ತೆಲಂಗಾಣ ನಕಲಿ ಆಧಾರ್ ಕಾರ್ಡ್ ವಿವಾದ: ಪರಿಶೀಲನೆ ಆರಂಭಿಸಿದ ಪೊಲೀಸರು, ಅಧಿಕಾರಿಗಳ ವರ್ತನೆಗೆ ಜನರ ಆಕ್ರೋಶ

ತೆಲಂಗಾಣದಲ್ಲಿ ನೆಲೆಯೂರಿರುವ 127 ಮಂದಿ ನಕಲಿ ಆಧಾರ್ ಕಾರ್ಡ್ ಗಳನ್ನು ಹೊಂದಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ಪೊಲೀಸರ ವರ್ತನೆಗೆ ಇದೀಗ ಜನರು ಆಕ್ರೋಶ ಹಾಗೂ ಟೀಕೆಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. 
ತೆಲಂಗಾಣ ನಕಲಿ ಆಧಾರ್ ಕಾರ್ಡ್ ವಿವಾದ: ಪರಿಶೀಲನೆ ಆರಂಭಿಸಿದ ಪೊಲೀಸರು, ಅಧಿಕಾರಿಗಳ ವರ್ತನೆಗೆ ಜನರ ಆಕ್ರೋಶ
ತೆಲಂಗಾಣ ನಕಲಿ ಆಧಾರ್ ಕಾರ್ಡ್ ವಿವಾದ: ಪರಿಶೀಲನೆ ಆರಂಭಿಸಿದ ಪೊಲೀಸರು, ಅಧಿಕಾರಿಗಳ ವರ್ತನೆಗೆ ಜನರ ಆಕ್ರೋಶ

ಹೈದರಾಬಾದ್: ತೆಲಂಗಾಣದಲ್ಲಿ ನೆಲೆಯೂರಿರುವ 127 ಮಂದಿ ನಕಲಿ ಆಧಾರ್ ಕಾರ್ಡ್ ಗಳನ್ನು ಹೊಂದಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ಪೊಲೀಸರ ವರ್ತನೆಗೆ ಇದೀಗ ಜನರು ಆಕ್ರೋಶ ಹಾಗೂ ಟೀಕೆಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. 

ನಕಲಿ ಆಧಾರ್ ಕಾರ್ಡ್ ಕುರಿತ ವಿವಾದ ಸೃಷ್ಟಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ  ವಿಶಿಷ್ಟ ಭಾರತೀಯ ಗುರುತು ಪ್ರಾಧಿಕಾರ (ಯುಐಡಿಎಐ) ಕೆಲ ದಿನಗಳ ಹಿಂದಷ್ಟೇ 127 ಮಂದಿಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ನಲ್ಲಿ ಪೌರತ್ವ ಸಾಬೀತುಪಡಿಸಲು ನೋಟಿಸ್ ಪಡೆದ ಎಲ್ಲಾ ನಿವಾಸಿಗಳು ಬಾಲಾಪುರದ ಅಧಿಕಾರಿಗಳ ಮುಂದೆ ಹಾಜರಾಗಬೇಕು. ನಂತರ ಭಾರತೀಯ ಕಾನೂನುಬದ್ಧ ಪ್ರದೇಶವನ್ನು ಪ್ರವೇಶಿಸಿದ್ದರ ಕುರಿತು ಮತ್ತು ನಿಮ್ಮ ವಾಸ್ತವ್ಯ ಮಾನ್ಯವಾಗಿದೆ ಎಂದು ಸಾಬೀತುಪಡಿಸಲು ದಾಖಲೆಗಳನ್ನು ನೀಡಬೇಕು. ಒಂದು ವೇಳೆ ನೋಟಿಸ್ ಪಡೆದ ನಿವಾಸಿಗಳು ಅಧಿಕಾರಿಗಳ ಮುಂದೆ ಹಾಜರಾಗದೇ ಹೋದಲ್ಲಿ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಇದರಂತೆ ಇದೀಗ ಪೊಲೀಸರು ಪರಿಶೀಲನಾ ಪ್ರಕ್ರಿಯೆ ಆರಂಭಿಸಿದ್ದು, ಪೊಲೀಸರ ವರ್ತನೆಗೆ ಇದೀಗ ಟೀಕೆಗಳು ವ್ಯಕ್ತವಾಗತೊಡಗಿದೆ. 

ಆಧಾರ್ ಕಾರ್ಡ್ ಗಳನ್ನು ಅಕ್ರಮವಾಗಿ ಪಡೆಯಲಾಗಿದೆ ಎಂದು ಪೊಲೀಸರು ಹೇಗೆ ನಿರ್ಧರಿಸುತ್ತಿದ್ದಾರೆ? ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆಯೇ? ಹೈದರಾಬಾದ್'ನ ಸ್ವತಂತ್ರ ಭದ್ರತಾ ಸಂಶೋಧಕ ಶ್ರೀನಿವಾಸ್ ಕೊಡಾಲಿಯವರು ಹೇಳಿದ್ದಾರೆ. 

ಪರಿಶೀಲನೆ ವೇಳೆ ಪೊಲೀಸರು ಒಬ್ಬೊಬ್ಬರ ಆಧಾರ್ ಗಳನ್ನು ಕೇಳುತ್ತಿದ್ದಾರೆ. ಕೇವಲ ಅದಷ್ಟೇ ಅಲ್ಲ, ರಾತ್ರಿ ವೇಳೆ ಸ್ಥಳಕ್ಕೆ ಯಾರೇ ಬಂದರೂ ಅವರನ್ನು ತಡೆಹಿಡಿದು ಅವರ ಆಧಾರ್ ಕಾರ್ಡ್ ಗಳನ್ನು ಕೇಳುತ್ತಿದ್ದಾರೆ. 

ಇತ್ತೀಚೆಗಷ್ಟೇ ತೆಲಂಗಾಣ ರಾಜ್ಯ ಪೊಲೀಸರು ಬಾಲಾಪುರದಲ್ಲಿ ನೆರೆಯೂರಿಸುವ ರೊಹಿಂಗ್ಯಾ ಜನರ ಶಿಬಿರಗಳಿಗೆ ಭೇಟಿ ನೀಡಿದ್ದು, ಅಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಜನರ ಬಳಿ ಆಧಾರ್ ಸೇರಿ ಇತರೆ ಗುರುತಿನ ಚೀಟಿನಗಳನ್ನು ಕೇಳಿದ್ದರೆಂದು ಹೇಳಲಾಗುತ್ತಿದೆ. 

ಕಲ ದಿನಗಳ ಹಿಂದಷ್ಟೇ ಎಐಎಂಐಎಂ ನಾಯಕ ಮಮತ್ತಾಜ್ ಅಹ್ಮದ್ ಖಾನ್ ಅವರು ವಿಡಿಯೋವೊಂದು ವೈರಲ್ ಆಗಿತ್ತು. ವಿಡಿಯೋದಲ್ಲಿ ಪೊಲೀಸರು ಶಕ್ಕರ್ ಗಂಜ್ ಪ್ರದೇಶದಲ್ಲಿ ತಪಾಸಣೆ ನಡೆಸುವ ಕಾರ್ಯದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿಯೇ ದೇಶದಾದ್ಯಂತ ಸಿಎಎ, ಎನ್ಆರ್'ಸಿ ಹಾಗೂ ಎನ್'ಪಿಆರ್ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿದ್ದವು. ವಾಹನಗಳ ಪರಿಶೀಲನೆ ವೇಳೆ ಪೊಲೀಸರು ದಾಖಲೆಗಳನ್ನು ಕೇಳಿದ್ದಾರೆ. ವಾಹನದ ಮಾಲೀಕತ್ವ ಪರಿಶೀಲನೆಗೆ ನೀವು ಆಧಾರ್ ಕಾರ್ಡ್ ಕೇಳುತ್ತಿದ್ದೀರಾ? ಬಿಟ್ಟುಬಿಡಿ, ಹೀಗೆ ನಡೆದುಕೊಳ್ಳಬೇಡಿ. ಎನ್ಆರ್'ಸಿ ಕುರಿತು ಈಗಾಗಲೇ ಜನರು ಗೊಂದಲ ಹಾಗೂ ಭೀತಿಗೊಳಗಾಗಿದ್ದಾರೆಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com