ವಿಶ್ವಸುಂದರಿ ಸ್ಪರ್ಧೆ: ಭಾರತ ಪ್ರತಿನಿಧಿಸಲಿರುವ ಮಂಗಳೂರು ಬೆಡಗಿ

ಮಂಗಳೂರುಪ ಮೂಲದ ಅಡ್ಲೀನ್ ಕ್ಯಾಸ್ಟಲಿನೋ ಅವರು 2020ರ ಲಿವಾ ಮಿಸ್ ಡೀವಾ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆ. ಆ ಮೂಲಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. 
ವಿಶ್ವಸುಂದರಿ ಸ್ಪರ್ಧೆ: ಭಾರತ ಪ್ರತಿನಿಧಿಸಲಿರುವ ಮಂಗಳೂರು ಬೆಡಗಿ
ವಿಶ್ವಸುಂದರಿ ಸ್ಪರ್ಧೆ: ಭಾರತ ಪ್ರತಿನಿಧಿಸಲಿರುವ ಮಂಗಳೂರು ಬೆಡಗಿ

ಮುಂಬೈ: ಮಂಗಳೂರುಪ ಮೂಲದ ಅಡ್ಲೀನ್ ಕ್ಯಾಸ್ಟಲಿನೋ ಅವರು 2020ರ ಲಿವಾ ಮಿಸ್ ಡೀವಾ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆ. ಆ ಮೂಲಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. 

ಮಹಾರಾಷ್ಟ್ರದ ವೈಆರ್'ಎಫ್ ಸ್ಟುಡಿಯೋದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಳೆದ ಆವೃತ್ತಿ ವಿಜೇತೆ ವರ್ತಿಕಾ ಸಿಂಗ್ ಅವರು ಕಿರೀಟ ತೊಡಿಸುವ ಮೂಲಕ ಕ್ಯಾಸ್ಟಲಿನೋ ಅವರನ್ನು ವಿಜಯಿ ಎಂದು ಘೋಷಣೆ ಮಾಡಿದರು. 

ಪುಣೆಯ ನೋಹಾ ಜೈಸ್ವಾಲ್ ಮಿಸ್ ಡೀವಾ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಕ್ಯಾಸ್ಟಲಿನೋಗೆ ಪ್ರಬಲ ಪೈಪೋಟಿ ನೀಡಿದ ಜಬಲ್ಪುರದ ಆವೃತಿ ಚೌಧರಿ ಅವರು ಮಿಸ್ ಡೀವಾ ಸುಪ್ರಾ ನ್ಯಾಶನಲ್ ಕಿರೀಟ ಗೆದ್ದುಕೊಂಡರು. ಅವರು ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿಗೆ ಭಾರತದ ಸ್ಪರ್ಧಿಯಾಗಲಿದ್ದಾರೆ. 

ಬೆಂಗಳೂರು, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ಹತ್ತು ನಗರಗಳಲ್ಲಿ ನಡೆದ ಆಡಿಶನ್ ನಲ್ಲಿ ಆಯ್ಕೆಯಾಗಿ 2019ರ ಡಿಸೆಂಬರ್ ನಲ್ಲಿ ಮುಂಬೈನಲ್ಲಿ ಆಯ್ಕೆಯಾದ 20 ಫೈನಲಿಸ್ಟ್ ಗಳ ಪೈಕಿ ಕ್ಯಾಸ್ಟಲಿನೋ ಒಬ್ಬರಾಗಿದ್ದರು. ಈಗ 20 ಮಂದಿಯನ್ನು ಮಣಿಸಿದ್ದು, ವಿಶ್ವಸುಂದರಿ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com