ ತಿರಸ್ಕರಿಸಿದಾಗ ದೆಹಲಿಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿತ್ತು. ಆಗ ಅವರು ಸಚಿವರಾಗಿರಲಿಲ್ಲ ಈ ವೇಳೆ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದು ಸರಿಯೇ? ಇದಕ್ಕೆ  ಕಾನೂನಿನ ಮಾನ್ಯತೆಯಿದೆಯೆ? ಎಂದೂ ವಿನಯ್ ಪರ ವಕೀಲ ಎ.ಪಿ. ಸಿಂಗ್ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com