ಫೆ 29ರಂದು 26127 ವಿಶೇಷ ಚೇತನರಿಗೆ ಪ್ರಧಾನಿಯಿಂದ ಸಲಕರಣೆ ವಿರತಣೆ: ವಿಶ್ವದಾಖಲೆಯ ನಿರೀಕ್ಷೆಯಲ್ಲಿ ಭಾರತ

ಪ್ರಧಾನಿ ನರೇಂದ್ರ ಮೋದಿ ಇದೇ 29ರಂದು  ಸಂಗಮ ನಗರಿಗೆ ಭೇಟಿ ನೀಡಲಿದ್ದು, 26127 ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ಸಲಕರಣೆಗಳನ್ನು ವಿತರಿಸಲಿದ್ದಾರೆ.  ತ್ರಿವೇಣಿ ಸಂಗಮದ ಸಮೀಪವಿರುವ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿದ್ಧತೆಯ ಮೇಲ್ವಿಚಾರಣೆ ವಹಿಸಿದ್ದಾರೆ  ಅಲ್ಲದೆ ಈ ಬೃಹತ್ ಕಾರ್ಯಕ್ರಮ ವಿಶ್ವದಾಖಲೆ
ಪಿಎಂ, ಮೋದಿ
ಪಿಎಂ, ಮೋದಿ

ಪ್ರಯಾಗರಾಜ್: ಪ್ರಧಾನಿ ನರೇಂದ್ರ ಮೋದಿ ಇದೇ 29ರಂದು  ಸಂಗಮ ನಗರಿಗೆ ಭೇಟಿ ನೀಡಲಿದ್ದು, 26127 ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ಸಲಕರಣೆಗಳನ್ನು ವಿತರಿಸಲಿದ್ದಾರೆ.  ತ್ರಿವೇಣಿ ಸಂಗಮದ ಸಮೀಪವಿರುವ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿದ್ಧತೆಯ ಮೇಲ್ವಿಚಾರಣೆ ವಹಿಸಿದ್ದಾರೆ  ಅಲ್ಲದೆ ಈ ಬೃಹತ್ ಕಾರ್ಯಕ್ರಮ ವಿಶ್ವದಾಖಲೆಗೆ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ಕಾರ್ಯಕ್ರಮಕ್ಕೆ ಆಗಮಿಸುವ ಸಲುವಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಅಧಿಕಾರಿಗಳು ಫಲಾನುಭವಿಗಳ ಪಟ್ಟಿ ತಯಾರಿಸಿದ್ದು, 1381 ಬಸ್ ಗಳನ್ನು ನಿಯೋಜಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. 

ಫೆ 29ರಂದೇ ಪ್ರಧಾನಿ ಮೋದಿ ಚಿತ್ರಕೂಟದಲ್ಲಿ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com