ಮಹತ್ವದ ತೀರ್ಪುಗಳನ್ನು ನೀಡಿದ ಸುಪ್ರೀಂಕೋರ್ಟ್ ಪ್ರಶಂಸೆಗೆ ಅರ್ಹ: ರಾಮನಾಥ್ ಕೋವಿಂದ್

ಸಾಮಾನ್ಯ ಜನರಿಗೆ ನ್ಯಾಯವನ್ನು ತಲುಪಿಸುವಂತಹ ಸುಧಾರಣೆಗಳನ್ನು ಅಳವಡಿಸಿಕೊಂಡ ಸುಪ್ರೀಂಕೋರ್ಟ್ ಅಭಿನಂದನೆಗೆ ಅರ್ಹ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್

ನವದೆಹಲಿ: ಸಾಮಾನ್ಯ ಜನರಿಗೆ ನ್ಯಾಯವನ್ನು ತಲುಪಿಸುವಂತಹ ಸುಧಾರಣೆಗಳನ್ನು ಅಳವಡಿಸಿಕೊಂಡ ಸುಪ್ರೀಂಕೋರ್ಟ್ ಅಭಿನಂದನೆಗೆ ಅರ್ಹ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಈ ನ್ಯಾಯಾಲಯ ನೀಡಿರುವ ಮಹತ್ವದ ತೀರ್ಪುಗಳು ದೇಶದ ಕಾನೂನು ಮತ್ತು ಸಾಂವಿಧಾನಿಕ ರೂಪುರೇಷೆಯನ್ನು ಬಲಗೊಳಿಸಿದೆ. ಇದರ ನ್ಯಾಯಮೂರ್ತಿಗಳು ಮತ್ತು ವಕೀಲರ ತಂಡ ಕಾನೂನು ಪರಿಣತಿ ಮತ್ತು ಜ್ಞಾನಕ್ಕಾಗಿ ಹೆಸರುವಾಸಿಯಾಗಿದೆ. ನ್ಯಾಯದಾನ ವ್ಯವಸ್ಥೆಗೆ ಸಕಾರಾತ್ಮಕ ಪರಿಣಾಮ ಬೀರುವಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಪ್ರೀಂಕೋರ್ಟ್ ಮೌನ ಕ್ರಾಂತಿ ಮಾಡಿದೆ ಎಂದರು.

ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ. ಇತ್ತೀಚಿನ ವರ್ಷಗಳಲ್ಲಿ ಜಗತ್ತು ಅತಿ ವೇಗದಲ್ಲಿ ಬದಲಾಗುತ್ತಿದೆ. ಇಂತಹ ಪರಿವರ್ತನೆಯ ಕಾಲದಲ್ಲಿ ನ್ಯಾಯಾಂಗ ಕೂಡ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸುವ ತುರ್ತು ಅಗತ್ಯವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com