ಗುಜರಾತ್ ಗೆ ಆಗಮಿಸಲಿರುವ ಟ್ರಂಪ್ ದಂಪತಿಗೆ ಆಹಾರ ಸಿದ್ಧಪಡಿಸುವ ಬಾಣಸಿಗ ಯಾರು ಗೊತ್ತಾ?

ನಾಳೆ ಅಹಮದಾಬಾದಿಗೆ ಆಗಮಿಸಲಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಾರ್ಚೂನ್ ಲ್ಯಾಂಡ್ ಮಾರ್ಕ್ ಹೊಟೇಲ್ ಬಾಣಸಿಗ ಸುರೇಶ್  ಖನ್ನಾ ಆಹಾರ ಸಿದ್ಧಪಡಿಸಲಿದ್ದಾರೆ.
ಟ್ರಂಪ್ ದಂಪತಿ, ಸುರೇಶ್ ಖನ್ನಾ
ಟ್ರಂಪ್ ದಂಪತಿ, ಸುರೇಶ್ ಖನ್ನಾ

ಅಹಮದಾಬಾದ್: ನಾಳೆ ಅಹಮದಾಬಾದಿಗೆ ಆಗಮಿಸಲಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಾರ್ಚೂನ್ ಲ್ಯಾಂಡ್ ಮಾರ್ಕ್ ಹೊಟೇಲ್ ಬಾಣಸಿಗ ಸುರೇಶ್  ಖನ್ನಾ ಆಹಾರ ಸಿದ್ಧಪಡಿಸಲಿದ್ದಾರೆ.

ಆಹಾರ ತಯಾರಿಕೆಗಾಗಿ ಪ್ರಸಿದ್ಧಿಯಾಗಿರುವ ಸುರೇಶ್ ಖನ್ನಾ ಈ ಹಿಂದೆ ಭಾರತಕ್ಕೆ ಭೇಟಿ ನೀಡಿರುವ ಅನೇಕ ವಿದೇಶಿ ಗಣ್ಯರಿಗೆ ಆಹಾರ ಸಿದ್ದಪಡಿಸಿದ್ದರು.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಮಾಜಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಮಂದಿಗೆ ಸುರೇಶ್ ಖನ್ನಾ ಆಹಾರ ಸಿದ್ಧಪಡಿಸಿದ್ದರು. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ , ಶಿಲ್ಪಾಶೆಟ್ಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡಾ ಸುರೇಶ್ ಖನ್ನಾ ಅವರ ಕೈ ರುಚಿ ಸವಿದಿದ್ದಾರೆ. ಖನ್ನಾ 1990ರಲ್ಲಿ ರಾಷ್ಟ್ರೀಯ ಪಾಕಶಾಲೆಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ಅವರಿಗೆ ಆಹಾರ ಸಿದ್ಧಪಡಿಸುವುದು ಬಹಳ ಸಂತೋಷದಾಯಕ ವಿಚಾರವಾಗಿದೆ. ಸರ್ಕಾರದಿಂದ ಸೂಚಿಸಲಾಗಿರುವ ಮನುವನ್ನು ಸಿದ್ಧಪಡಿಸುವಲ್ಲಿ ನಮ್ಮ ತಂಡ ನಿರತವಾಗಿದೆ. ಬೇಯಿಸಿದ ಆಹಾರವನ್ನು ನೀಡಲು ಯೋಚಿಸಿದೇವೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಖನ್ನಾ ತಿಳಿಸಿದ್ದಾರೆ. 

ಖಮಾನ್, ಕೋಸುಗಡ್ಡೆ ಸಮೋಸಾ, ಜೇನು ಅದ್ದಿದ  ಕುಕೀಸ್, ಬಹು-ಧಾನ್ಯ ರೊಟಿಸ್ ಮತ್ತು ಬೆಳೆಯಿಂದ ಮಾಡಿದ ಸ್ನ್ಯಾಕ್ಸ್ ಗಳನ್ನು ತಯಾರು ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡುತ್ತಿರುವ ಡೊನಾಲ್ಡ್ ಟ್ರಂಪ್ ಆಗಮನಕ್ಕಾಗಿ ಅಹಮದಾಬಾದ್ ಭರ್ಜರಿ ರೀತಿಯಲ್ಲಿ ಸಜ್ಜಾಗಿದೆ. ಮೊಟೆರಾ ಕ್ರೀಡಾಂಗಣದಲ್ಲ ನಡೆಯಲಿರುವ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೂ ಮುನ್ನ ಸಬರಮತಿ ಆಶ್ರಮಕ್ಕೆ ಟ್ರಂಪ್ ತೆರಳಲಿದ್ದಾರೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com