ಸ್ವಾತಂತ್ರ್ಯವನ್ನು ಗೌರವ, ಜವಾಬ್ದಾರಿ ಅರಿತು ಬಳಸಬೇಕು: ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್

ಸ್ವಾತಂತ್ರ್ಯಎನ್ನುವುದು ಅಮೂಲ್ಯ ಕೊಡುಗೆಯಾಗಿದ್ದು ಅದನ್ನು ಎಲ್ಲರೂ  ಬಹಳ ಗೌರವ ಹಾಗೂ ಜವಾಬ್ದಾರಿಯುತವಾಗಿ ಪರಿಗಣಿಸಬೇಕು" ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ.

Published: 22nd February 2020 04:21 PM  |   Last Updated: 22nd February 2020 04:21 PM   |  A+A-


ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್

Posted By : Raghavendra Adiga
Source : IANS

ನವದೆಹಲಿ: ಸ್ವಾತಂತ್ರ್ಯಎನ್ನುವುದು ಅಮೂಲ್ಯ ಕೊಡುಗೆಯಾಗಿದ್ದು ಅದನ್ನು ಎಲ್ಲರೂ  ಬಹಳ ಗೌರವ ಹಾಗೂ ಜವಾಬ್ದಾರಿಯುತವಾಗಿ ಪರಿಗಣಿಸಬೇಕು" ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ.

ನೊಯ್ಡಾ ಶಹೀದ್ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿದ ನಂತರ ವಾರ್ಷಿಕ ಹುತಾತ್ಮರ ಸ್ಮರಣೆ ಸಮಾರಂಭದಲ್ಲಿ ಸಿಂಗ್ ಮಾತನಾಡಿದರು."ಈ ಗಂಭೀರ ಪರಿಸ್ಥಿಯಲ್ಲಿ ನಾನು ಈ ಧೈರ್ಯವಾನ್ ಸೈನಿಕರಿಗೆ ನಮಸ್ಕರಿಸಲು ಮತ್ತು ಹುತಾತ್ಮರ ಕುಟುಂಬಗಳಿಗೆ ಧೈರ್ಯ ತುಂಬಲು ಬಯಸುತ್ತೇನೆ. ಅವರು ಮಾಡಿದ ಸರ್ವೋಚ್ಚ ತ್ಯಾಗ ಯಾವಾಗಲೂ ಸ್ಮರಣೀಯವಾಗಿದೆ"

 'ನಮ್ಮ ನಾಳೆಗಾಗಿ ನೀವು ಇಂದು ತ್ಯಾಗ ಮಾಡಿರುವಿರಿ" ಎಂದು ಅವರು ಹೇಳಿದರು. ಭಾರತೀಯ ನೌಕಾಪಡೆಯ ಪರವಾಗಿ ಅವರು ಐಎನ್ಎಸ್ ಚೆನ್ನೈ ಮತ್ತು ಪಿ -15 ಎ ಗೈಡೆಡ್ ಕ್ಷಿಪಣಿ ನಾಶಕ ಮಾದರಿಯನ್ನು ಪ್ರಸ್ತುತಪಡಿಸಿದ್ದರು.

ಕಾರ್ಗಿಲ್ ಯುದ್ಧದ ನಂತರ  ನೋಯ್ಡಾ ನಿವಾಸಿಗಳು ನಿರ್ಮಿಸಿದ ಈ ಸ್ಮಾರಕವನ್ನು ಅಂದಿನ ಮೂರೂ ಸೇನಾ ಮುಖ್ಯಸ್ಥರು 2002 ರಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದ್ದರು.

"ಈ ಸ್ಮಾರಕವು ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ನಮಗೆ ನಿರಂತರವಾಗಿ ನೆನಪಿಸುತ್ತದೆ.ಮತ್ತು ಯಾವುದೇ ಬೆದರಿಕೆ ಬಂದಾಗ ಆ ಸ್ವಾತಂತ್ರ್ಯವನ್ನು ಹೆಚ್ಚಿನ ಬೆಲೆ ಕೊಟ್ಟು ರಕ್ಷಿಸಬೇಕಿದೆ.ಈ ಸ್ಮಾರಕವು ಒಂದು ಸಾಂಪ್ರದಾಯಿಕ ಹೆಗ್ಗುರುತಾಗಿದೆ ಮತ್ತುದೇಶದ ಪುರುಷ ಹಾಗೂ ಮಹಿಳೆಯರ ಪಾಲಿಗೆ  ಸ್ಫೂರ್ತಿಯ ಮೂಲವಾಗಿದೆ ; ಯುವಕರು ಹಾಗೂ ವಯಸ್ಕರಿಗೂ ಸ್ಪೂರ್ತಿಯನ್ನು ನೀಡಲಿದೆ"

ಈ ಸಂದರ್ಭದಲ್ಲಿ ಹಾಜರಿದ್ದ ಯುವಕರಿಗೆ, ಅವರು "ಸ್ವಾತಂತ್ರ್ಯವು ಒಂದು ಅಮೂಲ್ಯವಾದ ಉಡುಗೊರೆಯಾಗಿದ್ದು, ನೀವು ಬಹಳ ಗೌರವಮತ್ತು ಜವಾಬ್ದಾರಿಯುತ ಭಾವನೆಯಿಂದ ವರ್ತಿಸಬೇಕು. ಈ ಸ್ಮಾರಕದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಅನೇಕ ಯುವ ಜೀವನಗಳು ನಾವು ಸುರಕ್ಷಿತವಾಗಿರುವುದಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಡಿದ್ದಾರೆ" ಎಂದು ಸಂದೇಶ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp