ಬಿಜೆಪಿ ಸೇರ್ಪಡೆಗೊಂಡ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ
ಕುಖ್ಯಾತ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಆಕೆಯ ಜೊತೆ ಇನ್ನೂ ಸಾವಿರ ಜನರ ಪಿಎಂಕೆ ಸೇರಿದಂತೆ ಹಲವು ಪಕ್ಷಗಳಿಂದ ನಿನ್ನೆ ಕೃಷ್ಣಗಿರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾದರು.
Published: 23rd February 2020 09:47 AM | Last Updated: 23rd February 2020 09:47 AM | A+A A-

ವಿದ್ಯಾರಾಣಿ
ಕೃಷ್ಣಗಿರಿ: ಕುಖ್ಯಾತ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಆಕೆಯ ಜೊತೆ ಇನ್ನೂ ಸಾವಿರ ಮಂದಿ ಪಿಎಂಕೆ ಸೇರಿದಂತೆ ಹಲವು ಪಕ್ಷಗಳಿಂದ ನಿನ್ನೆ ಕೃಷ್ಣಗಿರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ 29 ವರ್ಷದ ವಿದ್ಯಾ ರಾಣಿ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಯೋಜನೆಗಳಿಂದ ಪ್ರೇರಣೆಗೊಂಡು ಬಿಜೆಪಿ ಸೇರಿದ್ದೇನೆ ಎಂದರು.
ಎರಡು ವರ್ಷಗಳ ಹಿಂದೆ ಮಾಜಿ ಕೇಂದ್ರ ಸಚಿವ ಪೊನ್ ರಾಮಕೃಷ್ಣನ್ ಅವರು ನನಗೆ ಬಿಜೆಪಿ ಸೇರುವಂತೆ ಒತ್ತಾಯಿಸಿದರು. ಅಲ್ಲಿಂದ ಸೇರಬೇಕೊ, ಬೇಡವೊ ಎಂದು ಗೊಂದಲದಲ್ಲಿದ್ದೆ. ಈಗ ಕಾಲ ಕೂಡಿಬಂತು ಎಂದರು. ಜಾತಿ, ಧರ್ಮವನ್ನು ಮೀರಿ ಶಿಕ್ಷಣ ಮೂಲಕ ಜನರ ಉದ್ಧಾರಕ್ಕೆ ಶ್ರಮಿಸುವುದಾಗಿ ಹೇಳಿದರು.