ಪಶ್ಚಿಮ ಬಂಗಾಳ: ಸ್ವಾಮಿ ವಿವೇಕಾನಂದ ವಿಗ್ರಹ ಧ್ವಂಸ, ಪೊಲೀಸ್ ತನಿಖೆ ಆರಂಭ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಸ್ವಾಮಿ ವಿವೇಕಾನಂದ ಪ್ರತಿಮೆ ಧ್ವಂಸ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ  ಕೈಗೊಂಡಿದ್ದಾರೆ.
ವಿವೇಕಾನಂದ ಪ್ರತಿಮೆ ಧ್ವಂಸ
ವಿವೇಕಾನಂದ ಪ್ರತಿಮೆ ಧ್ವಂಸ

ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಸ್ವಾಮಿ ವಿವೇಕಾನಂದ ಪ್ರತಿಮೆ ಧ್ವಂಸ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ  ಕೈಗೊಂಡಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯ ಬಾರಾಂಚ ಪ್ರದೇಶದಲ್ಲಿರುವ ಮಾ ಶಾರದಾ ನಾನಿ ದೇವಿ ಶಿಶು ಶಿಕ್ಷಾ ಕೇಂದ್ರದ ಸಮೀಪದಲ್ಲಿ ಈ ಪ್ರತಿಮೆ ಇದ್ದು, ಪ್ರತಿಮೆಯ ಕೈ ಮುರಿದುಬಿದ್ದಿದ್ದು, ಅದರ ಮುಖವನ್ನೂ ವಿರೂಪಗೊಳಿಸಿರುವ ವಿಡಿಯೋ, ಫೊಟೋಗಳು ವೈರಲ್ ಆಗಿವೆ.

ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಈ ಕೇಂದ್ರದವರೇ ಸ್ಥಾಪಿಸಿದ್ದರು. ಪ್ರತಿಮೆಗೆ ಹಾನಿ ಎಸಗಿದವರು ಯಾರು ಎಂಬುದು ಪತ್ತೆಯಾಗಿಲ್ಲ. ಈ ಸಂಬಂಧ ಬಾರಾಂಚ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಮೇ 14ರಂದು ಬಿಜೆಪಿಯ ಅಂದಿನ ಅಧ್ಯಕ್ಷ ಅಮಿತ್ ಷಾ ಅವರ ರೋಡ್ ಷೋ ಆಯೋಜನೆಗೊಂಡ ಸಂದರ್ಭದಲ್ಲಿ ಈಶ್ವರ ಚಂದ್ರ ವಿದ್ಯಾಸಾಗರರ ಪ್ರತಿಮೆಯನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com